|| ವಂದೇ ಮಾತರಂ || ಭಾಗ -೨
ಆತ್ಮಿಯರಾದ ಭಂದು ಭಗಿನಿಯರೆ , ಹಾಡಿನ ಮೋಡಿಗೆ ಒಳಗಾಗದಿರುವಂಥ ವ್ಯಕ್ತಿ ಬಹುಶ: ಜಗತ್ತಿನಲ್ಲಿ ಯಾರು ಇರಲಿಕ್ಕಿಲ್ಲಾ.ನಮಗೆ ಭಾಳ ಸಂತೋಷವಾದಾಗ ಆ ಸಂತೋಷವನ್ನು ವ್ಯಕ್ತಪಡಿಸುವುದಕ್ಕೊಸ್ಕರ,ನಮಗೆ ಇಷ್ಟವಾಗಿರೊ ಯಾವುದೋ ಹಾಡನ್ನಾ ನಾವು ಗುನುಗುನಿಸ್ತಿವಿ . ಮನಸ್ಸಿಗೆ ಆಗೋಬೆಸರದ ಪರಿಹಾರಕ್ಕೊಸ್ಕರವು ನಾವು ಹಾಡಿಗೆ ಶರಣಾಗ್ತಿವಿ,ದು:ಖದ ಭಾರವನ್ನು ಹಗುರ ಮಾಡಾಬೇಕಾದ್ರುನು ನಾವೊಂದು ಹಾಡು ಕೆಳೊದಿಲ್ವಾ .ಮನುಶ್ಯನ ಮನಸ್ಸಿನ ಮೇಲೆ ಹಾಡಿನ ಪ್ರಭಾವ ಅದ್ಭುತ,ಪ್ರಚಂಡ. ಅದಕ್ಕಾಗಿ ಅಂತಾ ಕಾಣ್ತದೆ ನಮ್ಮ ಹಿರಿಯರು ಸಹಾ ನಮ್ ದೇಶದಲ್ಲಿ ಮನುಶ್ಯನ ಮನಸನ್ನಾ ತಿದ್ದೊದಕ್ಕೊಸ್ಕರಾ,ಸಮಾಜದಲ್ಲಿ ವಿರಸವನ್ನು ದೋರಮಾಡಿ ಸಾಮರಸ್ಯವನ್ನು ತರೋದಕ್ಕೊಸ್ಕರ ಸಂಗೀತವನ್ನಾ ಪ್ರಭಾವಶಾಲಿಯುತವಾದ ಮಾಧ್ಯಮವನ್ನಾಗಿ ಮಾಡಿದ್ರು . . .
"ಕುಲ ಕುಲ ಕುಲ ವೆಂದು ಹೋದೆದಾಡದಿರಿ ನಿಮ್ಮ ಕುಲದ ನೆಲೆ ಎನಾದರು ಬಲ್ಲಿರಾ?" ಅಂತಾ ಕಿರ್ತನಕಾರರು ಹೇಳಿದ್ರೆ,"ಜಾತಿ ಹಿನನ ಮನೆಯ ಜ್ಯೋತಿ ತಾ ಹಿನವೇ?" ಎಂದು ನುಡಿಯುತ್ತಾರೆ ವಚನಕಾರರು.ಮಹಾಭಾರತದಲ್ಲು ನೋಡ್ತೆವೆ ನಾವು ಭಗವಾನ ಶ್ರೀ ಕೃಷ್ಣ ಸಹಾ ಅರ್ಜುನನ ಉತ್ಸಾಹ ತುಂಬ ಬೇಕಾದರೆ ಅವನಲ್ಲಿಕರ್ತವ್ಯದ ಪ್ರಜ್ನೆ ಉಂಟು ಮಾಡ ಬೇಕಾದರೆ"ಭಗವತ್ ಗೀತೆ" ಯನ್ನೆಹಾಡಬೇಕಾಯಿತು. ಬ್ರೀಟಿಶರ ಕಾಲದಲ್ಲಿ ನಮ್ ದೇಶದಲ್ಲಿ ನಮ್ ಜನರಲ್ಲಿ ಒಂದು ರೀತಿಯ ಜಡತ್ವ ಕವಿದಿತ್ತು ಈ ಜಡತ್ವವನ್ನಾ ಬಡಿದೋಡಿಸಿ ಸ್ವಾತಂತ್ರ್ಯಕ್ಕಾಗಿ ಎಂಥ ತ್ಯಾಗ ಬಲಿದಾನಗಳನ್ನಾದ್ರು ಮಾಡೊದಕ್ಕೆ ಜನ ತಯಾರ್ ಆಗಬೇಕು ಅದಕ್ಕಾಗಿ ಪ್ರೇರಣೆ ಕೊಟ್ಟಂಥಾ ಹಾಡು "ವಂದೇ ಮಾತರಂ". ವಂದೇ ಮಾತರಂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ತಿರುವುಕೊದ್ದಷ್ಟೆ ಅಲ್ಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ಹೊಸಾ ವ್ಯಾಪಕತೆಯನ್ನಾ ಕೊಡ್ತು,ಒಂದು ಹೊಸ ರಭಸವನ್ನು ಕೊಡ್ತು.ವಂದೇ ಮಾತರಂ ಇದು ಎರಡು ಪದಗಳನ್ನಾ ಜೋಡಿಸುವಂಥಾ ಸಂಗೀತ ಅಷ್ಟೆ ಅಲ್ಲ ವಂದೇ ಮಾತರಂ ಕನ್ನಡದಲ್ಲಿ ಇದರ ಅರ್ಥ "ತಾಯಿಯೆ ವಂದಿಸುವೇ" ಮಗು ಮತ್ತು ತಾಯಿಯ ನಡುವೆ ಪವಿತ್ರವಾದ ಸಂಭದ ಇದೆ , ತಾಯಿಯ ಕುರಿತಾಗಿ ಮಗ ತನ್ನ ಶ್ರದ್ಧಾ ಭಕ್ತಿಗಳನ್ನಾ ಕೃತಜ್ನತೆಗಳಿಂದ ವ್ಯಕ್ತಗೊಳಿಸುವ ಭಾವ ಇಲ್ಲಿ ತುಂಬಿಕೊಂಡು ಬಂದಿದೆ. ಇನ್ನು ರಾಷ್ಟ್ರಿಯ ಮಟ್ಟಕ್ಕೆ ಏರಿದಾಗ ಮಾತೃಭೂಮಿಯೆ ತಾಯಿ ಅದಕ್ಕೆ ಸೇರಿದ ಜನಗಳೆ ಆಕೆಯ ಮಕ್ಕಳು. ಮಾತ್ರುಭೂಮಿ ಮತ್ತು ಮಕ್ಕಳ ನಡುವಿನ ಸಂಭದವೆ ರಾಷ್ಟ್ರಿಯತೆ ಅಂತಾ ನಾವು ಕರೆಯುತ್ತೆವೆ ಈ ರಾಷ್ಟ್ರಿಯತೆಯನ್ನಾ ಸಾರಿ ಹೇಳುವ ಮಂತ್ರ " ವಂದೇ ಮಾತರಂ".
- - ಮುಂದುವರೆಯುವುದು