ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ

ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ

ಬರಹ

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಕವಿ ಡಾ|| ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ. ತಾವು ಅನೇಕರು ಜಿ ಎಸ್ ಎಸ್ ಅವರ ಎಷ್ಟೋ ಕವಿತೆಗಳನ್ನು ಓದಿದ್ದೀರಿ, ಹಾಡುಗಳನ್ನ ಕೇಳಿದ್ದೀರಿ, ಕನ್ನಡದ ತುಂಬ ಜನ ಪ್ರೀತಿಯನ್ನು ಗಳಿಸಿಕೊಂಡಿರುವ, ನಮ್ಮ ಎಷ್ಟೋ ಭಾವನೆಗಳಿಗೆ ಮಾತನ್ನು ಕೊಟ್ಟಿರುವ ಬಹಳ ಮುಖ್ಯವಾದ ಕವಿ ಅವರು. ಮೊನ್ನೆ ತಾನೆ, ಅಂದರೆ ಫೆಬ್ರುವರಿ ೭ನೇ ತಾರೀಖು ನಮ್ಮ ಜಿ ಎಸ್ ಎಸ್ ಅವರಿಗೆ ೮೦ ವರ್ಷ ತುಂಬಿ, ಈಗ ೮೧ರ ಹರೆಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ:

೧. ಕಾವ್ಯೋದ್ಯಮ ಶುರು ಮಾಡಿದ್ದು, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು, ಬಾಲ್ಯ

೨. ಕಾವ್ಯಗಳಲ್ಲಿ 'ಕತ್ತಲು ಬೆಳಕು' ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಅಂತರಜಾಲದ ಕನ್ನಡಿಗರಿಗಾಗಿ ತಮ್ಮ ನೆಚ್ಚಿನ ಮೂರು ಕವನಗಳನ್ನೂ ಓದಿ, ತಮ್ಮ ಧ್ವನಿಯಲ್ಲೇ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

>ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ.

(೨೮ MB) ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

gss-oln
Dr G S Shivarudrappa