ಪೊಗಳಿ ನಲ್ನುಡಿಗಳುಂ...

ಪೊಗಳಿ ನಲ್ನುಡಿಗಳುಂ...

ಬರಹ

ಹಳೆಗನ್ನಡ:

ಪೊಗಳಿ ನಲ್ನುಡಿಗಳುಂ ಪೇಳ್ವರ್ ಪಲವರಿರ್ಪರ್
ಎನ್ನಂ ಒಡಗೂಡಿ ಕೂರ್ಪರ್ ಪಲವರಿರ್ಪರ್
ಎಡರ್ಬೊೞ್ತಿನಲ್  ನೆರವಾಗುವರ್ ಪಲವರಿರ್ಪರ್
ಎನ್ನಡೆನುಡಿಗಳುಂ ದಿಟದಿಂ ಬಗೆದು ಕಟುನುಡಿಗಳಾಳ್ಪರ್ ನಾ ಕಾಣೆ ಬರ್ತೇಸ
(ನನಗೆ ಗೊತ್ತಿಲ್ಲದಂತೆ ೨,೩,೪ ನೇ ಸಾಲಿನಲ್ಲಿ ಸುರುವಿನಲ್ಲಿ 'ಎ' ಪ್ರಾಸ ಬಂದಿದೆ :) )
----------------------------------------

ಹೊಸಗನ್ನಡ:
ಹೊಗಳಿ ಒಳ್ಳೆನುಡಿಗಳನ್ನು ಹೇಳುವವರು ಹಲವರಿರುವರು
ನನ್ನನ್ನು ಒಡಗೂಡಿ ಪ್ರೀತಿಸುವವರು ಹಲವರಿರುವರು
ಕಶ್ಟದ ಹೊತ್ತಿನಲ್ಲಿ ನೆರವಾಗುವವರು ಹಲವರಿರುವರು
ನನ್ನ ನಡತೆಯನ್ನು ನಿಜವಾಗಿ ತಿಳಿದು ಟೀಕಿಸುವವರ ನಾ ಕಾಣೆ ಬರ್ತೇಸ

ಯಾಕೋ ಏನೋ ಹಳೆಗನ್ನಡದಲ್ಲಿ ಕಬ್ಬ ಬರೆಯುವುದು ಹೊಸಗನ್ನಡಕ್ಕಿಂತ ಹೆಚ್ಚು ಸರಿ ಅನ್ನಿಸಿತು ಅತ್ವ ಹಳೆಗನ್ನಡ ಕಬ್ಬದ ಚೆಲುವನ್ನ ಹೆಚ್ಚಿಸುತ್ತೆ ಅನ್ನಿಸಿತು.

(ತಪ್ಪುಗಳು ನುಸುಳಿದ್ದರೆ ಮನ್ನಿಸಿ)