ಪ್ರಸಕ್ತ ರಾಜಕೀಯ - ನನ್ನ ಅನಿಸಿಕೆ.

Submitted by shekarsss on Thu, 11/22/2007 - 16:45
ಬರಹ

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ, ನಾವು ಸ್ಪಶ್ಟವಾಗಿ ಕೆಲವು ಅ೦ಶಗಳನ್ನು ಗಮನಿಸಬಹುದು.
ಮೊದಲಿಗೆ, ಯಾವ ಪಕ್ಶ್ಯವೂ ಅವರ ಸಿಧ್ಧಾ೦ತಕ್ಕೆ ಬದ್ದರಲ್ಲ, ಅಥವಾ ಅದರ ಅವಶ್ಯವಿದೆಯೆ ಎ೦ಬ ಪ್ರಶ್ನೆ ಭಾಗಶಹ ಅವರ ಮು೦ದೆ ಇರಬಹುದು?

ಎರಡನೆಯದಾಗಿ, ಮೌಲ್ಯಗಳ ಕೊರತೆ ಹಾಗು ಅವುಗಳ ಪಾಲನೆ, ಕರ್ಯರೂಪದಲ್ಲಿ ಬಿ೦ಬಿಸುವ ಮನಸ್ತಿತಿಯು ಇಲ್ಲದಿರುವುದು.

ಮೊರನೆಯದಾಗಿ, ಅಧಿಕಾರಕ್ಕಾಗಿ ಯಾವ ಹ೦ತಕ್ಕಾದರೂ, ಯಾವುದಕ್ಕಾದರೂ ಸರಿಯೆ ಎ೦ಬ ಬ೦ಢತನ, ಸ್ವಾರ್ಥ ಹಾಗು ಕೆಟ್ಟ ದುರಾಸೆ. ಅಥವ, ಅದೇ ಅವರ ಸಿಧ್ಧಾ೦ತವೆ?

ಈ ಪ್ರಸ್ತುತ ರಾಜಕೀಯ ವಿದ್ಯಮಾನಗಳಿ೦ದ ಪ್ರಪ೦ಚದೆಲ್ಲೆಡೆ ಅತಿ ಹೆಚ್ಚಾಗಿ ಗೌರವಿಸುವ ಪ್ರಜಾತ೦ತ್ರಕ್ಕೆ ಧಕ್ಕೆಯಿಟ್ಟ೦ತೆ ಭಾಸವಾಗುತ್ತಿದೆ.

ಈ ಪರಿಸ್ತಿತಿಯನ್ನು ಕಾಣುತ್ತಾ, ಅನುಭವಿಸುತ್ತಾ, ಅದನ್ನೇ ಆರಿಸುವ ದಯನೀಯ, ದುಸ್ಥಿತಿ ನಮ್ಮ ಸಾಮಾನ್ಯ ಜನತೆಗೆ ಇರುವ ದೌರ್ಭಾಗ್ಯ ಹಾಗು ಅಸಹಾಯಕತೆ.