ಖಾರದ(Credit) ಕಾರ್ಡ್ ....(ಸುಬ್ಬನ ಮಹಾಭಾರತ)

ಖಾರದ(Credit) ಕಾರ್ಡ್ ....(ಸುಬ್ಬನ ಮಹಾಭಾರತ)

ಬರಹ

ಸುಬ್ಬುಗೆ ಆದ ಇನ್ನೊoದು ಮಹಾಭಾರತವನ್ನ (ಅನುಭವವನ್ನು ) ಹೇಳಬೇಕಿನ್ದಿದ್ದೇನೆ (ರಾಮಾಯಣ ಹೇಗಿದ್ರು ನಿಮಗೆ ಗೊತ್ತು ತಾನೆ ಗೊತ್ತಿಲ್ಲದಿದ್ದರೆ ನನ್ನ ಪಬ್ ಸುಬ್ಬನ ರಾಮಾಯಣ ... ಓದಿ). ಸುಬ್ಬುಗೆ ಹೊಸದಾಗಿ ಬೆಂಗಳೊರಿಗೆ ಬಂದಿದ್ದ. ಅವನು ರಾಮಸಂದ್ರದಲ್ಲಿ ಯಾವ ಹುಡುಗಿನು ಮಾತನಾಡಿಸಿದ ಅನುಭವವಿರಲಿಲ್ಲ. ಅವನಿಗೂ ತುಂಬಾ ಆಸೆ ಹುಡಿಗಿಯರೊಡನೆ ಒಡನಾಟವಿಡಬೇಕೆಂದು. ತಂಗಿ ತುಂಬಾ ಚಿಕ್ಕವಳಾಗಿದ್ದರಿಂದ ಅವಳೊಡನೆ ತನ್ನ ಅಸೆ ,ಅಭಿಲಾಷೆ ಮನದಾಳವನ್ನು ಹೇಳಲು ಹಿಂಜರಿತವದ್ದರಿಂದ ಏನು ಹೇಳುವ ಹಾಗಿಲ್ಲ. ತಂಗಿಯ ಗೆಳತಿ ಶೋಭಾನ್ನ ಕಂಡ್ರೆ ತುಂಬಾ ಇಷ್ಟ ಮನದಲ್ಲೇ ಅವಳನ್ನು ಮದುವೆಯಾಗಿ ಬಿಟ್ಟಿದ್ದ, ಇನ್ನು ಮಧುಚಂದ್ರಕ್ಕೆ ಹೋಗುವುದೊಂದೇ ಬಾಕಿ. ಕೈಯಲ್ಲಿ ಒಂದು ಲವ್ ಮಾರ್ಕ್ ನಡುವೆ "S" ಬೇರೆ .ಏನೋ ಇದು ಕೈ ಮೇಲೆ ಹಚ್ಚೆ "S" ಹಾಕಿಸ್ಕೊಂಡಿದ್ದಿಯ. ಅದು.. ಅದು ...ಅಂತ ತಡಬಡಿಸಿ ಏನಿಲ್ಲ ಅಪ್ಪ "S" ಅಂದ್ರೆ ನಮ್ಮ ಫ್ಯಾಮಿಲಿ ಹೆಸರಲ್ಲವಾ ನಿನ್ನ ಹೆಸರು ಶ್ರೀಧರ, ಅಮ್ಮನ ಹೆಸರು ಶಾಲಿನಿ , ನನ್ನ ಹೆಸರು ಸುಬ್ಬರಾಮ , ತಂಗಿ ಹೆಸರು ಶಾಂತಿ ಅದಕ್ಕೆ. ಅದೆಲ್ಲ ಸರಿ ..ಜ್ವರ ಬೇರೆ ಬಂದಿದೆ ಏನಪ್ಪಾ ನಿಂದ ರಾಮಾಯಣ ಎಂದು ತಣ್ಣಗಾದರು. ಶೋಭಾಳ ಮದುವೆ ಫಿಕ್ಸ್ ಆದಾಗ ಹುಚ್ಚನಂತೆ ಆಡ್ತಾ ಇದ್ದ . ಊಟ .. ನಿದ್ರೆ ...ಎಲ್ಲಕ್ಕೂ ಎಳ್ಳು ನೀರು. ಅಪ್ಪ, ಅಮ್ಮ ಬೈದು ಏನಾದುರು ತಿನ್ನಲು ಹೇಳಬೇಕು. ಅವಳ ಮದುವೆ ದಿನ ಊಟ , ನಿದ್ರೆ ಇಲ್ದೆ ರಾಯರ ಮಠದ ಹಿಂದೆ ಇರೋ ಗೋ -ಶಾಲೆ ಯಲ್ಲಿ ತಟ್ಟ (ಗೋಣಿ ಚೀಲ) ಹೊತ್ಕೊಂಡು ಮಲಗಿ ಬಿಟ್ಟಿದ್ದ .

ಮನೆಯೊಳಗೆ ಸಂದಿಗ್ದವಾದ ವಾತಾವರಣ ಹಬ್ಬಿತ್ತು ಎಲ್ಲಿ ಹೋದ....?. ಈ ಸುಬ್ಬ ಅಂತ. ಅವರಪ್ಪ ಗಲಿಬಿಲಿಗೊಂಡು ಎಲ್ಲ ಗೆಳೆಯರ ಮನೆ , ಭಾವಿ , ಕೆರೆ ಎಲ್ಲಡೆ ಹುಡುಕಿಸಿದ್ದರು. ಕೊನೆ ಪ್ರಯತ್ನವಾಗಿ ಪೋಲಿಸ್ ದೂರು ಕೊಟ್ಟು ಬಂದು ಅಳುತ್ತ ಬಂದರು ಮನಗೆ. ಆವತ್ತು ಎಲ್ಲರಿಗು ಏಕಾದಶಿ.. ಅದು ದ್ವಾದಶಿಯ ದಿವಸ. ಕೊನೆಗೆ ಗೋವಿಂದಾಚಾರ್ಯರು ನೋಡಿ ಅವನನ್ನು ಬೈದು ಮನೆಗೆ ಕಳುಹಿಸಿದ್ದರು . ನಾನು ಮತ್ತು ರಾಮಯ್ಯ ಮೇಸ್ಟ್ರು ಕೂಡಿ ಅವನಿಗೆ ಚೆನ್ನಾಗಿ ಉಗಿದು ಬುಧ್ದೀ ಹೇಳಿ ಸರಿ ದಾರಿಗೆ ತರುವದರೊಳಗೆ ರಗಡ(ಬೇಜಾನ್) ರಾಮಾಯಣನೆ ಅಗಿತ್ತನ್ನಿ .

ಮತ್ತೆ ವಿಷಯಕ್ಕೆ ಬರೋಣ, ಬೆಂಗಳೂರಿಗೆ ಹೊಸದಾಗಿ ಬಂದ ಸುಬ್ಬನಿಗೆ ಆಫೀಸ್ ನಿಂದ ಕ್ರೆಡಿಟ್ ಕಾರ್ಡ್ ಕೊಡಿಸಿದ್ದಾರೆ. ಕ್ರೆಡಿಟ್ ಕಾರ್ಡ್ ಅಂದ್ರೆ ಒಂದು ಹೆಮ್ಮೆಯ ವಿಷಯ ಅನ್ನೋ ಹಾಗೆ ರಾಮಸಂದ್ರ ದಲ್ಲಿ ಟಾಂ..ಟಾಂ ಹೊಡೆದಿದ್ದ. ಒಂದು ದಿವಸ ಒಬ್ಬ ಹುಡುಗಿ ಕಾಲ್ ಮಾಡಿದ್ದಾಗ ಗಲಿಬಿಲಿ ಗೊಂಡ ಸುಬ್ಬ ಏನೇನೋ ಅವಳ ಜೊತೆ ತನ್ನ ಹರುಕು.. ಮುರುಕು.. ಹಿಂದಿ ಇಂದ ಮಾತನಾಡಿದ್ದ. ಅವನ ಹಿಂದಿ ಹೇಗಿತ್ತೆಂದರೆ male/female ಎನ್ನುವದೇ ಗೊತ್ತಾಗದೆ ಏನೇನೋ ಮಾತನಾಡುತ್ತಿದ್ದ. ಒಮ್ಮೆ ನನ್ನ ಇನ್ನೊಬ್ಬ ಗೆಳೆಯ ಮಾಧವ್ ಬಂದಾಗ "ಗೋಪಿ ಖಾನಾ ಪಕಾ ರಹಿ ಹೈ " ಎಂದಿದ್ದ. ಏನೋ ನೀನೇನು ಸುಬ್ಬುನ ಮಡದಿ ಏನೋ? ಎಂದು ನನ್ನ ಗೆಳೆಯ ನನ್ನನ್ನು ಚೆಡಿಸಿದ್ದ. ಹಿಗೆ ಒಬ್ಬ ತಮಿಳ್ ಹುಡ್ಗಿಗೆ ಏನೋ ಹೇಳಿದ್ದಾನೆ. ಅವಳು "ಪೋಡಾಡೆ"(ಹೋಗಲೇ) ಎಂದಿದ್ದಾಳೆ, ಅವಳು ನನಗೆ ಏನು ಹೇಳಿದಳು ಅಂತ ಕೇಳಿದಾಗ ನಾನು ಅದಕ್ಕೆ ಮಸಾಲೆ ಬೆರಸಿ ಹಂಗಂದ್ರೆ "ಪೋಗದಿರೆಲೋ ರಂಗ" ಅಂತ ಎಂದಾಗ ಅವನ ಕಣ್ಣು ಮತ್ತು ಮುಖದಲ್ಲಿಯ ತೇಜಸ್ಸು ನೋಡಬೇಕ್ಕಿತ್ತು . ರಾತ್ರಿ ಪೂರ್ತಿ ಅವಳದೇ ಧ್ಯಾನ .. ಅವತ್ತು ಅವನಿಗೆ ಶಿವರಾತ್ರಿ ...

ಮತ್ತೆ ಒಂದು ದಿವಸ ಕ್ರೆಡಿಟ್ ಕಾರ್ಡ್ ಬಿಲ್ ಬಂತು ನೋಡಿ , ಸುಬ್ಬು ಗುಬ್ಬಿಹಾಗೇ ಚೆವ.. ಚೆವ ... ಅಂತ ಚೆವಗುಟ್ಟಿದ್ದ. ಏನೋ ಸುಬ್ಬು ಏನಾಯಿತು? ಎಂದಾಗ ಯಾವದೋ ಒಂದು "Membership ಫೀಸ್" ಅಂತ ಅನಾಮತ್ತಾಗಿ ೭೫೦೦ /- ರೂಪಾಯಿಗಳ ನಾಮ ಹಾಕಿದ್ದರು. ಬಿಲ್ ಕೋಡ್ ನಲ್ಲಿ "Honey Moon Special Offer" ಎಂದಿತ್ತು. ಚೆಡಿಸುವದಕ್ಕೆ ಏನೋ Honey Moon ಆಯಿತೇನೋ ನಿನ್ನ ತಮಿಳ್ ಸಖಿಯ ಜೊತೆ, ಎಂದಾಗ ಕೆನ್ನೆಗೆ ಬಾರಿಸುವಸ್ಟು ಕೋಪದಿಂದ ದುರುಗುಟ್ಟಿದ್ದ . ಆನ೦ತರ ನಾನೇ ಬ್ಯಾಂಕ್ ಗೆ ಫೋನ್ ಮಾಡಿ ಏನಪ್ಪಾ ಇದು ಯಾವ ಆಫರ್ ಅಂತ ಕೇಳಿದಾಗ, ನೀವೇ ಒಪ್ಪಿದ ಮೇಲೆ ಈ ಆಫರ್ ನಿಮಗೆ ಕೊಟ್ಟಿದ್ದು ಸರ್, ಅಂತ ಹೇಳಿದರು . ಆ ಆಫರ್ ಕತೆಯೋ ಕೇಳಬೇಡಿ "Married Couple" ಗಳಿಗೆ ಮಾಡಿಸಿದ್ದು. ಪ್ರತಿ ತಿಂಗಳು ೪ ದಿನಗಳು ಹಿಲ್ ಸ್ಟೇಷನಲ್ಲಿ ವಾಸ , ತಿಂಡಿ ತೀರ್ಥ ಎಲ್ಲವನ್ನು ಭರಿಸುವ ಆಫರ್. ನನಗೆ ಮದುವೆನೆ ಆಗಿಲ್ಲ ಕಣಮ್ಮ ಎಂದಾಗ. ಮತ್ತೆ ನೀವು ಏಕೆ ಒಪ್ಪಿಕೊಂಡಿರಿ ಎಂದಳು . ತಲೆ ತಿರುಗಿತ್ತು ಎನಮ್ಮಾ ನಾನು ಹೇಳಿದ್ದೇನು ನನ್ನ Talk Transcript ಏನು? ಅಂತ ನನಗೆ ಬೇಕು ಎಂದಾಗ phone cut ಮಾಡಿದಳು ...ಹೀಗೇ ನಡಿಯಿತು ನನ್ನ ಮತ್ತು ಬ್ಯಾಂಕ್ ಸಹೋದ್ಯೋಗಿಗಳೇ ನಡುವೆ ವಾಕ್ಯುಧ . ಕೊನೆಗೆ ೪ ಬರಿ ಹೆಡ್ ಆಫೀಸ್ ಗೆ ಮೇಲ್ ಮಾಡಿ. Consumer ಕೋರ್ಟ್ಗೆ ಹೋಗುತ್ತೇನೆ ಎಂದು ಹೆದರಿಸಿದ್ದಾಗ ಕೊನೆಗೆ ನನ್ನ(ಯಾನಿ ಸುಬ್ಬು) a/c ಸರಿ ಮಾಡಿ ಕಳುಹಿದರು.

ಒಂದು ದಿನ ಮಂಜನಿಗೆ ಕ್ರೆಡಿಟ್ ಕಾರ್ಡ್ ತೆಗೆದು ಕೊಳ್ಳಿ ಸರ್ ಎಂದು ಫೋನ್ ಮಾಡಿದ್ದರು. ಆಗ ಮಂಜ ಬೇಡ ಎಂದು ಹೇಳಿದ. ಆದರೆ ದಿನವು ಅವನಿಗೆ ಫೋನ್ ಮಾಡುತ್ತಲಿದ್ದರು. ಮಂಜನಿಗೆ ತುಂಬಾ ತಲೆ ಕೆಟ್ಟು ಹೋಗಿತ್ತು. ಮತ್ತೊಂದು ದಿನ ಮಂಜನಿಗೆ ಹೊಸ ಆಫರ್ ಇವೆ ಸರ್ ಕಾರ್ಡ್ ತೆಗೆದುಕೊಳ್ಳಿ ಎಂದರು. ನನ್ನ ಆಫರ್ ಒಪ್ಪುವ ಹಾಗೆ ಇದ್ದರೆ ಹೇಳಿ ಎಂದ. ನಾನು ಸುಬ್ಬ ಘಾಬರಿ ಏನು ಹೇಳುತ್ತಾನೆ ಎಂದು. ಹೊಸ ಗ್ಯಾಸ್ ಕನೆಕ್ಷನ್ ಕೊಡಿಸುತ್ತಿರಾ? ಎಂದ. ಆ ದಿನದಿಂದ ಮಂಜನಿಗೆ ಮತ್ತೆ ಫೋನ್ ಬರಲಿಲ್ಲ.

ಈಗ ನಮ್ಮ ಸುಬ್ಬನಿಗೆ Ration ಕಾರ್ಡ್ ತೊಗೊಳ್ಳಿ ಅಂತ ಫೋನ್ ಮಾಡಿದರು...ಸಹ, ಹೆದರಿ ರಾಮಸಂದ್ರಕ್ಕೆ ಓಡುತ್ತಾನೆ .

ಏ... ಮಗ ... Pan Card ಮಾಡಿಸ್ಕೊಳ್ಳೋ ಅಂತ ನಾನು ಹೇಳಿದಾಗ. ನನಗೆ ಯಾವ ಕಾರ್ಡು ಗಿರ್ಡು ಬೇಡ ಎಂದಿದ್ದ ...

ಈಗ ಇವನ ಮದುವೆ ಫಿಕ್ಸ್ ಆಗಿದೆ. ಮ್ಯಾರೇಜ್ ಕಾರ್ಡ್ ಕೊಡ್ತಾನೋ ಇಲ್ಲೋ ಅಂತ ....ಕಾದುನೋಡಿ.