ಹೀಗೊಂದು ಸುಪ್ರಭಾತ

ಹೀಗೊಂದು ಸುಪ್ರಭಾತ

ಬರಹ

ಮುಂಜಾನೆ ಅಂಗಳದಿ ನೀರು ಚಿಮುಕಿಸಿ
ರಂಗವಲ್ಲಿಯ ಹಾಕ ಬಂದ
ಹುಡುಗಿಯ ತುಟಿಯಲೊಂದು ನಲಿವ ಸಾಲು
ನಿಂದಿಯಾಸೆ ಜಾಗೀ ಬಹಾರ್

ಬೀದಿ ತುದಿಯಲೊಂದು ಮರ
ತಂಪು ಗಾಳಿ , ಕೆಂಪು ಗುಲ್ ಮೊಹರ್
ದೂರದಿಂದ ಕೋಕಿಲ ರವ ಸಿಂಗಾರ
ಕೈಸಾ ಮೌಸಮ್ ದೇಖಾ ಪೆಹಲೀ ಬಾರ್

ಅವಸರದ ನಡೆಯ ಕನಸುಗಾರ
ಅರಿಯದೆಯೇ ತಡೆದ , ಹೊರಳಿದ
ಇಂಪು ದನಿ , ಇಲ್ಲ ಜೇನ ಹನಿ !
ನಿಂದಿಯಾಸೆ ಜಾಗೀ ಬಹಾರ್

ಬಟ್ಟಲುಗಣ್ಣು ಕಟ್ಟಿ ಹಾಕವೇ ?
ಗ ಟ್ಟಿ ಮನಸು ನೆಟ್ಟಗೆ ನಡೆದ
ಮನಸು ಕನ್ನಡಿ , ಬೆಳಕು ಎಲ್ಲೆಡೆ
ಕೈಸಾ ಮೌಸಮ್ ದೇಖಾ ಪೆಹಲೀ ಬಾರ್

ಬಿಡುವಿರದ ದಿನ , ಬಿಸಿಲು , ಸೆಕೆ , ದಾಹ
ನಡುವೆ ದಟ್ಟೈಸಿದ ನೆನಪು
ತಂಪು ಗಾಳಿ , ಕೆಂಪು ಹೂವು , ಇಂಪು ದನಿ
ನಿಂದಿಯಾಸೆ ಜಾಗೀ ಬಹಾರ್

ದಣಿದ ಸಂಜೆ , ದಣಿದ ಬೀದಿ
ಕಣ್ಣು ಕಿವಿ ಅತ್ತ ಕಾತರಿಸಿ
ಹೊರಗೆ ಬಾರಳೇ ಹಾಡಿದವಳು
ನಿಂದಿಯಾಸೆ ಜಾಗೀ ಬಹಾರ್

ಇಲ್ಲ ! ನಿಡಿದು ಉಸಿರು , ಹೃದಯ ಭಾರ
ಎಳೆದ ಹೆಜ್ಜೆ , ಮನಸು ಒಜ್ಜೆ
ಇರುಳು ನೀರವ , ಮನದಿ ಗುಂಜಾರವ
ಕೈಸಾ ಮೌಸಮ್ ದೇಖಾ ಪೆಹಲೀ ಬಾರ್

--------
ಟಿಪ್ಪಣಿ :- ಇಂಗ್ಲೀಷ್ ನಲ್ಲಿ ಒಂದು ಕವಿತೆ 'Two Red Roses across the Moon' ಓದಿದ್ದೆ . ಅಲ್ಲಿ ಒಬ್ಬ ರಾಜಕುಮಾರ ಯುದ್ಧಕ್ಕೆ ಹೋಗುವ ದಾರಿಯಲ್ಲಿ ಒಬ್ಬ ಸುಂದರಿಯನ್ನು ನೋಡುತ್ತಾನೆ; ಅವಳೋ ಯಾವಾಗಲೂ ( noon to noon) - 'Two Red Roses across the Moon' ಎಂಬ ಹಾಡನ್ನು ಹಾಡುವವಳು . ರಾಜಕುಮಾರ ನಿಲ್ಲುವ ಹಾಗಿಲ್ಲ ; ರಣಾಂಗಣದ ಕೋಲಾಹಲದ ನಡುವೆಯೂ ಅವಳನ್ನು ನೆನೆಯುತ್ತಾನೆ. ಈ ವಿಚಾರ ಆಧರಿಸಿ ನಾನು ಶಬ್ದಗಳನ್ನು ಪೋಣಿಸಿ ಈ ಹಾಡು ಕಟ್ಟಿದ್ದೇನೆ.