ಚಿಗುರಲಿ ಕನಸು...

ಚಿಗುರಲಿ ಕನಸು...

ಬರಹ

ಹಟ್ಟಿಯಲ್ಲಿ ಹುಟ್ಟಿದ ಮಗುವಿಗೆ ತಟ್ಟಿಯ ಮನೆಯೇ ಅರಮನೆ. ಜನಜಂಗುಳಿಯ ನಡುವೆ ಎಲ್ಲಿ ಕಾಲಡಿಗೆ ಸಿಲುಕಿ ಇಲ್ಲವಾಗುತ್ತಾರೋ ಅನ್ನುಷ್ಟು ಚಿಕ್ಕಮಕ್ಕಳು, ಹಾಲುಗಲ್ಲದ ಈ ಪುಟಾಣಿಗಳು ನುಸುಳುತ್ತಿರುತ್ತವೆ. ಬದುಕ ಗಡಿಯನ್ನು ಉರುಳಿಸುತ್ತಿರುತ್ತವೆ.

ಇಂತವರು ನಮ್ಮ ಮುಂದೆ ಬಂದು ಬಟ್ಟಲು ಹಿಡಿವಾಗ ಎಂತವರಿಗದರೂ ಒಮ್ಮೆ ಕರುಳು ಚುರುಕ್ ಎನ್ನದಿರಲು ಸಾಧ್ಯವಿಲ್ಲ. ಹೊಸಹುರುಪಿನ ಪುಟ್ಟ ಕನಸಿನ ಚೀಲದಲ್ಲಿ ಬಳಪದ ಕಡ್ಡಿಗಳನ್ನು ಭದ್ರ ವಾಗಿ ಬಚ್ಹಿಟ್ಟುಕೊಂಡು ಶಾಲೆಗೆಹೋಗುವ ಕಾಲವದು. ಆದರೆ ಇವರ ಬಾಲ್ಯದ ಕಲ್ಪನೆಯೇ ಬೇರೆ!

ಬಸ್ ಸ್ಟ್ಯಾಂಡ್ ನ ಯಾವುದೋ ಮೂಲೆಯಲ್ಲಿ,ಕೊರೆವ ಚಳಿಯಲ್ಲಿ ನಡುಗುತ್ತಾ ನಿದ್ರಿಸುವ ಇವರ ಕನಸುಗಳೇ ಬೇರೆ. ಸ್ವಲ್ಪವೂ ಪರಿವಿಲ್ಲದೆ ಶೌಚಾಲಯದ ವಾಸನೆಯಲ್ಲಿ ಸೊಳ್ಳೆಯ ಸಂಗೀತದಲ್ಲಿ, ಮೂಲೆಯಲ್ಲಿ ಉದುರಿದ ಮಲ್ಲಿಗೆಯಂತೆ ಮುದುಡಿ ನಿದ್ರಿಸುವ ಇವರದು ಸುಂದರ ನಿದ್ದೆ !! ಅ ನಿದ್ದೆಯೊಳಗೆ ತುಟಿಯಂಚಲಿ ಕಿರುನಗೆ ಮೂಡಿಸುವ ಅದೇನೋ ಕನಸು.ಹಸಿದು ಮಲಗಿದ ಕೂಸು ಮ್ರುಶ್ಟಾನ್ನ ಭೋಜನದ ಕನಸು ಕಾಣುತ್ತದೆ. ಹರಿದು ಚೂರಾದ ಬಟ್ಟೆಗಳ ನಡುವೆ ಆತ ಮೈ ತುಂಬಾ ಸುಂದರವಾದ ಬಟ್ಟೆ ಧರಿಸಿರುವಂತೆ ಕನಸ ಕಾಣುತ್ತನೆ. ಹೌದು ಅವರ ವಯಸ್ಸೂ ಅಶ್ಟೆ ಇಂತಹ ಕನಸುಗಳನ್ನೇ ಕಾಣುವಂತದ್ದು. ಹಾರುವ ಕಾಗೆಗೆ ಮನಸೋಲುವಂತದ್ದು.

ಈ ಹಂತದಲ್ಲಿ ಪರಿಸರ ಮತ್ತು ಪರಿಸ್ಥಿತಿ ಎರಡೂ ಸುಂದರವಾಗಿರಬೇಕು.ಆಗ ಅವರೊಡನೆ ಮನಸ್ಸೂ ಬೆಳೆಯುತ್ತದೆ. ಹೀಗೆ ಬೀದಿಯಲ್ಲಿ ಬೆಳೆದ ೧೦೦ಕ್ಕೆ ೯೦ರಶ್ಟು ಮಕ್ಕಳು ವಿದ್ಯೆಯ ಕನಸೂ ಕಾಣಲಾರರು. ಹೊಟ್ಟೆಗೆ ಹಿಟ್ಟಾದರೆ ಜುಟ್ಟಿಗೆ ಮಲ್ಲಿಗೆ ಅನ್ನುತ್ತೇವಲ್ಲಾ, ಇವರಿಗೆ ಶಾಲೆ ಎಂಬುದು ಜುಟ್ಟಿನ ಮಲ್ಲಿಗೆಯಂತೆ.

ಈ ಬೀದಿ ಮಕ್ಕಳ ಬತ್ತಿದ ಕಂಗಳಲ್ಲಿ ಬೆಳಕು ಮೂಡಬೇಕು. ಅವರೂ ಹೊಸ ಕನಸುಗಳಿಗೆ ಜೀವತುಂಬುವಂತಾಗಬೇಕು. ಆಗಲೇ ನಾವು ಸುಬದ್ರ ಸಮಾಜದ ಕನಸ ಕಣಬಹುದು!