ಎಲ್ಲಾರ್ಗು ಪವರ್ ಬೆಕು, ಆದ್ರೆ ಜನಗಳ್ ಕಷ್ಟ- ಕಾರ್ಪಣ್ಯದ್ಕಡೆ ಗಮನಕೊಡೊ ಮಾತೆ ಇಲ್ವಲ್ಲಪ್ಪ ಸಿವ್ನೆ ? ಏನಾಗ್ತದೋಪ್ಪ ನಮ್ದೇಸ !

ಎಲ್ಲಾರ್ಗು ಪವರ್ ಬೆಕು, ಆದ್ರೆ ಜನಗಳ್ ಕಷ್ಟ- ಕಾರ್ಪಣ್ಯದ್ಕಡೆ ಗಮನಕೊಡೊ ಮಾತೆ ಇಲ್ವಲ್ಲಪ್ಪ ಸಿವ್ನೆ ? ಏನಾಗ್ತದೋಪ್ಪ ನಮ್ದೇಸ !

ಬರಹ

ದೊಗ್ನಾಳ್ ಮುನ್ಯಪ್ಪಾರು :

ಏನೇಳ್ಲಪ್ಪ ನಮ್ಮ ಕರ್ ನಾಟ್ಕ್ಕದ್ ಕತೆ-ವ್ಯತೆನ. ಇಂಗೆ ನಾಟ್ಕಮಾಡ್ಕಡ್ ಕುಂತಗಂಡ್ರೆ ಪ್ರಜೆಗಳ್ಗತಿಯೇನು ? ಮೊದ್ಲು ಓಟ್ಮಾಡರೆಲ್ಲ , ಒಟ್ಗೂಡ್ಕಂಡು ಇಂತ ನಾಯ್ಕರು ನಮಗ್ಬ್ಯಾಡ ಅಂದ್ರೇ, ಇವ್ರಿಗ್ಬುದ್ದಿ ಬರದು. ಇಂತ ಒಂದು ಕಿರಾಂತಿ ಏನಾದ್ರು ಅದೀತಾ ? ನನ್ಗೇನೊ ಅನ್ಮಾನ ಕಣಪ.

ಯಾರ್ನ್ ನೊಡ್ಲಿ, ನನಗೆ ಮೊದ್ಲು ಅದ್ಕಾರ ಕೊಡಿ. ಚಲಾಯಿಸ್ತಿನಿ. ಅನ್ನೊರೆ. ಜನ ಎಲ್ಲದ್ರು ಓಗ್ಲಿ. ಯಾರ್ನೊ ಒಂದತ್ತ್ ಜನನ ಕರ್ಕಂಡ್ ಬಂದು, ಅವರ್ಗೆ ಪ್ರಸಸ್ತಿ ಕೊಡಿ, ಒಳ್ಳೆ ಬಾಸ್ನ ಬಿಗೀರಿ. ಟಿವಿ ನಾಗೆ ಎಲ್ಲ ಬರ್ತದೆ. ಆತಪ. ಇಂಗೆ ಆದ್ರೆ ಎಂಗೆ ?

ಆ ಸಿವಪ್ಪ, ಇಂಗ್ಯಾಕ್ ಸುಮ್ನೆ ಕಣ್ಣು, ಕಿವಿ ಮುಚ್ಕಂದ್ ಕುಂತವ್ನೆ. ಒಂದ್ಸರಿ ತನ್ ಮುಂಗಣ್ ಬಿಡ್ಬಾರ್ದ ?