ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

ಬರಹ

ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ನಾವೆಲ್ಲ ಓದಿದ್ದೇವೆ. ಮೊನ್ನೆ ನಮ್ಮ ಹಳೆಯ ಮಿತ್ರರ ಕೂಟದಲ್ಲಿ ಈ ಚರ್ಚೆ ನಡೆಯಿತು. ಹಳೆಯ ಮಿತ್ರರ ಕೂಟ ಇದೇನು ಸಂಘಟನೆಯಲ್ಲ, ಬೆಂಗಳೂರಿನಲ್ಲಿದ್ದ ನನ್ನ (ಗದುಗಿನ) ಊರಿನ ಮಿತ್ರರು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿದಾಗ ಸ್ಪಷ್ಟ ವಾದದ್ದು ಪದವಿಯಲ್ಲಿ ಕಲಿತದ್ದೆ ಬೇರೆ ಪ್ರಾಯೋಗಿಕವಾಗಿ ಮಾಡುತ್ತಿರುವುದೇ ಬೇರೆ. ಇದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಮ್.ಬಿ.ಎ ಹೀಗೆ ಅನೇಕ ವೃತ್ತಿಪರ ಕೋರ್ಸ್ ಗಳಿಗೂ ಅನ್ವಯಿಸುತ್ತದೆ. ಪದವಿಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಕೆಲಸಕ್ಕೆ ಸೇರಿದಾಗ ಮತ್ತೆ ಕಲಿಯುವುದು ಬೇರೆಯದನ್ನೆ ಅಂದಮೇಲೆ ಪದವಿಯಲ್ಲಿರುವ ಪಠ್ಯಕ್ರಮವನ್ನು ಕೊಂಚವಾದರೂ ಬದಲಿಸಿದರೆ ಸಮಂಜಸ ಅನ್ನಿಸಿತು. ಪತ್ರಿಕೋದ್ಯಮ ಪದವಿ ಪಡೆದ ವಿದ್ಯಾರ್ಥಿಗೆ ಬರಹ ಅಥವಾ ನುಡಿ ತಂತ್ರಾಶಗಳ ಗೊತ್ತಿರದಿದ್ದರೆ ಹೇಗೆ? ಈ ಸಮಸ್ಯೆಯನ್ನು ಬಹಳ ಜನರು ಅನುಭವಿಸಿದ್ದಾರೆ. ಅದನ್ನು ಪದವಿಯಲ್ಲಿ ಕಲಿಸಿದರೆ ಈ ಚಿಂತೆ ಇರುವುದಿಲ್ಲ ಅಲ್ಲವೇ. ಚಲನಚಿತ್ರ ನಿರ್ಮಾಣದ ಕುರಿತು ತರಬೇತಿಯನ್ನು ನೀಡುತ್ತಾರೆ. ಆದರೆ ಚಿತ್ರಿಕರಣ ಸಮಯ ಎಲ್ಲವೂ ಹೊಸತಾಗಿಯೇ ಕಾಣುತ್ತದೆ. ಕಲಿತ ಒಂದು ಅಂಶಗಳು ಅಲ್ಲಿರುವುದಿಲ್ಲ. ಇದೆಲ್ಲ ನಮ್ಮ ಮಿತ್ರರ ಅನುಭವಗಳು. ವಾಣಿಜ್ಯ ಪದವಿಯನ್ನು ಕಲಿತವರಿಗೆ ಸಿ.ಎ. ಕಡೆಗೆ ಕೆಲಸ ಸೇರಿದಾಗ ಲೆಕ್ಕಶಾಸ್ತ್ರ ವೆಲ್ಲ ಹೊಸತೇ ಕಾಣುತ್ತದೆ. ೧ ರಿಂದ ೧೦ ನೇ ತರಗತಿಯ ವರೆಗೆ ಕಲಿಯುವುದು ಸಾಮಾನ್ಯ ಜ್ನಾನವನ್ನು ವೃದ್ಧಿಸಿಕೊಳ್ಳುವುದಕ್ಕೆ ಅದಿರಲಿ. ಆದರೆ ಪದವಿಯಲ್ಲಿ ಏನು ಕೆಲಸ ಮಾಡಬೇಕೊ ಅದನ್ನು ಹೇಳಿಕೊಟ್ಟರೆ ಕೆಲಸ ಕೊಡುವವರಿಗೂ ಸುಲಭ ಅಲ್ಲವೇ. ಇಂದಿನ ಪಠ್ಯಕ್ರಮದಲ್ಲಿ ಏನೇನು ಬದಲಾಗಬೇಕು ? ನಿಮ್ಮ ಅನಿಸಿಕೆಯ ಅಗತ್ಯವೂ ಇದೆ.