ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು?

Submitted by gopinatha on Fri, 10/15/2010 - 08:23
ಬರಹ

 

 

 

 

 

 

 

 

 

ಸಂಪದಾ ನೀನು ನಮಗಾಗಿ
ಸಾವಿರ ವರುಷ ಹಿತವಾಗಿ
ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ
//ಸಂಪದಾ ನೀನು ನಮಗಾಗಿ//1

 

ಸಾವಿರ ಬ್ಲಾಗೂ ಬಂದರೆ ಏನು
ಸಂಪದಕೆಂದೂ ಸರಿ ಸಾಟಿಯೇನು
ಜತೆಯಲಿ ಎಂದೆಂದು ನೀನಿರಬೇಕು
ನಿನ್ನಯ ಸಂಗವೇ ನಮಗೆಲ್ಲಾ ಸಾಕು
//ಸಂಪದಾ ನೀನು ನಮಗಾಗಿ//2

 

ಹಾಸ್ಯದ ನೆರೆಯೋ ಕಾವ್ಯದ ಹೊರೆಯೋ
ರಾಜಕೀಯಕೆ ಚಾಟಿಯ ಬರೆಯೋ
ಹರಿಪ್ರಸಾದರು ಬೆಳೆಸಿದ ಕುಡಿಯೋ
  ಕನ್ನಡಮ್ಮನ ಹೆಮ್ಮೆಯ ನುಡಿಯೋ
//ಸಂಪದಾ ನೀನು ನಮಗಾಗಿ//3

 

ಬಿಸಿ ಬಿಸಿ ಚರ್ಚೆಯೋ , ಚಿತ್ರವೋ, ಪತ್ರವೋ
ಎಲ್ಲರ ಮನಸ್ಸನೂ ಅರಳಿಸೋ ಚೈತ್ರವೋ
ಜ್ಞಾನದ ಅನುಪಮ ಹೊಸತಿದು ಮಾತ್ರವೋ
ಸಂಪದ ಎಲ್ಲರ ಪ್ರೀತಿಗೆ ಪಾತ್ರವೋ
//ಸಂಪದಾ ನೀನು ನಮಗಾಗಿ//4

 

ಕೋಟಿ ಬಾಷೆ ಕಲಿತರೇನು
ಕನ್ನಡ  ಭಾಷೆಯು ಆಡಲು ತಾನೇ
ನೂರು ಸಮಸ್ಯೆ  ಕಾಡಿದರೇನು
ಸಂಪದ ನೆಮ್ಮದಿ ನೀಡಲು ತಾನೇ

//ಸಂಪದಾ ನೀನು ನಮಗಾಗಿ//5

 

ಎಲ್ಲರೂ ಸೇರುತ ಹರಸುವ ಇಂದು
ನಮ್ಮಯ ಉಸಿರಲಿ ಬೆರೆಯಲಿ ಎಂದು
ಕನ್ನಡ ಬಳಸುತ ಬೆಳೆಯಲಿ ಎಂದೂ
ಸಂಪದ ಸರ್ವರ ಭರಿಸಲಿ ಮುಂದೂ
//ಸಂಪದಾ ನೀನು ನಮಗಾಗಿ//6

 


(ಧಾಟಿ:   ಅಮ್ಮಾ  ನೀನೂ ನಮಗಾಗೀ)