ಕಳ್ಳರಿದ್ದಾರೆ ಎಚ್ಚರಿಕೆ

ಕಳ್ಳರಿದ್ದಾರೆ ಎಚ್ಚರಿಕೆ

ಬರಹ
ಕಳ್ಳರಿದ್ದಾರೆ ಎಚ್ಚರಿಕೆ ನಮ್ಮೂರಿನಲಿಹನು ಪುಕ್ಕಟೆ ಕ್ಷೌರಿಕ ಕತ್ತರಿ ಆಡಿಸುವುದೇ ಅವನ ಕಾಯಕ ತಲೆಗೆ ನೀರೂ ಹಾಕದೇ ನುಣ್ಣಗೆ ಬೋಳಿಸುವ ಕೂದಲನ್ನಲ್ಲ, ನಮ್ಮ ನಿಮ್ಮ ಜೇಬನ್ನು ಇನ್ನೊಬ್ಬ ನಡೆಸಿಹನು ಸೇವೆಯ ಕಂಪನಿ ದಾನ ಮಾಡಿರೆಂದು ಕೈ ಜೋಡಿಸಿಹ ಎಲ್ಲರಲಿ ಇವನ ಮುದ್ದು ಮುಖಕೆ ಮರುಳಾಗದವರೇ ಇಲ್ಲ ಸ್ವಲ್ಪ ದಿನಗಳಲೇ ಹಣ ಕಳಕೊಂಡರವರೆಲ್ಲ ಮತ್ತೊಬ್ಬ ತೋರಿಸುತಿಹನು ಎತ್ತರದ ಮಹಲನು ನಿಮಗೆಲ್ಲರಿಗೂ ಕೊಡಿಸುವೆನು ಅದರಲೊಂದನು ಆಸೆಯ ಬೆನ್ನ ಹಿಂದೆ ಬಿದ್ದವರಿವರೆಲ್ಲ ಗಾಳಿ ಬಂದು ಮಹಲು ಹಾರಿರಲು ತಿಳಿದಿಹರು ಇದು ಗಾಳಿ ಗೋಪುರ ನೋಡಲೆಂತಹ ನಯವಾದ ಜನರಿವರು ಎಂತಹ ವಿನಯ ವಿಧೇಯತೆಯ ಪ್ರತೀಕರು ಮುಖವಾಡ ತೆಗೆದೊಡೆ ತಿಳಿಯೆ ವಂಚಕರಿವರು ಆದರೂ ಇವರಲ್ಲ ಕಣ್ಣಿಗೆ ಕಾಣುವ ದರೋಡೆಕೋರರು ನಿಮ್ಮೂರಲೂ ಇಂತಹವರ ಕಂಡಿಹಿರಾ! ಕಾಡಿನಲೂ ಕಾಣಸಿಗದ ಜಿಗಣೆಗಳು ಸಮಯ ನೋಡಿ ಸಾಧಿಸುವ ಸಮಯಸಾಧಕರು ಸೇವೆಯ ಮುಖ ತೋರಿಸಿಹ ರಕ್ತ ಪಿಪಾಸಿಗಳು