ಜೀವನ್ ದಲ್ಲಿ ಕೆಚ್ಚಿದ್ದರೆ ಅಲ್ವ, ಎನಾದ್ರು ಸಾಧಸಕ್ಕಾಗದು !

Submitted by venkatesh on Fri, 11/30/2007 - 07:20
ಬರಹ

“ಈ ದೇವೇಗೌಡನ ಕೆಚ್ಚನ್ನು ನಿನ್ನ ಜೀವನದಲ್ಲೂ ಅಳವಡಿಸಿಕೋ ಕುಮಾರಾ... ನಿನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಾಗೋದಿಲ್ಲ....” ಈ ಸಂತವಾಣಿ, ನುಡಿದವರು ಒಬ್ಬ ಆದರ್ಶವ್ಯಕ್ತಿ, ಬಹು ಸಾಧನೆಗಳನ್ನು ತನ್ನ ಜೀವನದಲ್ಲಿ ಮಾಡಿ, ಅದರ ಒಂದು ಉದಾಹರಣೆಯನ್ನು ತನ್ನ ಪ್ರಿಯ ಪುತ್ರನಿಗೆ ಬೋಧಿಸುವ ತಂದೆಯ ಸಂದೇಶ. ಬೆಂಗ್ಳೂರ್ ಅರ್ಮನೆ ತಾವ ಮೀಟಿಂಗ್ನಾಗೆ ಮಗನ್ಗೆ ಏಳೆಬಿಟ್ರು ನಮ್ಗವ್ಡ್ರು. ಇದನ್ನು ಯಾರ್ತಾನೆ ಅಲ್ಲಗಳೆಯಕ್ಸಾಧ್ಯ ಹೇಳಿ. ಮಹತ್ವಾಕಾಂಕ್ಷೆ ಎಲ್ರಿಗು ಬೇಕೆ ಬೆಕು. ಆದ್ರೆ ದುರಾಸೆ ಮಾತ್ರಬೇಡ. ಇಲ್ಲಿ ಕುಮಾರನ ತಂದೆ, ಬೋಧಿಸಿದ್ದು ಆ ತತ್ವನ. ಮಗನೂ ತಂದೆ ವ್ಯಕ್ತಿತ್ವಕ್ಕೆ ಮಾರುಹೊಗಿದ್ದ. ಎಲ್ಲ ಮೊದ್ಲನಂತೆ ಸರಾಗವಾಗಿ ಹೊಗುತ್ತೆ. ಮತ್ತೆ ತುಪ್ಪದ ಗಿಂಡಿ ಜಾರಿ ತನ್ನ ಬಾಯ್ನಲ್ಲೆ ಬೀಳುತ್ತೆ , ಅಂದ್ಕಂಡೆ ಕನಸ್ಕಾಣ್ತ ಇದ್ದ , ಅವ. ಆದ್ರೆ, ಒಬ್ಬೊಬ್ಬರಾಗಿ ಕಳಚ್ಕಂಡು ಒಡೋಗಕ್ಕೆ ಯಾವಾಗ್ ಸುರುಮಾಡಿದ್ರೊ, ಅವಾಗ್ ನಮ್ಮ ಕುಮರಪ್ಪಂಗೆ ಜ್ಞಾನೊದಯ ಆಗಕ್ ಸುರು ಆಯ್ತು ನೋಡಿ. ಅಲೆಲೆ. ಇಂಗ್ಯಾಕಾತು. ಅಂತ, ಇಂದಿನ್ ಪಿ.ಎಮ್ ಮಾತ್ನ ಜನಕೇಳ್ದೆ ಒಗದೆ. ಒಳ್ಳೆ ಗಾಚಾರ ಬಂತಲ್ಲಪ್ಪ. ಇನ್ಮೆಲಾದ್ರು ನನ್ಬುದ್ದಿ ನನ್ಕೈನಾಗೆ ಮಡಿಕ್ಯಾಬೇಕಪ್ಪ. ಗಾಳಿಮಾತ್ಕೇಳಿ ಕೆಟ್ಟೆ ನಾನು.
ಅಷ್ಟ್ರಲ್ಲೆ ಮತ್ತೆ ಅಪ್ಪಾರು ಸುರುಮಾಡೆ ಬಿಟ್ಟ್ರು. ದ್ರುತರಾಷ್ಟ್ರಪ್ಪರು ಮತ್ತೆ ಉಟ್ಟಿ ಬಂದವ್ರೆ. ಎಂಗೊ ನಮ್ಮ್ಕಳು ಮರಿ ಸಂದಾಗಿದ್ರೆ ಸಾಕು. ದೇಸನು ಉದ್ದಾರ ಆಗ್ತದೆ. ಆದ್ರೆ ಇದು ದಿಟ ಅಲ್ಲ. ಪವರ್ ಇಲ್ದೆ ಎನ್ಮಾಡಕ್ಕಾಯ್ತದೆ ? ಕೆಚ್ಚು ಪಚ್ಚು , ಅಂದ್ರೇನು ಅಂತವ, ಸ್ವಲ್ಪ ಸರ್ಯಾಗಿ ಯಾರಾದ್ರು ತಿಳಿ-ಏಳ್ರಿ ಈಯಪ್ಪಂಗೆ !