ಹೋರಾಟವೇ ಹೀಗೆ .. ಕವನ

ಹೋರಾಟವೇ ಹೀಗೆ .. ಕವನ

ಬರಹ

ಕವಿತೆಯನ್ನು ಓದುವ ಮೊದಲು.... ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದು ಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ. ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತಿರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮುಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಭಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ‍ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದು ಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದವೆ,ಜೈಲುವಾಸ ಅಷ್ತ್ಟೆ ನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.
ಈಗ ಓದಿ......

ಹೊರಾಟವೇ ಹೀಗೆ
==============

ಹೋರಾಟವೇ ಹೀಗೆ ..
ಬದುಕಿನ ಕತ್ತಲೆ ಓಡಿಸಿ,
ನ್ಯಾಯದ ಜ್ಯೋತಿಯ ಬೆಳೆಗಿಸಿ,
ಅನುಭವಿಸುವರು ಸೆರೆವಾಸ,
ಇವರ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಉಪವಾಸ |೧|

ಹೋರಾಟವೇ ಹೀಗೆ ..
ಮನೆ ಮಕ್ಕಳನ್ನು ಮರೆತು,
ದುಃಖ ದುಮ್ಮಾನಗಳಲ್ಲಿ ಬೆರೆತು,
ತುಳಿಯುವರು ಕಲ್ಲುಮುಳ್ಳಿನ ಹಾದಿ,
ಎಲ್ಲಾ ಹೋರಾಟಗಳಿಗ ತ್ಯಾಗವೇ ಬುನಾದಿ |೨|

ಹೋರಾಟವೇ ಹೀಗೆ ..
ತಣ್ಣಗೆ ಕೊಣೆಯಲ್ಲಿ ಕುಳಿತು,
ಬುದ್ಧಿಜೀವಿಗಳು ಆಡುವರು ನೂರೆಂಟು ಮಾತು,
ತೊಡಿ ಚುಚ್ಚು ಮಾತಿನ ಗುಂಡಿ.
ತಪ್ಪಿಸುವರು ಹೋರಾಟದ ಬಂಡಿ |೩|

ಹೋರಾಟವೇ ಹೀಗೆ ..
ಲಾಠಿ ಎಟುಗಳ ಲೆಕ್ಕಿಸದೆ,
ಹರಿಯುವ ನೆತ್ತರಿಗೆ ದೃತಿಗೆಡದೆ,
ಯಾರದೊ ಹಿತಕ್ಕೆ ಸವಿಸುತ್ತ ಬಾಳು,
ಅನುಭವಿಸುವರು ದಿನವೂ ಗೊಳು |೫|

ಹೋರಾಟವೇ ಹೀಗೆ ..
ಇವರ ನೊವ ಕೇಳುವರಿಲ್ಲ,
ಇವರ ಬೆವರ ಒರೆಸುವರಿಲ್ಲ,
ಆದರೂ ಕಟ್ಟುವರು ನಾಳಿನ ಕನಸಿನ ಅರಮನೆ,
ಇವರ ನೊವುಗಳಿಗೆ ಎಲ್ಲಿದೆ ಕೊನೆ. |೬|