" ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದ ! ಅಲ್ವ್ರಾ ?
ಸದ್ಯಕ್ಕೆ ಯೋಚಿಸಿದರೆ, ರಾಜ್ಯದ ರಾಜಕೀಯದಲ್ಲಿ ಮಿರುಗುವ, ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲ ಕೆಲವೇ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಮುಂಬೈ ಕನ್ನಡಿಗರು ಹೆಸರಿಸಬಹುದಾದವರೆಂದರೆ, ನಮ್ಮ ಪ್ರೀತಿಯ ಗವರ್ನರ್ ಶ್ರೀ. ಎಸ್. ಎಮ್. ಕೃಷ್ಣರವರು. ನಯ, ವಿನಯ ಹಾಗೂ ತಮ್ಮ ಆಚಾರ ವಿಚಾರಗಳಿಂದ ನಮ್ಮೆಲ್ಲರಮೇಲೆ ಪ್ರಭಾವಬೀರಿರುವ ಅವರು, ಕೇಂದ್ರಕ್ಕೆ ಹೋಗಿ ಒಬ್ಬ ಮಂತ್ರಿಯಾಗಬಹುದು. ಇಲ್ಲವೇ ಒಬ್ಬ ಗವರ್ನರ್ ಆಗುವುದು ಖಂಡಿತ. ಅವರ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ, ಅನೇಕ ಜನಹಿತ ಕಾರ್ಯಕ್ರಮಗಳನ್ನು ತಂದು ಕರ್ನಾಟಕವನ್ನು ಒಂದು ತಂತ್ರಜ್ಞಾನದ ತಾಣವನಾಗಿಮಾಡಿದ ಶ್ರೇಯಸ್ಸು ಅವರದು. ಬೇರೆಯವರೆಲ್ಲಾ ಏನಾದರೊಂದು ವಿವಾದದಲ್ಲಿ ಮುಳುಗಿದ್ದಾರೆ. ಓಟುಗಳಿಸಿ ತಮ್ಮ ಮಕ್ಕಳು ತಮ್ಮ ಜನರನ್ನು ಮುಂದೆತರುವ ಕಾರ್ಯದಲ್ಲಿ ನಿಸ್ಸೀಮರು. ರಾಷ್ಟ್ರಮಟ್ಟದಲ್ಲಿ ಮಿಂಚುವಂಥವರು ಬೆರೆಳೆಣಿಕೆಯಲ್ಲಿದ್ದಾರೆ. ಇನ್ನು ಧರ್ಮಸಿಂಗ್ , ಕೂಡ ಒಬ್ಬ ಗರ್ನರ್ ಆಗಲು ಒಳ್ಳೆ ಶಾರೀರ ಹೊಂದಿದ್ದಾರೆ. ಎಮ್. ಪಿ. ಪ್ರಕಾಶ್, ಒಳ್ಳೆ ಭಾಷಣ ಬಿಗಿತಾರೆ. ಕೆಟ್ಟಸವಾಸದಲ್ಲಿ ಇದ್ದು ನೊಂದಿದ್ದಾರೆ. ಹೊರಗೆ ಬಂದು, ತಮ್ಮದೇ ಅದ ವ್ಯಕ್ತಿತ್ವವನ್ನು ಸಮತೂಗಿಸಲು ಕಷ್ಟವಾಗುತ್ತೆ. ಮಹಾರಾಷ್ಟ್ರ, ಪ. ಬಂಗಾಲ, ಕೇರಳ, ತಮಿಳುನಾಡು, ಗಳ ರಾಜಕಾರಣಿಗಳ ವರ್ಚಸ್ಸು, ಬುದ್ಧಿಮತ್ತೆ ಹಾಗೂ ಮುಂದಾಲೋಚನೆ ನಮ್ಮವರಿಗೆಲ್ಲಿ ? ರಾಷ್ಟ್ರಮಟ್ಟಕ್ಕೇರುವ ಛಲವೇ ಇಲ್ಲ. ಸಾಮರ್ಥ್ಯಕ್ಕೆ ಕಡಿಮೆಯಿಲ್ಲ. ಆದರೆ ಕರ್ನಾಟಕ ಬಿಟ್ಟು ಹೋಗಲು ಧರ್ಯವಿಲ್ಲ. ನಮ್ಮ ಜಾರ್ಜ್ ಫರ್ನಾಂಡಿಸ್ ಇದ್ದರು. ಇನ್ನೊಬ್ಬ ಫರ್ನಾಂಡಿಸ್ (ತಮ್ಮ), ಮಾರ್ಗರೆಟ್ ಆಳ್ವರಿದ್ದಾರೆ. ಅವರು ಸ್ವಲ್ಪ ಮುಂದುವರೆದರೆ ಒಳ್ಳೆಯದು. ಮತ್ತೆ ನಮ್ಮ ಅಂಬರೀಶ್ ಗೌಡರು ಮುಂದೆಬರದೆ ಹಿಂದಕ್ಕೆ ಹೋಗ್ತಿದಾರೆ. ಇನ್ನ ಕೆಲವು ಗೌಡರುಗಳು ಚೆನ್ನಾಗಿ ಕೆಲಸಮಾಡ್ತಿದಾರೆ. ಹಿಂದಿನ ತರಹ, " ಒಳ್ಳೆ ಗೌಡ್ರ ತರಹ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದನ್ನ ಅವರುಗಳೆಲ್ಲ ಜನರಿಗೆ ಖಾತ್ರಿಪಡಿಸಿ ಮುನ್ನುಗ್ಗಿ ರಾಷ್ಟ್ರದ ಮಟ್ಟಕ್ಕೇರಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಮೊದಲನೆಯ ಅವಕಾಶ, ನಮ್ಮ ಶ್ರೀ ಎಸ್. ಎಮ್. ಕೃಷ್ಣರವರದು ! ** ದೊಗ್ಗನಾಳ್ ಮುನ್ಯಪ್ಪನವರ, ಕ್ರಿಸ್ ಮಸ್ ಸಂದೇಶ : ನಿಮಗ್ಯೆಲ್ಲ , ಕ್ರಿಸ್ ಮಸ್ ಅಬ್ಬದ ಶುಬಾರೈಕೆಗಳು. ರಾಜ್ಯದ್ ಚುಕ್ಕಾಣಿನ ಬದ್ರವಾಗಿ ಇಡೀರಪ್ಪ. ಅಂಗೆ ದಿಕ್ಕಿಲ್ಲದ್ ಪರ್ದೇಸಿಅಂಗೆ ಮಾಡ್ಕಬ್ಯಾಡಿ.