ಎಂಧಿರನ್ ಪ್ರಚಾರಕ್ಕಿಳಿದ ಕನ್ನಡ ಮಾಧ್ಯಮಗಳು

To prevent automated spam submissions leave this field empty.

 

ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ.
ಇದೆಲ್ಲಾದರ ನಡುವೆ ನಮ್ಮ ಕನ್ನಡ ಟಿ.ವಿ ವಾಹಿನಿಗಳು, ದಿನಪತ್ರಿಕೆಗಳು, ವಾರ ಪತ್ರಿಕೆಗಳು ಎಂಧಿರನ್ ಚಿತ್ರದ ಬಗ್ಗೆ ಆ ಚಿತ್ರದ ನಟರು, ವಿತರಕರು, ನಿರ್ಮಾಪಕರಿಗಿಂತ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.
ಎಂಧಿರನ್ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವವರೊಬ್ಬರ ಒಡೆತನದಲ್ಲಿರುವ ಕನ್ನಡ ವಾಹಿನಿಯೊಂದರಲ್ಲಿ ತಾವು ಕನ್ನಡ ವಾಹಿನಿಯೆಂಬುದನ್ನು ಮರೆತು ಭಾನುವಾರ ೧ ಘಂಟೆಯನ್ನು ಚಿತ್ರದ ಪ್ರಚಾರಕ್ಕೆ ಮೀಸಲಿಟ್ಟಿದ್ದನ್ನು ನೋಡಿ ಅಸಹ್ಯವಾಯಿತು. ಇದರ ಜೊತೆಗೆ ಇನ್ನುಳಿದ ಕನ್ನಡ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ಕನ್ನಡ ರೇಡಿಯೊದಲ್ಲಿ ಈ ಚಿತ್ರದ ಅತಿರಂಜಿತ ಪ್ರಚಾರ ಮಾಡುತ್ತಿದ್ದಾರೆ. 
ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ರಜನಿಕಾಂತ್ ಚಿತ್ರ ಬಿಡುಗಡೆ ಆದಾಗಲೆಲ್ಲಾ ಮುಖಪುಟದಲ್ಲಿ ಅವರ ಮುಖಸ್ತುತಿ ಮಾಡಿ ಅವರ ಚಿತ್ರಗಳ ಗುಣಗಾನ ಮಾಡುವ ಅವಶ್ಯಕತೆ ಏನಿದೆ?
ಅಲ್ಲಾ ಸ್ವಾಮಿ, ಕನ್ನಡದ ವಾಹಿನಿಗಳಾಗಿ, ಕನ್ನಡ ಪ್ರೇಕ್ಷಕರಿಗೆ ಬೇಕಿಲ್ಲದ ಕಾರ್ಯಕ್ರಮ ತೋರ್ಸಿ ಅಂತ ಹೇಳಿದವರು ಯಾರು?
ನಮಗೆ ಬೇಕಿರೋ ಕಾರ್ಯಕ್ರಮವನ್ನು ಇವರು ಪ್ರಸಾರ ಮಾಡಬೇಕಾ ಅಥವಾ ಇವರು ಪ್ರಸಾರ ಮಾಡೋ ಕಾರ್ಯಕ್ರಮಾನ ನಾವು ನೋಡಬೇಕಾ?
ಇವರು ಪ್ರಸಾರ ಮಾಡಿದನ್ನೆಲ್ಲಾ ನೋಡಕ್ಕೆ, ಬರೆದಿದನ್ನೆಲ್ಲಾ ಓದಕ್ಕೆ, ಹೇಳಿದ್ದನ್ನೆಲಾ ಕೇಳಕ್ಕೆ ಕನ್ನಡ ನೋಡುಗರನ್ನ, ಓದುಗರನ್ನ, ಕೇಳುಗರನ್ನ ಏನ್ ಆಟದ ಗೊಂಬೆಗಳು ಅಂದುಕೊಂಡಿದ್ದಾರಾ?  Have they taken kannadiga consumers for granted
ಗೆಳೆಯರೇ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮಗೆ ಸಾಧ್ಯವಾದ ರೀತಿಯಲ್ಲೆಲಾ ಪ್ರತಿಭಟಿಸೋಣ.
ಈ ವಾಹಿನಿಗಳಿಗೆ ಮತ್ತು ಪತ್ರಿಕೆಗಳಿಗೆ ಪತ್ರಗಳನ್ನು ಬರೆಯೋಣ. ಒಟ್ಟಿನಲ್ಲಿ ನಮ್ಮ ಮೇಲೆ ಆಗುತ್ತಿರುವ ಈ ಸಂಸ್ಕ್ರುತಿಕ ಧಾಳಿಯನ್ನು ನಿಲ್ಲಿಸೋಣ.. 

 

ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ.ಇದೆಲ್ಲಾದರ ನಡುವೆ ನಮ್ಮ ಕನ್ನಡ ಟಿ.ವಿ ವಾಹಿನಿಗಳು, ದಿನಪತ್ರಿಕೆಗಳು, ವಾರ ಪತ್ರಿಕೆಗಳು ಎಂಧಿರನ್ ಚಿತ್ರದ ಬಗ್ಗೆ ಆ ಚಿತ್ರದ ನಟರು, ವಿತರಕರು, ನಿರ್ಮಾಪಕರಿಗಿಂತ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.


ಎಂಧಿರನ್ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿರುವವರೊಬ್ಬರ ಒಡೆತನದಲ್ಲಿರುವ ಕನ್ನಡ ವಾಹಿನಿಯೊಂದರಲ್ಲಿ ತಾವು ಕನ್ನಡ ವಾಹಿನಿಯೆಂಬುದನ್ನು ಮರೆತು ಭಾನುವಾರ ೧ ಘಂಟೆಯನ್ನು ಚಿತ್ರದ ಪ್ರಚಾರಕ್ಕೆ ಮೀಸಲಿಟ್ಟಿದ್ದನ್ನು ನೋಡಿ ಅಸಹ್ಯವಾಯಿತು. ಇದರ ಜೊತೆಗೆ ಇನ್ನುಳಿದ ಕನ್ನಡ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ಕನ್ನಡ ರೇಡಿಯೊದಲ್ಲಿ ಈ ಚಿತ್ರದ ಅತಿರಂಜಿತ ಪ್ರಚಾರ ಮಾಡುತ್ತಿದ್ದಾರೆ. 
ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ರಜನಿಕಾಂತ್ ಚಿತ್ರ ಬಿಡುಗಡೆ ಆದಾಗಲೆಲ್ಲಾ ಮುಖಪುಟದಲ್ಲಿ ಅವರ ಮುಖಸ್ತುತಿ ಮಾಡಿ ಅವರ ಚಿತ್ರಗಳ ಗುಣಗಾನ ಮಾಡುವ ಅವಶ್ಯಕತೆ ಏನಿದೆ?


ಅಲ್ಲಾ ಸ್ವಾಮಿ, ಕನ್ನಡದ ವಾಹಿನಿಗಳಾಗಿ, ಕನ್ನಡ ಪ್ರೇಕ್ಷಕರಿಗೆ ಬೇಕಿಲ್ಲದ ಕಾರ್ಯಕ್ರಮ ತೋರ್ಸಿ ಅಂತ ಹೇಳಿದವರು ಯಾರು?ನಮಗೆ ಬೇಕಿರೋ ಕಾರ್ಯಕ್ರಮವನ್ನು ಇವರು ಪ್ರಸಾರ ಮಾಡಬೇಕಾ ಅಥವಾ ಇವರು ಪ್ರಸಾರ ಮಾಡೋ ಕಾರ್ಯಕ್ರಮಾನ ನಾವು ನೋಡಬೇಕಾ?ಇವರು ಪ್ರಸಾರ ಮಾಡಿದನ್ನೆಲ್ಲಾ ನೋಡಕ್ಕೆ, ಬರೆದಿದನ್ನೆಲ್ಲಾ ಓದಕ್ಕೆ, ಹೇಳಿದ್ದನ್ನೆಲಾ ಕೇಳಕ್ಕೆ ಕನ್ನಡ ನೋಡುಗರನ್ನ, ಓದುಗರನ್ನ, ಕೇಳುಗರನ್ನ ಏನ್ ಆಟದ ಗೊಂಬೆಗಳು ಅಂದುಕೊಂಡಿದ್ದಾರಾ?  Have they taken kannadiga consumers for granted.

 

ಗೆಳೆಯರೇ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮಗೆ ಸಾಧ್ಯವಾದ ರೀತಿಯಲ್ಲೆಲಾ ಪ್ರತಿಭಟಿಸೋಣ.ಈ ವಾಹಿನಿಗಳಿಗೆ ಮತ್ತು ಪತ್ರಿಕೆಗಳಿಗೆ ಪತ್ರಗಳನ್ನು ಬರೆಯೋಣ. ಒಟ್ಟಿನಲ್ಲಿ ನಮ್ಮ ಮೇಲೆ ಆಗುತ್ತಿರುವ ಈ ಸಂಸ್ಕ್ರುತಿಕ ಧಾಳಿಯನ್ನು ನಿಲ್ಲಿಸೋಣ.. 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಂದು ಘಂಟೆಯ ಕಾರ್ಯಕ್ರಮವನ್ನು ಪೂರ್ತಿಯಾಗಿ ವೀಕ್ಷಿಸಿದಿರಾ ನೀವು? ನಮಗೆ ಅನಗತ್ಯ ಎಂದು ಕಂಡ ಆ ಕಾರ್ಯಕ್ರಮವನ್ನು ವೀಕ್ಷಿಸಿಲ್ಲ ನಾವು :)

ಸುರೇಶ್, ಅನಗತ್ಯವಾದ ಕಾರ್ಯಕ್ರಮಗಳನ್ನು ನೋಡದಿರುವುದು ಎಲ್ಲರೂ ಮಾಡುವ ಕೆಲಸವೇ. "ನಾವು ಕನ್ನಡಿಗರಿಗೆ ಅನಗತ್ಯವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಡಿ" ಎಂದು ಕನ್ನಡ-ಮಾಧ್ಯಮದವರಿಗೆ ಹೇಳಬೇಕಾದುದು ನಮ್ಮ ಜವಾಬ್ದಾರಿಯೇ ಎಂದು ನಂಬಿದ್ದೇನೆ. -- ಪ್ರಿಯಾಂಕ್

ಸರಿ. ನಿಮ್ಮ ನಂಬುಗೆಯನ್ನು, ಅಪನಂಬಿಕೆ ಯಾ ಮೂಢನಂಬಿಕೆ ಎಂದು ನಾನನ್ನುತ್ತಿಲ್ಲ. ನಿಮ್ಮ ನಂಬಿಕೆ ಯಾವುದರಲ್ಲಿದೆ ಎನ್ನುವುದು ನನಗೆ ಅನಗತ್ಯ ಕೂಡ. ನೀವು ಯಾವ ರೀತಿಯಲ್ಲಿ ಜವಾಬ್ದಾರಿಯನ್ನು ಪ್ರದರ್ಶನ ಮಾಡುತ್ತೀರೆನ್ನುವುದು ನಿಮಗೆ ಬಿಟ್ಟ ವಿಚಾರ. ಹಾಗೆಯೇ ನಾನು ಏನು ಮಾಡುತ್ತೇನೆ ಅನ್ನುವುದು ನನಗೆ ಬಿಟ್ಟ ವಿಚಾರ. ಬರಹಗಾರರಾದ ಈ ಕನ್ನಡಿಗರನ್ನು "ನೀವು ಪೂರ್ತಿ ಕಾರ್ಯಕ್ರಮ ನೋಡಿದಿರಾ?" ಎಂದು ಕೇಳಿದ್ದೇ ಮಹಾಪರಾಧವಾಯ್ತು ಎನ್ನುವ ರೀತಿಯಲ್ಲಿ, ನಾನು ನಾನೇನು ಮಾಡಿದೆನೆಂದು ಹೇಳಿದ ಕೂಡಲೇ, ಉರಿಹತ್ತಿಕೊಂಡವರಂತೆ ನನಗೆ ಉತ್ತರಿಸುವ ಕಾಳಜಿ ತೋರಿದ ನೀವು, ಮೂಲ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ತೊರಿಸದೇ ಸುಮ್ಮನಾದಿರೇಕೆ? ನಮ್ಮ ನಮ್ಮ ಜವಾಬ್ದಾರಿಯನ್ನು, ನಾವು ನಾವು, ಯಾವುದೇ ಪ್ರದರ್ಶನವಿಲ್ಲದೇ, ಹೊಗಳಿಕೆಯನ್ನೂ ಬಯಸದೇ, ನಿರ್ವಹಿಸುತ್ತಾ ಬಂದರೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಾದ್ಯ ಇದೆ. ವೀಕ್ಷಕರು ಕಡಿಮೆಯಾದರೆ, ಈ ವ್ಯಾಪಾರೀ ಮನೋಭಾವದ ವಾಹಿನಿಗಳು ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸ್ತಾರೆ. ಆದರೆ, ಎಂದಿರನ್ ಎನ್ನುವ ಚಿತ್ರವನ್ನು ಇಲ್ಲಿ ೨೪ ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡಿಸಿ, ಎಲ್ಲಾ ಕಡೆಯೂ ಪೂರ್ತಿ ಟಿಕೇಟುಗಳು ಮಾರಾಟವಾಗುವಂತೆ ಸಹಕರಿಸಿರುವ ಕನ್ನಡ ಜನಕೋಟಿಯ ಬಗ್ಗೆ ಏನು ಹೇಳ್ತೀರಿ ನೀವು?

ಜನಕೋಟಿ ಸಹಕರಿಸಿದರು ಅಂತ ನೀವು ಹೇಗೆ ಹೇಳುತ್ತೀರಿ? ನೀವು ಎಂದಿರನ್ ಟಿಕೆಟ್ ಮಾರಾಟ ಮಾಡಿಸಿಕೊಟ್ಟಿರಾ? ಅಥವಾ ನೀವು ಕನ್ನಡ ಜನಕೋಟಿಯಲ್ಲಿ ಸೇರುವುದಿಲ್ವಾ? >>ವೀಕ್ಷಕರು ಕಡಿಮೆಯಾದರೆ, ಈ ವ್ಯಾಪಾರೀ ಮನೋಭಾವದ ವಾಹಿನಿಗಳು ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸ್ತಾರೆ. >>> ಈಗ ವೀಕ್ಷಕರು ಬಯಸಿದ್ದಾರೆ ಅಂತ ಅವರು ಶುರುಮಾಡಿದ್ದಾರಾ? ಯಾರು ಬಯಸಿದ್ದರು? ಆ ಕಾರ್ಯಕ್ರಮ ಹಾಕದಿದ್ದರೆ ನೀವೇನಾದರೂ ಬೇಜಾರು ಮಾಡಿಕೊಂಡು ಆ ವಾಹಿನಿ ನೋಡುವುದು ಬಿಡುತ್ತಿದ್ದ್ರಾ? >>>ನಮ್ಮ ನಮ್ಮ ಜವಾಬ್ದಾರಿಯನ್ನು, ನಾವು ನಾವು, ಯಾವುದೇ ಪ್ರದರ್ಶನವಿಲ್ಲದೇ, ಹೊಗಳಿಕೆಯನ್ನೂ ಬಯಸದೇ, ನಿರ್ವಹಿಸುತ್ತಾ ಬಂದರೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಾದ್ಯ ಇದೆ. >>>> ಇದನ್ನು ತಾವು ಮಾಡಬಹುದಲ್ವಾ? ಮಾಡುತ್ತಿದ್ದರೆ ಮತ್ಯಾಕೆ ಈ ಉರಿಹತ್ತಿಸುವ ಕೆಲಸ?

ಅಸು ಹೆಗಡೆಯವರೇ, ನಾನು ಪೂರ್ತಿ ಕಾರ್ಯಕ್ರಮ ವೀಕ್ಷಿಸಲಿಲ್ಲ. ಸುಮಾರು ೩೦ ನಿಮಿಷ ನೋಡಿದೆ. ನಿಮಗೆ ಅನಗತ್ಯ ಅಂತ ನೀವು ಕಾರ್ಯಕ್ರಮ ನೋಡಲಿಲ್ಲ ಎಂದಿರಿ. ಆದರೆ ನಮಗೆ ನೋಡಲಿಕ್ಕೆ ಇರುವ ಕನ್ನಡ ವಾಹಿನಿಗಳಲ್ಲಿ ಕನ್ನಡೇತರ ಚಿತ್ರದ ಬಗ್ಗೆ ಪ್ರಚಾರ ಮಾಡುವುದನ್ನು ಕನ್ನಡ ಗ್ರಾಹಕರು ಸಹಿಸಿಕೊಲ್ಲಬೇಕೆ ಅನ್ನುವುದು ನಾನು ತೆಗೆದಿರುವ ವಿಚಾರ. ತಮಿಳು ಚಿತ್ರ ಪ್ರಚಾರ ಮಾಡಲಿಕ್ಕೆ ತಮಿಳು ವಾಹಿನಿಗಲಿಲ್ಲವೇ? ನನ್ನ ಪ್ರಕಾರ ವೀಕ್ಷಕರು ಕಡಿಮೆ ಆಗುವುದರಿಂದ ಸಮಸ್ಯೆ ಬಗೆಹರೆಯುವುದಿಲ್ಲ. ವಿಕ್ಷಕರಿಗೆ ಬೇಕಾದನ್ನು ಪ್ರಸಾರ ಮಾಡಿ ಎಂದು ಒತ್ತಾಯಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರೆಯಿತ್ತದೆ. ಇನ್ನು ಎಂಧಿರನ್ ಚಿತ್ರ ನೋಡುತ್ತಿರುವ ಕನ್ನಡ ಜನಕೋಟಿಯ ವಿಚಾರ. ವಯಕ್ತಿಕವಾಗಿ ಯಾರು ಏನನ್ನಾದರೂ ನೋಡುವ ಸ್ವಾತಂತ್ರ ಅವರಿಗಿರುತ್ತದೆ. ಆದರೆ ಒಂದು ಜನಾಂಗವನ್ನು ಮುಂದೆ ತೆಗೆದುಕೊಂಡು ಹೋಗಬೇಕಾದ ಜವಾಬ್ಧಾರಿಯುತ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಆದರೆ ಮಾಧ್ಯಮಗಳೇ ಈ ರೀತಿ ದಾರಿ ತಪ್ಪಿ ನಡೆದರೆ, ಅವರನ್ನು ಎಚ್ಚರಿಸಿ ಸರಿಪಡಿಸಬೇಕಾದದ್ದು ನಮ್ಮ ಕರ್ತವ್ಯವಲ್ಲವೇ?

<<ತಮಿಳು ಚಿತ್ರ ಪ್ರಚಾರ ಮಾಡಲಿಕ್ಕೆ ತಮಿಳು ವಾಹಿನಿಗಲಿಲ್ಲವೇ?>> ಇಲ್ಲೇ ಆಗಿರುವುದು ಅಚಾತುರ್ಯ. ಕಸ್ತೂರಿ ಬಿಟ್ಟರೆ ಕನ್ನಡದ್ದು ಅಂತಾ ಹೇಳಿಕೊಳ್ಳೋದಕ್ಕೆ ಒಂದೂ ವಾಹಿನಿ ಇಲ್ಲ. ಬೇರೆ ಭಾಷೆಯವರ ಒಡೆತನದಲ್ಲಿರೋ ವಾಹಿನಿಗಳಲ್ಲಿ ಅವರಿಗೆ ಬೇಕಾದ ಕಾರ್ಯಕ್ರಮಗಳನ್ನ ವೀಕ್ಷಕರಿಗೆ ಬೇಕಾಗಿರೋ ಕಾರ್ಯಕ್ರಮ ಅನ್ನೋ ರೀತಿಯಲ್ಲಿ ಪ್ರಸಾರ ಮಾಡುತ್ತಾರೆ. ನಮ್ಮದೇ ಆದ ವಾಹಿನಿಗಳು ಯಶಸ್ವಿಯಾಗೋವರೆಗೆ ಈ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆ ದಿನ ಯಾವಾಗ ಬರುತ್ತೋ ಗೊತ್ತಿಲ್ಲ. ಕೇರಳ, ತಮಿಳುನಾಡುಗಳಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಗಳು, ಪಕ್ಷಗಳು (ರಾಷ್ಟ್ರೀಯ/ಸ್ಥಳೀಯ) ತಮ್ಮದೇ ಆದ ವಾಹಿನಿಗಳನ್ನು ಯಶಸ್ವಿಯಾಗಿ ನಡೆಸುತ್ತಾ ಇದ್ದಾರೆ. ಆದರೆ ನಮ್ಮಲ್ಲಿ? ಹೇಳಿಕೊಳ್ಳೋದಕ್ಕೂ ಅಂಥಾ ಒಂದೂ ಬೆಳವಣಿಗೆ ಆಗಿಲ್ಲ, ಇತ್ತೀಚೆಗೆ ಬಂದ ಕಸ್ತೂರಿ ಬಿಟ್ಟರೆ.

ಸುರೇಶ್, ನನ್ನ ಪ್ರತಿಕ್ರಿಯೆಯಲ್ಲಿ ನಿಮ್ಮನ್ನು ನೋಯಿಸುವ ಯಾವುದೇ ಉದ್ದೇಶ ಇರಲಿಲ್ಲ. ನಿಮಗೆ ಹಾಗೆ ಕಾಣಿಸಿದ್ದರೆ ಕ್ಷಮೆಯಿರಲಿ. ಕಾರ್ಯಕ್ರಮ ನೋಡದೇ ಇರುವುದು ಈ ಸಮಸ್ಯೆಗೆ ಪರಿಹಾರವಲ್ಲ ಎಂಬುದು ನನ್ನ ನಂಬಿಕೆಯಾಗಿದೆ. ಕನ್ನಡದ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಸಂಪದಿಗರೆಲ್ಲರೂ, ಮಾಧ್ಯಮಗಳಿಗೆ "ಸಾಕು ನಿಲ್ಲಿಸಿ ಪ್ರಚಾರ" ಎಂದು ಹೇಳಿದರೆ, ಮಾಧ್ಯಮಗಳು ತಿದ್ದುಕೊಳ್ಳಬಹುದು. ಹಾಗೆ ಮಾಡುವುದು ನಮ್ಮ ಜವಾಬ್ದಾರಿ ಕೂಡ ಆಗಿದೆ. ಇದನ್ನೇ ನನ್ನ ಮೊದಲಿನ ಪ್ರತಿಕ್ರಿಯೆಯಲ್ಲೂ ಹೇಳಲು ಪ್ರಯತ್ನಿಸಿದ್ದೇನೆ. "ಎಲ್ಲಾ ಕಡೆಯೂ ಪೂರ್ತಿ ಟಿಕೇಟುಗಳು ಮಾರಾಟವಾಗುವಂತೆ ಸಹಕರಿಸಿರುವ ಕನ್ನಡ ಜನಕೋಟಿ ಬಗ್ಗೆ ಏನು ಹೇಳ್ತೀರಿ" ಅಂತ ನೀವು ಕೇಳಿದ್ದೀರ. ನಿಮ್ಮ ಪ್ರಶ್ನೆ ನನಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ. ಸಾಧ್ಯವಾದಲ್ಲಿ ವಿವರಿಸಿ. ೨೪ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ತಡೆಯಬೇಕಿತ್ತೋ? ಅಥವಾ ಎಲ್ಲಾ ಕಡೆ ಪೂರ್ತಿ ಟಿಕೇಟುಗಳು ಮಾರಾಟವಾಗದಂತೆ ಕನ್ನಡಿಗರು ತಡೆಯಬೇಕಿತ್ತೋ? -- ಪ್ರಿಯಾಂಕ್

<<೨೪ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಂತೆ ತಡೆಯಬೇಕಿತ್ತೋ? ಅಥವಾ ಎಲ್ಲಾ ಕಡೆ ಪೂರ್ತಿ ಟಿಕೇಟುಗಳು ಮಾರಾಟವಾಗದಂತೆ ಕನ್ನಡಿಗರು ತಡೆಯಬೇಕಿತ್ತೋ?>> ಎರಡು ಕಾರ್ಯಗಳೂ ನಡೆದಿರುವುದೂ ಕನ್ನಡಿಗರಿಂದಲೇ ತಾನೇ? ಹಾಗಾಗಿ ಯಾವುದನ್ನು ತಡೆದಿದ್ದರೂ ಆಗುತ್ತಿತ್ತು ಅನ್ನುವುದು ನನ್ನ ಅನಿಸಿಕೆ.

ತಾವು ತುಳು-ಕನ್ನಡಿಗರೇ ಅಲ್ವೆ? ಎರಡರಲ್ಲಿ ಯಾವುದನ್ನು ತಡೆಯಲು ಪ್ರಯತ್ನಪಟ್ರಿ? ಅಥವಾ ಯಾವ ರೀತಿ ತಡೆಯಬೇಕಿತ್ತು ಎಂಬುದರ ಬಗ್ಗೆ ಹೇಳಿ.

ಕನ್ನಡವಾಹಿನಿಗಳು ಮಾದ್ಯಮಗಳು ಗುಂಪಿನಲ್ಲಿರುವ ಕುರಿಗಳಂತೆ ವರ್ತಿಸುತ್ತಿರುವುದು ನಮ್ಮ ದುರಾದ್ರುಷ್ಟ , ಗುಂಪಿನಕುರಿಗಳಾದ ಇವರು ಬಹಳ ಸಂದರ್ಪದಲ್ಲಿ ಜನಸಮೂಹದ ಬಯಕೆಗಿಂತ ತಮಗೆ ಇಷ್ಟವಾದುದ್ದನ್ನೆ ಮಾಡುತ್ತಾರೆ. ನಾವು ಒಂದು ಮೂಲೆಯಲ್ಲಿ ನಿಂತು ಕೂಗುತ್ತಿದ್ದರು ಅವರು ಅದನ್ನು ಕೇಳಿಸಿಕೊಳ್ಳದೆ ಕಿವುಡುತನ ಪ್ರದರ್ಶಿವುತ್ತಿರುವುದು ನಮ್ಮೆಲ್ಲರ ದುರಾದ್ರುಷ್ಟ . ನನಗೆ ಅನ್ನಿಸುವಂತೆ ನಮ್ಮ ಡಾ||ರಾಜ್ ರ ಚಿತ್ರಗಳಿಗು ಈ ರೀತಿಯ ಪ್ರಚಾರ ಸಿಕ್ಕಿರಲಿಲ್ಲ. ಕಡೆಯಪಕ್ಷ ಮುಂದಿನ ಭವಿಷ್ಯದಲ್ಲದರು ಪರಿಸ್ಥಿಥಿ ಸುದಾರಿಸಲಿ ಎಂದು ಆಶಿಸುತ್ತೇನೆ. (ದಯಾನಂದರವರ ಒಪ್ಪಿಗೆ ತೆಗೆದುಕೊಳ್ಳದೆ ಮಾಡಿರುವ ಬಾಷಾಂತರಕ್ಕೆ ಅವರ ಕ್ಷಮೆ ಇರಲಿ)

ಅಹುದಹುದು.. ಚಿತ್ರ ಬಿಡುಗಡೆಯ ಹಿ೦ದಿನದಿನ "ವಿಜಯ ಕನಾ೯ಟಕ" ಪತ್ರಿಕೆಯಲ್ಲಿ ೨ ಸಾರಿ (ಮುಖಪುಟ ದಲ್ಲಿ ಮತ್ತು ಒಳ ಪುಟದಲ್ಲಿ), ಬಹುಪರಾಕ್... ಬಹುಪರಾಕ್,, ಅ೦ತ ಬರೆದಿದ್ದರು,, ಓದಿ ಪಿಚ್ ಅನಿಸಿತು!!

ಕನ್ನಡಿಗರು ತಮ್ಮ ಶಕ್ತಿ ಏನೆಂದು ತೋರಿಸುವ ತನಕ ಇದು ಇದ್ದದ್ದೇ..ಅಂದಹಾಗೆ ಕೋಮಲ್ ಗೌಡಪ್ಪನಿಗೆ ತೋಳೇರಿಸಲು ಹೇಳಬೇಡಿ. ಅಧುನಿಕ ಉದಾರೀಕರಣ ಮತ್ತು ಬಂಡವಾಳಶಾಹೀ ವ್ಯವಸ್ಥೆಯಲ್ಲಿ, ಕೊಳ್ಳುಬಾಕತನವಿದ್ದವರಿಗಷ್ಟೇ ಮರ್ಯಾದೆ. ಮೂಲೆಯಲ್ಲುಳಿದರೆ, ಮನೆಯ ಹೊರಗೆ ಕನ್ನಡ ಮಾತಾಡಲು ನಾಚಿಕೆ ಪಟ್ಟರೆ, ಹೊರದೇಶದಲ್ಲಿಯೂ, ಊರಿನ ಜನ ಸಿಕ್ಕರೂ ಕನ್ನಡ ಮಾತಾಡದ ಮಂದಿಯಿದ್ದರೆ, ಕೆಲಸಕ್ಕೆ ಬಾರದ ತಮಿಳು, ತೆಲುಗಿನ ಜಮೀನ್ದಾರಿ ಪದ್ದತಿಯ ಚಿತ್ರಗಳನ್ನು, ಕನ್ನಡ ಸಿನೆಮಾ ಎಂದು ಡಬ್ಬಿಂಗ್ ಅಲ್ಲಲ್ಲಾ ರಿಮೇಕ್ ಮಾಡುತ್ತಿದ್ದರೆ.. ಇನ್ನೇನು ಗತಿ ಬಂದೀತು. ಅರಳಬೇಕು ಕನ್ನಡದ ಕೆಚ್ಚು ಮನೆಮನೆಯಲ್ಲಿ ಬೆಳಗಬೇಕು ಕನ್ನಡದ ದೀಪ ಮನೆಮನೆಯಲ್ಲಿ ಕನ್ನಡ ಧಿಕ್ಕರಿಸುವವರನ್ನು ಧಿಕ್ಕರಿಸುವ ಧೈರ್ಯ ಸರ್ಕಾರಕ್ಕೇ ಇಲ್ಲದಿರುವಾಗ.. ಕನ್ನಡಿಗನ ಕೂಗು ಕೇಳುವರಾರು ಇಲ್ಲಿ.

ಕನ್ನಡಪರ ಕಾಳಜಿ ಇಲ್ಲದ ರಾಜಕಾರಣಿಗಳು ... ಹಣಕ್ಕಾಗಿ ಕನ್ನಡ ಹಿತವನ್ನೇ ಮರೆಯುವ ಮಾದ್ಯಮಗಳು... ವ್ಯಾಪಾರಿಗಳು... ಕನ್ನಡ ಸಿನಿಮಾಗಳಿಗೆ ಸರಿಯಾದ ಮಾರುಕಟ್ಟೆ ಕಟ್ಟಲಾಗದ ಸಿನಿಮಾ ಮಂಡಳಿ ... ಕನ್ನಡದ್ದು ಎಂದು ಹೇಳಿಕೊಳ್ಳಲು ಕೂಡ ಇಲ್ಲದ ಒಂದು ಪ್ರಭಾವಿ TV ಮಾಧ್ಯಮ ... ಸುತ್ತಮುತ್ತಲ ಭಾಷೆಗಳಿಂದ ಅವಿರತವಾಗಿ ಕನ್ನಡಮೇಲೆ ನಡೆಯುತ್ತಿರುವ ದಬ್ಬಾಳಿಕೆ ಕಂಡೂ ಕಾಣದಂತಿರುವ ಜನರು ...ಕಂಡರೂ ನಮಗೇಕೆ ಅದರ ಉಸಾಬರಿ ಎಂದು ಸುಮ್ಮನಾಗುವವರು ... ಕನ್ನಡ ಪ್ರಭಾವ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂಬ ಅರಿವೇ ಇಲ್ಲದ ಮುಗ್ದರು... ಇವರೆಲ್ಲ ಕನ್ನಡ ನಾಶದಲ್ಲಿ ಭಾಗಿಗಳೇ ... ಕನ್ನಡಿಗರ 'ಸಹನೆ'ಯೇ ಕನ್ನಡಕ್ಕೆ ಮುಳುವಾಗತೊಡಗಿದೆ ... ಕನ್ನಡ ಭಾಷೆ ಯನ್ನು ಉಳಿಸಲು ಕಷ್ಟಪಡಬೇಕಾದ ಕಾಲ ದೂರವಿಲ್ಲ, ಇನ್ನು ಕನ್ನಡವನ್ನು ಬೆಳೆಸುವ ಯೋಚನೆ ಮರೀಚಿಕೆಯೇ ಸರಿ .... ಕನ್ನಡ ಭಾಷೆ ಇನ್ನು ಎಷ್ಟು ವರ್ಷಗಳಲ್ಲಿ ನಶಿಸಬಹುದು ಎಂದು ಯೋಚಿಸುವ ಕಾಲ ಹತ್ತಿರ ಬರತೊಡಗಿದೆ ... ಈ ಲೆಕ್ಕ ಕೆಲವು ನೂರು ವರ್ಷಗಳ ಆಸುಪಾಸಿನಲ್ಲಿದ್ದರು ಆಶರ್ಯವಿಲ್ಲ ... ಇವೆಲ್ಲವನ್ನೂ ಒಗ್ಗಟ್ಟಿನಿಂದ ಎದುರಿಸಬೇಕಾದ ಅವಶ್ಯಕತೆ ಇದೆ ... ಅದು ಸರಿ ಇಲ್ಲ ಇದು ಸರಿ ಇಲ್ಲ ಅನ್ನುವ ಬದಲು ಪ್ರತಿಯೊಬ್ಬರೂ ಎಲ್ಲೆಲ್ಲಿ ಸಾದ್ಯವೋ ಅಲ್ಲಲ್ಲಿ ಕನ್ನಡ ಪರ ದನಿ ಎತ್ತಬೇಕು... ಕನ್ನಡಕ್ಕೆ ಅನ್ಯಾಯವಾಗುತ್ತಿರುವುದು ಕಂಡಾಗ ಅದನ್ನು ತಡೆಯುವ ಪ್ರಯತ್ನ ಮಾಡಬೇಕು... ಈ ಪ್ರಯತ್ನ ಕ್ರಾಂತಿಯಲ್ಲ ನಮ್ಮತನವನ್ನ ಉಳಿಸಿಕೊಳ್ಳುವ ಪ್ರಯತ್ನ 'ಕನ್ನಡದ ಕಡೆಗಣನೆ ಕನ್ನಡಿಗರಿಂದಲೇ' ಎನ್ನುವ ಮಾತನ್ನು ಸುಳ್ಳು ಮಾಡಬೇಕಿದೆ ..... -ಚಂದ್ರು ಮಲ್ಲಿಗೆರೆ

Hello geleyare,
paap avaradru enu maadiyaaru? kannadadallantu ollolle cinemagalu barta illa, ade teluginalli, tamilinalli, hindiyalli bandantaha cinemagalannu namma kannada chitra rangadavru remake maadi namma janatege toristiddare idralli hosatenu illa adakke janaru chennagi spandisolla, so haagagi madhyamadavaru antaha chitragalalli enide anta torsbeku? adakke neevu kannadada janatege kannada bedavagide anta annodu yaake? nijavaaglu heltini naanu ROBOT chitravanna 2 baari nodiddene, idarartha nanage kanndada mele preet illantalla kannadad cinemad bagge nanage preeti illa, ashtakku Rajanikant bere yaaru alla avaru kannadigare, namma bhaasheyallu antaha chitragalu bandre yaartane ishta padalla swami neeve heli..
Rajanikant,Prakash Rai, monne nidhanaraad Murali etc, ivarella kannadadavaru taane, ivarigu bere bhaashegalalli sikkantaha avakaashagalu nammalli sikkidre tamilinavaro,teluginavaro, e taraha vichaara vinimaya maadkoltidru.
Obba kannadiga tamilu chitra rangavannu aaltiddane anta santosha padi saaku..