೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
ಬರಹ
ಸಂಪದದ ಗೆಳೆಯರಿಗಾಗಿ ಈ ಬಾರಿ ಲಿಂಗದೇವರು ಹಳೆಮನೆಯವರ ಸಂದರ್ಶನ.
ಶ್ರೀ ಹಳೆಮನೆಯವರು ೧೯೭೩ರಿಂದ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ, ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ
ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಪ್ರಮುಖ ನಾಟಕಕಾರ, ಸಾಂಸ್ಕೃತಿ ಚಿಂತಕ, ಅಂಕಣಕಾರ, ಭಾಷಾ ತಜ್ಞ ಹಳೆಮನೆಯವರು ಈ ಸಂದರ್ಶನದಲ್ಲಿ
೧.ಕನ್ನಡ ಶಾಸ್ತ್ರೀಯ ಭಾಷೆ
೨. ಕನ್ನಡದ ರಂಗಭೂಮಿ
೩. ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುವ ಕೆಲಸ
೪. ಜಾಗತೀಕರಣ
ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.
ಶ್ರೀ ಹಳೆಮನೆಯವರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಹಾಮಾನಾ ಪ್ರಶಸ್ತಿ ಮತ್ತು ಕೆವಿ ಸುಬ್ಬಣ್ಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಭಾಷಾ ತಜ್ಞರಾಗಿ
ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾತುಗಳು ಚರ್ಚೆ, ಸಂವಾದಗಳಿಗೆ ಅರ್ಹವಾಗಿವೆ.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (25 MB)
ಚಿತ್ರ: ಗೋವಿಂದ