ನನ್ನ ತಂಗಿಯರು ತಪ್ಪಿಸಿಕೊಂಡಾಗ

ನನ್ನ ತಂಗಿಯರು ತಪ್ಪಿಸಿಕೊಂಡಾಗ

ಬರಹ

 ನನ್ನ ತಂಗಿಯರು ತಪ್ಪಿಸಿಕೊಂಡಾಗ ನಾನು ಬಹುಶ ೪ ಅಥವಾ ೫ನೇ ತರಗತಿಯಲ್ಲಿ ಓದುತ್ತಿದ್ದ ನೆನಪು.  ನನ್ನ ದೊಡ್ಡ ತಂಗಿಗೆ ೭ ವರ್ಷ ಹಾಗೂ ಚಿಕ್ಕ ತಂಗಿಗೆ ೫ ವರ್ಷ ವಯಸ್ಸು. ಅಂದು ಭಾನುವಾರ. ಎಲಕ್ಶನ್ ಸಮಯ. ಬೆಳಿಗ್ಗೆ ೯.೩೦ ಸುಮಾರಿನಲ್ಲಿ ನನ್ನ ತಂಗಿಯರು ಹೊರಗೆ ಆಡುವಾಗ ಆಟೋನಲ್ಲಿ  ಮತಯಾಚನೆ ಮಾಡುತ್ತಾ ಪಾಂಪ್ಲೇಟ್ ಅನ್ನು ಎಸೆಯುತ್ತಾ ಹೋಗುತ್ತಿದ್ದರು. ನನ್ನ ತಂಗಿಯರು ಆ ಹಾಳೆಗಳನ್ನು ಹೆಕ್ಕಿಕೊಳ್ಳುತ್ತ ಆಟೋ ಹಿಂದೆಯೇ ಹೊರಟುಹೋದ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಅದು ಅಲ್ಲದೇ ಅಂದು ನನ್ನ ಸೋದರತ್ತೆ ಕೆಜಿಗಟ್ಟಲೆ ಕಟ್ಟಲು ಹೂಗಳನ್ನು ಬೇರೆ ತಂದಿದ್ದರು. ಸರಿ ನನ್ನ ತಾಯಿ ಅಕ್ಕ ಇಲ್ಲರೂ ಅತ್ತೆ ಜೊತೆ ಹೂ ಕತ್ತಲು ಕೂತುಬಿಟ್ಟರು. ಮಕ್ಕಲ್ಲನ್ನು ಕೇಳುವವರು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ನನ್ನ ತಂದೆ ಕ್ಷೌರಕ್ಕೆಂದು ಒಳಗೆ ಬಂದಾಗ ಮಕ್ಕಳು ಹೋಗಿರಬೇಕು. 
 ಸರಿ ಅಂತೂ ಎಲ್ಲ ಬ್ಯೂಸಿ ಆಗಿದ್ದರು. ಊಟದ ಹೊತ್ತಿಗೆ ಮಕ್ಕಳನ್ನು ಹುಡುಕಿದರೆ ಮನೆಯ ಅಕ್ಕ ಪಕ್ಕಾ ಮಕ್ಕಳು ಎಲ್ಲೂ ಇಲ್ಲ. ನನ್ನ ತಂದೆ ನನಗೆ ಹೇಳಿದರು "ಮಕ್ಕಳು ಸ್ಕೂಲಿನಲ್ಲಿ ಆಡ್ತಿರ್ಬೇಕು ನೋಡ್ಕೊಂಡ್ ಬಾಮ್ಮ" ಅಂತ ಸ್ಕೂಲು ನಮ್ಮ ಮನೆಯ ಪಕ್ಕದಲ್ಲೇ ಇತ್ತು ಹಾಗಾಗಿ ನಾನೊಬ್ಬಳೇ ಹೊರಟೆ. ಮಕ್ಕಳು ಅಲ್ಲೂ ಇರ್ಲಿಲ್ಲ್ಲ. ನಂಗೆ ಮೊದಲೇ ನನ್ನ ಪುಟ್ಟ ತಂಗಿ ಅಂದ್ರೆ ಪ್ರಾಣ ಬೇರೆ. ತುಂಬಾ ಹೆದರಿಕೆ ಆಯಿತು. ನನಗೆ ಗೊತ್ತಿರೋ ಜಾಗಗಳಲ್ಲೆಲ್ಲ ನೋಡಿ ಬಂದೆ. ನನಗೆ ಅಳುನೇ ಬರ್ತಿತ್ತು. ಸರಿ ಅತ್ತುಕೊನ್ದೆ ಮನೆಗೆ ಹೋದೆ ಮಕ್ಕಳು ಮನೆಗೆ ಇನ್ನೂ ಬಂದಿರ್ಲಿಲ್ಲ ನಮಪ್ಪಾ, ಅಕ್ಕ, ಅತ್ತೆ, ಪಕ್ಕದ ಮನೆಯವ್ರು ಎಲ್ರೂ ಒಂದೊಂದ್ ಕಡೆ ಹೂಡ್ಕೋಕೆ ಶುರು ಮಾಡಿದ್ರೂ. ಆ ಹೊತ್ತಿಗಾಗಲೇ ಸಂಜೆ ಅರಗಿತ್ತು. ಅಮ್ಮ ಅಂತೂ ಸಿಕ್ಕಾ ಪತ್ತೆ ಅಲ್ತಿದ್ರು.  ಅಮ್ಮನ ಸಂಕಟ ನೋಡೋಕಗ್ತಿರ್ಲಿಲ್ಲ. ನನ್ನ ತಂದೆಗಂತು ಹೆದರಿಕೆ ಶುರು ಆಗಿತ್ತು. ಮಕ್ಕಳು ಎಲ್ಲಿ ಹೋದ್ರೂ ಏನಾದ್ರೂ ಅಂತ ರಾತ್ರಿ ೮ ಗಂಟೆ ಆದ್ರೂ ಗೊತ್ತಾಗ್ಲಿಲ್ಲ. ಸರಿ ಎಲ್ರೂ ನನ್ನ ತಂದೆಗೆ ಹೇಳ್ತಿದ್ರು ಪೋಲೀಸ್ ಕಂಪ್ಲೇಂಟ್ ಆದ್ರೂ ಕೊಡಿ ಅಂತ. ಸರಿ ಮನೇಲಿ ಇದ್ದ ನನ್ನ ಮುದ್ದು ತಂಗಿಯರ ಫೋಟೋ ತಗೊಂಡು ನನ್ನ ತಂದೆ ಪೋಲೀಸ್ ಸ್ಟೇಷನ್ ಕೊಟ್ಟು ಬಂದ್ರೂ. ಅಮ್ಮ ಅಂತೂ ಅತ್ತು ಅತ್ತು ಸೊರಗಿ ಹೋಗಿದ್ರು. ಅಮ್ಮನ ಮುಖ ನೋಡಿ ನನ್ನ ತಂದೆಗೂ ಅಳು ಬಂದಿತ್ತು. ನಾವೆಲ್ಲರೂ ಒಂದೊಂದು ಮೂಲೆಲಿ ಕೂತ್ಕೊಂಡು ಅಲ್ತಿದ್ವಿ. ಅವಟ್ತು ಎಲ್ಲರಿಗೂ ಉಪವಾಸ. ಯಾರಿಗೂ ಹನಿ ನೀರು ಗಂಟಲಲ್ಲಿ ಇಳೀಲಿಲ್ಲ. ಹೂಡ್ಕಿ ಸಾಕಾದ ಜನ ನನ್ನ ತಂದೆಗೆ ಸಾಂತ್ವನ ಹೇಳಿ ಯೋಚನೆ ಮಾಡ್ಬೇಡಿ ಮಕ್ಕಳು ಸಿಗ್ತಾರೆ ಅಂತ ಹೇಳಿ ಅವ್ರವ್ರ ಮನೆಗಳಿಗೆ ಹೊರಟುಹೋದ್ರೂ. ನನ್ನ ತಂದೆ ಇನ್ನೂ ಹುಡುಕುತ್ತಲೇ ಇದ್ರು. 
  ರಾತ್ರಿ ೧೦ ಗಂಟೆಗೆ ಮನೆ ಮುಂದೆ ಒಂದು ಆಟೋ ಬಂದು ನಿಂತುಕೊಳ್ತು. ಅದ್ರಿಂದ ಒಂದು ಹೆಂಗಸು ಇಳಿದರು. ಕತ್ತಲೇ ಆಕೆ ಯಾರು ಅಂತ ಗೊತ್ತಾಗ್ಲಿಲ್ಲ ಆಮೇಲೆ ಅವ್ರ ಹಿಂದೆ ನನ್ನ ತಂಗಿಯರು ಇಳಿದ್ರು. ನಮಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅಮ್ಮ ಬಂದವರೇ ಮಕ್ಕಳನ್ನು ತಬ್ಬಿಕೊಂಡು ಅಳೋದಕ್ಕೆ ಶುರು ಮಾಡಿದ್ರೂ. ಸರಿ ಎಲ್ಲರ್ಗೂ ಸಮಾಧಾನದ ನಿಟ್ಟುಸಿರು. ಆಮೇಲೆ ನನ್ನ ತಂದೆ ಅವ್ರನ್ನ ಒಳಗೆ ಕರೆದು ಸತ್ಕರಿಸಿದ್ರು. ನಿಮ್ಮ ಋಣ ಈ ಜನ್ಮದಲ್ಲಿ ತೀರ್‌ಸೋದಕ್ಕೆ ಆಗಲ್ಲ ಅಂದ್ರೂ. ನನ್ನ ತಾಯಿ ಕೂಡ ಅವ್ರನ್ನ "ದೇವರು ನಿಮ್‌ನ ಚನಾಗಿಡ್ಲೀ." ಅಂತ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದ್ರು.  ಆಮೇಲೆ ನನ್ನ ತಂದೆ ಅವ್ರಿಗೆ ಉಟ ಮಾಡ್ಕೊಂಡು ಹೋಗಿ ಅಂತ ಹೇಳಿ ಅವ್ರ ಉಟ ಆದ ಮೇಲೆ ದುಡ್ಡು ಕೊಟ್ಟು ಕಳುಹಿಸಿದ್ರು. 
  ನಿಜವಾಗ್ಲೂ ಅವತ್ತಿನ ದಿನ ಯಾವತ್ತೂ ಮರೆಯೋಕೆ ಆಗಲ್ಲ. ಇವತ್ತು ಆವ್ರು ದಾರಿಯಲ್ಲಿ ಸಿಕ್ರೆ ನನ್ನ ತಂದೆ ತಾಯಿ ಇಬ್ರೂ ಅವ್ರಿಗೆ ಕೈ ಮುಗಿತಾರೆ. ಅವರಂತ ಮಾನವೀಯತೆ ಇರೋ ಜನ ಬಹಳ ಕಡಿಮೆ ಅನಿಸತ್ತೆ. 
  ಇದು ನನ್ನ ಮೊದಲ ಪ್ರಯತ್ನ ಇದರಲ್ಲಿ ಎಷ್ಟು ತಪ್ಪುಗಳಿವೆಯೋ ತಿಳಿಯದು. ತಪ್ಪಿದ್ದರೆ ಕ್ಷಮಿಸಿ. ತಿದ್ದುಕೊಳ್ಳೋದಕ್ಕೆ ಸಹಕರಿಸಿ.
  ಶಾರದ ಎಮ್

 ನನ್ನ ತಂಗಿಯರು ತಪ್ಪಿಸಿಕೊಂಡಾಗ ನಾನು ಬಹುಶ: ೪ ಅಥವಾ ೫ನೇ ತರಗತಿಯಲ್ಲಿ ಓದುತ್ತಿದ್ದ ನೆನಪು.  ನನ್ನ ದೊಡ್ಡ ತಂಗಿಗೆ ೭ ವರ್ಷ ಹಾಗೂ ಚಿಕ್ಕ ತಂಗಿಗೆ ೫ ವರ್ಷ ವಯಸ್ಸು. ಅಂದು ಭಾನುವಾರ. ಎಲಕ್ಶನ್ ಸಮಯ. ಬೆಳಿಗ್ಗೆ ೯.೩೦ ಸುಮಾರಿನಲ್ಲಿ ನನ್ನ ತಂಗಿಯರು ಹೊರಗೆ ಆಡುವಾಗ ಆಟೋನಲ್ಲಿ  ಮತಯಾಚನೆ ಮಾಡುತ್ತಾ ಪಾಂಪ್ಲೇಟ್ ಅನ್ನು ಎಸೆಯುತ್ತಾ ಹೋಗುತ್ತಿದ್ದರು. ನನ್ನ ತಂಗಿಯರು ಆ ಹಾಳೆಗಳನ್ನು ಹೆಕ್ಕಿಕೊಳ್ಳುತ್ತ ಆಟೋ ಹಿಂದೆಯೇ ಹೊರಟುಹೋದ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಅದು ಅಲ್ಲದೇ ಅಂದು ನನ್ನ ಸೋದರತ್ತೆ ಕೆಜಿಗಟ್ಟಲೆ ಕಟ್ಟಲು ಹೂಗಳನ್ನು ಬೇರೆ ತಂದಿದ್ದರು. ಸರಿ ನನ್ನ ತಾಯಿ ಅಕ್ಕ ಇಲ್ಲರೂ ಅತ್ತೆ ಜೊತೆ ಹೂ ಕಟ್ಟಲು ಕೂತುಬಿಟ್ಟರು. ಮಕ್ಕಳನ್ನು ಕೇಳುವವರು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ನನ್ನ ತಂದೆ ಕ್ಷೌರಕ್ಕೆಂದು ಒಳಗೆ ಬಂದಾಗ ಮಕ್ಕಳು ಹೋಗಿರಬೇಕು. 
 ಸರಿ ಅಂತೂ ಎಲ್ಲ ಬ್ಯೂಸಿ ಆಗಿದ್ದರು. ಊಟದ ಹೊತ್ತಿಗೆ ಮಕ್ಕಳನ್ನು ಹುಡುಕಿದರೆ ಮನೆಯ ಅಕ್ಕ ಪಕ್ಕಾ ಮಕ್ಕಳು ಎಲ್ಲೂ ಇಲ್ಲ. ನನ್ನ ತಂದೆ ನನಗೆ ಹೇಳಿದರು "ಮಕ್ಕಳು ಸ್ಕೂಲಿನಲ್ಲಿ ಆಡ್ತಿರ್ಬೇಕು ನೋಡ್ಕೊಂಡ್ ಬಾಮ್ಮ" ಅಂತ ಸ್ಕೂಲು ನಮ್ಮ ಮನೆಯ ಪಕ್ಕದಲ್ಲೇ ಇತ್ತು ಹಾಗಾಗಿ ನಾನೊಬ್ಬಳೇ ಹೊರಟೆ. ಮಕ್ಕಳು ಅಲ್ಲೂ ಇರ್ಲಿಲ್ಲ್ಲ. ನಂಗೆ ಮೊದಲೇ ನನ್ನ ಪುಟ್ಟ ತಂಗಿ ಅಂದ್ರೆ ಪ್ರಾಣ ಬೇರೆ. ತುಂಬಾ ಹೆದರಿಕೆ ಆಯಿತು. ನನಗೆ ಗೊತ್ತಿರೋ ಜಾಗಗಳಲ್ಲೆಲ್ಲ ನೋಡಿ ಬಂದೆ. ನನಗೆ ಅಳುನೇ ಬರ್ತಿತ್ತು. ಸರಿ ಅತ್ತುಕೊಂಡೆ ಮನೆಗೆ ಹೋದೆ ಮಕ್ಕಳು ಮನೆಗೆ ಇನ್ನೂ ಬಂದಿರ್ಲಿಲ್ಲ ನಮಪ್ಪಾ, ಅಕ್ಕ, ಅತ್ತೆ, ಪಕ್ಕದ ಮನೆಯವ್ರು ಎಲ್ರೂ ಒಂದೊಂದ್ ಕಡೆ ಹೂಡ್ಕೋಕೆ ಶುರು ಮಾಡಿದ್ರೂ. ಆ ಹೊತ್ತಿಗಾಗಲೇ ಸಂಜೆ ಅರಗಿತ್ತು. ಅಮ್ಮ ಅಂತೂ ಸಿಕ್ಕಾ ಪತ್ತೆ ಅಳುತ್ತಿದ್ರು.  ಅಮ್ಮನ ಸಂಕಟ ನೋಡೋಕಗ್ತಿರ್ಲಿಲ್ಲ. ನನ್ನ ತಂದೆಗಂತು ಹೆದರಿಕೆ ಶುರು ಆಗಿತ್ತು. ಮಕ್ಕಳು ಎಲ್ಲಿ ಹೋದ್ರೂ ಏನಾದ್ರೂ ಅಂತ ರಾತ್ರಿ ೮ ಗಂಟೆ ಆದ್ರೂ ಗೊತ್ತಾಗ್ಲಿಲ್ಲ. ಸರಿ ಎಲ್ರೂ ನನ್ನ ತಂದೆಗೆ ಹೇಳ್ತಿದ್ರು ಪೋಲೀಸ್ ಕಂಪ್ಲೇಂಟ್ ಆದ್ರೂ ಕೊಡಿ ಅಂತ. ಸರಿ ಮನೇಲಿ ಇದ್ದ ನನ್ನ ಮುದ್ದು ತಂಗಿಯರ ಫೋಟೋ ತಗೊಂಡು ನನ್ನ ತಂದೆ ಪೋಲೀಸ್ ಸ್ಟೇಷನ್ ಕೊಟ್ಟು ಬಂದ್ರೂ. ಅಮ್ಮ ಅಂತೂ ಅತ್ತು ಅತ್ತು ಸೊರಗಿ ಹೋಗಿದ್ರು. ಅಮ್ಮನ ಮುಖ ನೋಡಿ ನನ್ನ ತಂದೆಗೂ ಅಳು ಬಂದಿತ್ತು. ನಾವೆಲ್ಲರೂ ಒಂದೊಂದು ಮೂಲೆಲಿ ಕೂತ್ಕೊಂಡು ಅಳುತ್ತಿದ್ದೆವು. ಅಂದು ಎಲ್ಲರಿಗೂ ಉಪವಾಸ. ಯಾರಿಗೂ ಹನಿ ನೀರು ಗಂಟಲಲ್ಲಿ ಇಳೀಲಿಲ್ಲ. ಹೂಡ್ಕಿ ಸಾಕಾದ ಜನ ನನ್ನ ತಂದೆಗೆ ಸಾಂತ್ವನ ಹೇಳಿ ಯೋಚನೆ ಮಾಡ್ಬೇಡಿ ಮಕ್ಕಳು ಸಿಗ್ತಾರೆ ಅಂತ ಹೇಳಿ ಅವ್ರವ್ರ ಮನೆಗಳಿಗೆ ಹೊರಟುಹೋದ್ರೂ. ನನ್ನ ತಂದೆ ಇನ್ನೂ ಹುಡುಕುತ್ತಲೇ ಇದ್ರು. 