ಐಟಿ ಸಿಟಿ

ಐಟಿ ಸಿಟಿ

ಬರಹ

"ಹತ್ತು ಸಾವಿರ " ಮಹೇಶ ಬಿಟ್ಟ ಬಾಯಿ ಬಿಟ್ಟ ಹಾಗೆ ಕೂತಿದ್ದ.
ಶಿವು ಹೇಳುತಿದ್ದ " ಲೊ ಮಹಿ ಇನ್ನೆಷ್ಟು ದಿನ ಅಂತ ಹೀಗೆ ಈ ಹಳ್ಳಿನಲ್ಲಿ ಕೂತಿರ್ತೀಯ?. ನನ್ನನ್ನು ನೋಡು ಬೆಂಗಳೂರಿಗೆ ಹೋಗಿದ್ದೇ ಆಟೊಂದು ದೊಡ್ಡ ಕಂಪನಿನಾಗೆ ಕೆಲಸ ಸಿಕ್ತು . ನಿಂಗೊತ್ತೇ ನಂಗೇ ಏಟು ಸಂಬಳ ಅಂತ. ನಿಂಗೆ ಕನಸಲ್ಲೊ ತಿಳಿಯಾಕಿಲ್ಲ ಬಿಡು . ಹತ್ತು ಸಾವಿರ ರೂಪಾಯಿ ಸಂಬ್ಳ ."
"ಅದು ಹ್ಯಾಗೋ ನೀನು ಮಾಡಿರೊ ಎಂಟನೇ ಕ್ಲಾಸ್ಗೆ ಯಾರೋ ಕೊಡ್ಥಾರೊ ಆಷೊಂದು . " ಮಹೇಶನಿಗೆ ಅನುಮಾನ
"ಅಯ್ಯೊ ನಾನೇನು ನಿನ್ನಂಗೆ ಶೆಟ್ಟರಂಗಡೀಲಿ ಲೆಕ್ಕ ಬರೀತಾ ಇದೀನಾ. ನಾನು ಕೆಲಸ ಮಾಡ್ತಾ ಇರೋದು ಇಡಿ ಪ್ರಪಂಚದಾಗೆ ಪೇಮಸ್ ಆಗಿರೊ ಐಟಿ ಕಂಪನಿನಾಗೆ.
ಅದು ಎಲೆಕ್ತ್ರಾನ್ನಿಕ್ ಸಿಟಿನಾಗೆ ಐತೆ. ಅದನ್ನು ಏನೊ ಐಟಿಸಿಟಿ ಅಂತಾರೆ ಗೊತ್ತಾ" ಶಿವು ವಿವರಿಸುತಿದ್ದಂತೆ ಅವನನ್ನೆ ಗಮನಿಸುತಿದ್ದ ಮಹೇಶ .
ಶಿವು ಮಹೇಶ ಇಬ್ಬರು ಒಂದೆ ಸ್ಕೂಲಿನಲ್ಲಿ ಓದಿದವರು. ಶಿವು ಎಂಟನೇ ತರಗತಿಯಲ್ಲೆ ಫೇಲ್ ಆಗಿ ಬೆಂಗಳೂರಿಗೆ ಹೋಗಿದ್ದ. ಮಹೇಷ ಮಾತ್ರ 10ನೇ ತರಗತಿ ಓದಿದ. ಮುಂದೆ ಓದಲು ಇಷ್ಟವಿದ್ದರೂ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಓದಲಿಲ್ಲ . ಆಂದಿನಿಂದ ಶೆಟ್ಟರ ಆಂಗಡಿಯಲ್ಲಿ ಕೆಲಸ ಮಾಡುತ್ತಿದ್ದ .
ಗೌರಿಯೊಡನೆ ಮದುವೆಯೋ ಆಗಿ ಇಬ್ಬರು ಮಕ್ಕಳೂ ಆಗಿದ್ದರು . ಅಲ್ಲಿಯೆ ಸರಕಾರಿ ಸ್ಕೂಲಿನಲ್ಲಿ ಓದಿಸುತ್ತಿದ್ದ. ಬದುಕು ಹಗುರವಾಗಿ ಸಾಗುತ್ತಿತ್ತು ಶಿವು ಬರುವವರೆಗೆ.
ಶಿವು ಮನೆಗೆ ಹೋದ ಮೇಲೂ ಮಹೇಶನ ತಲೆಯಲ್ಲಿ ಹತ್ತು ಸಾವಿರವೇ ನರ್ತನ ಮಾಡುತಿತ್ತು. ತಾನಂತೂ ಒಳ್ಳೆಯ ಶಾಲೆಯಲ್ಲಿ ಓದಲಿಲ್ಲ .
ದೊಡ್ಡ ಮನುಶ್ಯ ಅನ್ನಿಸಿಕೊಳ್ಳಲಿಲ್ಲ . ಹತ್ತು ಸಾವಿರ ಬಂದರೆ ಮಕ್ಕಳನ್ನು ಚೆನ್ನಾಗಿ ಓದಿಸಿ ಮುಂದೆ ತರಬೇಕು ಅನಿಸಲಾರಂಭಿಸಿತು.
ಇಷ್ಟು ದಿನ ಏನೂ ಅನಿಸದಿದ್ದ ಹಳ್ಳಿ ಈಗ ಬೇಡವೆನಿಸಿತು. ಗೌರಿಯೂ ಒಗ್ಗರಣೆ ಹಾಕಿದಳು. ಮಕ್ಕಳು ತಾಳ ಹಾಕಿದರು.
ಮಹೇಶ ಶಿವುನನ್ನು ಕೇಳಿಕೊಂಡ . " ನಂಗೂ ಒಂದು ಕೆಲಸ ಕೊಡಿಸೊ ಅಲ್ಲಿ. " ಶಿವು "ತಥಾಸ್ಥು " ಎಂದ.
ಮಾರನೆ ದಿನವೇ ಮಹೇಶ ಶಿವನೊಡನೆ ಬೆಂಗಳೂರಿಗೆ ಹೊರಟ .
ಶಿವು ಮೊದಲು ಮಹೇಶನನ್ನು ಒಂದು ಸಣ್ಣಾ ಆಫೀಸಿ ಕರೆದೊಯ್ದ
"ಇದೇನೊ ಶೆಟ್ಟ್ರಂಗಡಿಗಿಂತ ಚಿಕ್ಕದ್ದಾಗಿದೆಯಲ್ಲೊ?"
" ಇದು ನಂಗೆ ಅಲ್ಲಿ ಕೆಲಸ ಕೊಡಿಸಿರೋರು. ನಾನು ಕಾಂಟ್ರಕ್ಟನಾಗೆ ಕೆಲಸ ಮಾಡ್ತಾ ಇರೋದು."
ಆಂಗಂದ್ರೆ, ಅಲ್ಲಿ ಕೆಲಸ ಕೊಡಿಸೋರು, ಬಿಡಿಸೋರು, ಸಂಬಳ ಕೊಡೋರು ಎಲ್ಲಾ ಇವರೆ. "
" ಪಾಪ ಎಷೊಂದು ಒಳ್ಳೆಯವರು . ಮತ್ತೆ ಇವರಿಗೆ ದುಡ್ಡು ಎಲ್ಲಿಂದ ಬರುತ್ತೆ ನಿಂಗೆ ಸಂಬ್ಳ ಕೊಡೋಕೆ?"
" ಅಯ್ಯೊ ಗುಗ್ಗು ಕಣ್ಲಾ ನೀನು ಇವರು ಅವರ ಹತ್ತಿರ ಜಾಸ್ಥಿ ದುಡ್ಡು ತಗೊಂಡು ನಮಗೆ ಕಡಿಮೆ ಸಂಬಳ ಕೊಡ್ಥಾರೆ"
" ಹಂಗಾ ಮತ್ತೆ ಅವರ ಹತ್ರ್ರಾನೆ ಸಂಬ್ಖಾ ತಬೋದಲ್ಲವಾ?"
ಶಿವು ತಲೆ ಕೆರೆದುಕೊಂಡ " ಔದಲ್ಲವಾ . ನಂಗೆ ಹೊಳಿಲೇ ಇಲ್ಲ . ಓಗ್ಲಿ ಬಿಡು ದೊಡ್ಡ್ಡೋರ ಸಮಾಚಾರ ನಮಗ್ಯಾಕೆ "
"ಏನೋ ಶಿವು ಇಲ್ಲಿವರೆಗೆ ಬಂದಿದೀಯ. ಯಾಕಯ್ಯ ಡ್ಯೂಟಿಗೆ ಹೋಗಿಲ್ಲವಾ?" ಅಲ್ಲಿರುವ ಒಬ್ಬ ವ್ಯಕ್ಥಿ ಕೇಳಿದ.
" ಇವರು ನಮ್ಮ ಬಾಸ್. ಸರೂ ಇವನು ನನಾ ಪ್ರೆಂಡ್ . ಇವನಿಗೆ ಒಂದು ಕೆಲಸ ಬೇಕಂತೆ. ಏಂಗಿದ್ದರೂ ನಾನು ಹಳ್ಳಿಗೆ ಓಗ್ಥೀನಿ . ನನ್ ಕೆಲಸ ಇವನಿಗೆ ಕೊಟ್ಬಿಡಿ."
ಮಹೇಶನಿಗೆ ಅಚ್ಚರಿ ." ಯಾಕೊ ಯಾವ ಹಳ್ಳಿಗೆ ಹೊಗ್ತೀಯ?. " ಪಿಸುಗುಟ್ತಿದ
ಶಿವು" ಸುಮ್ನಿರೊ " ಎಂದ
ಬಾಸ್ ಮಹೇಶನನ್ನು ಮೇಲಿನಂದ ಕೆಳಗಿನವರೆಗೆ ನೋಡಿ " ಎಲ್ಲಾ ಡಾಕುಮೆಂಟ್ಸ್ ತಂದಿದ್ಯಾ" ಎಂದ.
" ಎಲ್ಲಾ ತಂದಿದಾನೆ ಸರೂ" ಶಿವೂನೆ ಮಾತ್ತಡಿದ.
ಬಾಸ್ " ಎಲ್ಲವನ್ನು ನೋಡಿದ ನಂತರ ಒಂದಷ್ಟು ಪತ್ರವನ್ನು ತಂದು ಇಟ್ಟರು . "ಇದರ ಮೇಲೆ ಸೈನ್ ಮಾಡು"
ಮಹೇಶ ಅದನ್ನು ನೋಡಿದ . ಎಲ್ಲಾ ಇಂಗ್ಲಿಷನಲ್ಲೆ ಇತ್ತು . ಕೂಡಿಸಿ ಓದಲು ಪ್ರಯತ್ನಿಸುತ್ತಿದ್ದಂತೆ , "ಏಯ್ ಫಸ್ಟ್ ಸೈನ್ ಮಾಡೊ ನಿನ್ನಾಸ್ತಿ ಏನೂ ಬರೆಸಿಕೋಳ್ತಾ ಇಲ್ಲ ." ಬಾಸ್ ಗದರಿದ.
ಶಿವು ಮೆಲ್ಲಗೆ "ಬೇಗ ಸೈನ್ ಮಾಡೊ " ಎಂದ. ಮಹೇಶ ಕೊಡಲೆ ಸೈನ್ ಮಾಡಿದ.
"ಶಿವು ಇವನಿಗೆ ಕಂಪನಿ ತೋರಿಸಿ ಏನು ಕೆಲಸ ಮಾಡ್ಬೇಕು ಅಂತ ಹೇಳ್ಕೊಡು . ಇದು ಇವನ ಐಡಿ ಕಾರ್ಡ್. ನೋಡು ಮಹೇಶ ಇದನ್ನು ಹಾಕೊಂಡ್ರೇನೆ ಅಲ್ಲಿ ಒಳಗೆ ಬಿಡೊದು. ದಿನಾ ಹಾಕಿಕೊಂಡು ಬಾ ತಿಳೀತಾ?"
ಗೊತ್ತಾಯಿತೆಂಬಂತೆ ತಲೆ ಆಡಿಸಿದ .
"ಸರೂ ನಂದು ಸೆಟ್ಲ ಮಾಡ್ಥೀರಾ? " ಶಿವು ಬಾಸನ್ನ ಕೇಳಿದ
"ಅಯಿತು ಇವಂದು ಮುಗಿಸಿ ಬಾ "
ಅಲ್ಲಿಂದ ಹೊರಗೆ ಬಂದ ತಕ್ಷಣ ಮಹೇಶ ಕೇಳಿದ " ಯಾಕೊ ಷಿವು ನೀನು ಕೆಲಸ ಬಿಡ್ತಾ ಇದ್ದೀಯ ನಂಗೆ ಕೆಲ್ಸ ಕೊಡ್ಸಕ್ಕೊಸ್ಕರಾನಾ?"
" ಏ ಇರಲಿ ಬಿಡೋ ಇದೆಲ್ಲ ಸ್ನೇಹಿತನಿಗೋಸ್ಕರ . ನಾನೇನು ಬೇರೆ ಯಾವದಾದರೂ ಕೆಲಸ ಸಿಗುತ್ತೆ."
"ಸರಿ ಕಣೊ ಬಾರೊ ಅದೆ ನಮ್ ಕಂಪನಿ. "
ಮಹೇಶ ಬೆಕ್ಕಸ ಬೆರಗಾದ. ದೊಡ್ಡ ಕಂಪನಿ ಅದು . ವಿಚಿತ್ರ ವಿಚಿತ್ರ ಆಕಾರ ದಲ್ಲಿ ವಿಭಿನ್ನ ಶೈಲಿಯಲ್ಲಿ ಕಟ್ಟಿಸಿದ್ದರು . ಅಲ್ಲಿ ಕೆಲಸ ಮಾಡುವ ಜನರು ಮಹೇಶನ ಹಳ್ಳಿಯ ಜನರ ದುಪ್ಪಟ್ಟಿನಷ್ಟು ಇದ್ದರು.
ವಿಧ ವಿಧವಾದ ಜನ . ವಿಧವಿಧ ವಾದ ಶೊಕಿ. ಹೆಂಗಸರು ಗಂದಸರಿಗೆ ಬೇಧ ತಿಳಿಯದಷ್ಟು ಸಾಮ್ಯ.
ತಿನ್ನಲು ಹೋಟೆಲ್, ಜಿಮ್, ವಿಶಾಂತಿ ಕೊಠಡಿ.
ಸುಸ್ತಾಗಿ ಹೋದ. ಇಂತಹ ಕೆಲಸ ಕೊಡಿಸಿದ್ದಿದಕ್ಕಾಗಿ ಸ್ನೇಹಿತನಿಗೆ ನೂರ್ಂದು ನಮನ ಸಲ್ಲಿಸಿದ.
ಒಳಗೆ ಹೋಡ ನಂತರ ಇವನ ಕೆಲಸವೇನು ಎಂಬುದನ್ನು ಹೇಳಲಾಯಿತು. ಅದು ಆಫೀಸ್ ಬಾಯ್ ಕೆಲಸ . ಮೊದಲು ಕಸಿವಿಸಿ ಎನಿಸಿದರೂ ಸಂಬಳದ ಆಸೆಗೆ ಒಪ್ಪಿದ

ಶಿವು ಹೇಳಿದ "ನಿಮ್ಗೆ ಮನೆ ಸಿಗೊ ತನಕ ನಮ್ಮನೇಲೆ ಇರು
ಹೇಗಿದ್ದರೂ ನಾನು ಬೇರೆ ಕಡೆಗೆ ಹೊಗ್ಥೀನಿ ನಾನೇನು ಈ ಮನೇಲಿ ಇರಲ್ಲ. ಆದರೆ ನನ್ನ ಫ್ರೆಂಡ್ಸ್ನ ಕೇಳಬೇಕು.
ನಾವೆಲ್ಲ ಒಂದು ಮನೆನಲ್ಲಿ ೬ ಜನ ಇದೀವಿ ೬ ಸಾವಿರ ಬಾಡಿಗೆ ಕಟತೀವಿ. ನೀನು ಬಂದರೆ ಅದನ್ನೆ ಕಟ್ಬೇಕು.
ಆದರೆ ಮಹೇಶನ ಪೂರ್ತಿ ಸಂಸಾರ ಇಲ್ಲಿಗೆ ಬರಬೇಕಿತ್ತು. ಹಾಗಾಗಿ ಬೇರೆ ಮನೆ ಹುಡುಕುವುದು ಎಂದು ನಿರ್ಧಾರವಾಯಿತು.
ನಂತರ ಶುರುವಾಯಿತು ಮನೆ ಬೇಟೆ . ಶಿವು ಆಗಲೆ ಬೇರೆಡೆ ಹೋದ . ಮಹೆಶ ಮನೆ ಹುಡುಕಲು ಆರಂಭಿಸಿದ
ಇದು ಐಟಿಸಿಟಿ ಎಂದು ಬಹಳ ಬೆಲೆ
ಬೆಂಕಿ ಪೊಟ್ಟಣದ ಮನೆಗಳು ೨೫೦೦ ರೂಗಳಿಗೆ ಕಡಿಮೆ ಇಲ್ಲ.
ಆ ಮನೆಗಳು ಮಹೇಶನಿಗೆ ಹಿಡಿಸಲಿಲ್ಲ.ಸ್ವಲ್ಪ ಚೆನ್ನಾಗಿರುವ ಮನೆಗಳು ಅದು ಸಿಂಗಲ್ ಬೆಡ್ ರೂಮ್ ಮನೆಗಳು ೩೫೦೦ .
ಕೆಲವು ಕಡೆಯಂತೂ ಫ್ಯಾಮಿಲಿಯವರಿಗೆ ಮನೆ ಕೊಡುವುದಿಲ್ಲ ಎಂದು ಹೇಳಿದರು. ಇದು ಯಾಕೆ ಎಂದರೆ ಫ಼್ಯಾಮಿಲಿಯವರು ನೀರು ಜಾಸ್ತಿ ಖರ್ಚು ಮಾಡುತ್ತಾರೆ ಎಂದು. ಮನೆ ಮಾಲಿಕರ ದರ್ಪ . ಮನೆಗೆ ಏಷ್ಟಾದರೂ ಪರವಾಗಿಲ್ಲ ಎಂದು ಬಂದು ಹೋಗುವ ಆವನ ಕಂಪನಿಯ ಸಾಫ್ಹ್ಟ್‍ವೇರ್ ಜನರು.
ಮಹೇಶನಿಗೆ ತಲೆ ತಿರುಗುವಂತಾಯಿತು.
ಹೇಗೊ ಕೊನೆಗೆ ಒಂದು ಮನೆ ೩೫೦೦ಕ್ಕೆ . ನೀರಿಗೆ ತಲೆಗೆ ನೂರರಂತೆ ಬೇರೆ ಹಣ ಕೊಟ್ಟು ಮನೆ ಮಾಡಿದ.
ಹೆಂಡತಿ ಹಾಗು ಮಕ್ಕಳನ್ನು ಕರೆಸಿಕೊಂಡ .
ಸಂಸಾರ ಶುರುವಾಯಿತು.
ಹಾಲಿನ ರೇಟ್ ಕೇಳಿ ಹೌಹಾರಿಹೋದಳು ಗೌರಿ./
ಹಳ್ಳಿಯಲ್ಲಿ ಕೇವಲ ೫ ರೂಗೆ ಪಾತ್ರೆಯ ತುಂಬ ಹಾಲು ಬರುತ್ತಿತ್ತು . ಆದರೆ ಇಲ್ಲಿ ಅದೇ ಹಾಲಿಗೆ ೨೨ ರೂ ಗಳನ್ನು ಕೊಡಬೇಕು.

ಊರಿನಲ್ಲಿ ಗೌರಿ ಒಂದು ಸಣ್ಣ ತೋಟವನ್ನು ಮಾಡಿದ್ದಳು . ಹಾಗಾಗಿ ಅಲ್ಲಿ ತರಕಾರಿ ಆಗಲಿ ಹೂವಿಗಾಗಲಿ ಕೊರತೆ ಇರಲಿಲ್ಲ . ಇಲ್ಲಿನ ತರಕಾರಿ ಬೆಲೆ ಕೇಳಿ ನಡುಗಿ ಹೋದನು. ದಿನಕ್ಕೆ ೩೦ ರೂ ತರಕಾರಿಗೆ ಕೊಡಬೇಕು.
ಹೂವಿಗೆ ೫ ರೂ.
ಹೇಗೊ ಕಾಲ ತಳ್ಳಿದರಾಯಿತು ಎಂದು ಒಂದು ತಿಂಗಳು ಅಯಿತು.
ಮಹೇಶನ ಕೈಗೆ ಸಂಬಳ ಬಂತು.
ಸಂಬಳದ ಚೀಟಿಯಲ್ಲಿ ೧೦೦೦೦ ಎಂದಿದ್ದರೂ ಕೈಗೆ ಸೇರಿದ್ದು ಕೇವಲ ೮೫೦೦ . ಪಿ ಎಫ್. ಅದು ಎದು ಎಂದು ಹಿಡಿಯುತ್ತಾರೆ ಹಾಗು ಕೆಲಸ ಕೊಡಿಸಿದ ಬಾಸ್ಗೆ ಒಂದಷ್ತು ಪಾಲು ಹೋಗುತ್ತದೆ ಎಂದು ತಿಳಿಯಿತು.

ಹಳ್ಳಿಯಲ್ಲಿ ಬಾಯಿ ಮುಚ್ಚಿಕೊಂಡಿದ್ದ ಮಕ್ಕಳು ಟಿವಿ ಬೇಕೆಂದು ಹಟ ಹಿಡಿದರು .
ಅದಕ್ಕೂ ಗೌರಿಯೇ ಒಂದು ದಾರಿ ಕಂಡುಹಿಡಿದಳು . ದೊಡ್ಡ ದೊಡ್ಡ ಬ್ಯಾಂಕನವರು ಈ ರೀತಿ ಮನೆ ಅವಶ್ಯಕತೆಗಳನ್ನು ಪೂರೈಸಲು ಸಾಲ ಕೊಡುತ್ತಿದ್ದರು.
ಸಾಲ ಮಹೆಶನ ಸಂಬಳಕ್ಕೆ ಸುಲಭವಾಗೇ ಸಿಕ್ಕಿತು. ಊರಿನವರ ಬಳಿಯಲ್ಲೆಲ್ಲ ಮೊಬೈಲ್ ಇದ್ದು ತನ್ನ ಬಳಿ ಇಲ್ಲವೆಂದರೆ ಹೇಗೆ ಎಂದು ಒಂದು ಮೊಬೈಲನ್ನು ಕೊಂಡುಕೊಂಡ ಅದೂ ಕಂತಿನಲ್ಲಿಯೆ.
ಮಹೇಶ ಒಮ್ಮೆ ಲೆಕ್ಕ ಹಾಕಿದ
ಬಾಡಿಗೆ ೩೮೦೦ ಹಾಗು ತರಕಾರಿ ೧೦೦೦ ರೇಶನ್‍ಗೆ ೧೫೦೦ + ಕಂತುಗಳು ೧೦೦೦ ಮಕ್ಕಳ . ಬೇರೆ ಖರ್ಚಿಗೆ ಸಾವಿರ್ ಎಂದರೆ ಉಳಿತಾಯ ಎಲ್ಲಿಂದ?
ಹಳ್ಳಿಯಲ್ಲಿ ಸ್ವಂತ ಮನೆ ಬಾಡಿಗೆ ಇರಲಿಲ್ಲ . ತರಕಾರಿಗೆ ದುಡ್ಡಿರಲಿಲ್ಲ . ರೇಷನ್‍ ಅಬ್ಬಬ್ಬ ಎಂದರೆ ೮೦೦ ಆಗುತಿತ್ತು . ಹಾಲಿಗೆ ೧೫೦ ರೂ. ಮತ್ತಿನ್ನ್ಯಾವ ಖರ್ಚಿತ್ತು?
ಈ ಕಂತು, ಮೊಬೈಲ್ ಬಿಲ್ , ಬಾಡಿಗೆ ಅಬ್ಬಬ್ಬ ಎನಿಸಿತು.
ಶೆಟ್ಟರು ಕೊಡುತ್ತಿದ್ದ ೩೦೦೦ ರೂನಲ್ಲಿ ಯಾವದೇ ತೊಂದರೆ ಇಲ್ಲದೆ ಎಲ್ಲ ಮುಗಿಸಿ ೧೫೦೦ ರೂಗಳನ್ನು ಸೇರಿಸಿ ಇಡುತ್ತಿದ್ದ . ಆದರೆ ಈ ಐಟಿ ಸಿಟಿಗೆ ಬಂದು ಏನೂ ಇಲ್ಲವಾಗಿತ್ತು . ಜೊತೆಗೆ ಸಾಲ. ಊರಿಗೆ ಹೋಗೊಣ ಎಂದೆನಿಸಿತು . ಬಾಸ್ ಬಳಿ ಹೋಗಿ ಹೇಳಿದ . ಬಾಸ್ ಅಯ್ತು ಎಂದರು. ಸರ್ ನನ್ನ ಪ್.ಎಫ್ ಹಾಗು ಹಿಡಿದಿದ್ದ ದುಡ್ಡು ಕೊಡ್ತೀರ ಎಂದ. "ಈನು ಅಗ್ರೀಮೆಂಟ್ನಲ್ಲಿ ಸೈನ್ ಮಾಡಿದೀಯ ನೀನಾಗೆ ಕೆಲಸ ಬಿಟ್ಟರೆ . ಇನ್ನೊಬ್ಬರನ್ನು ಕೆಲಸಕ್ಕೆ ಸೇರಿಸೋ ತನಕ ನಿನ್ನ ಯಾವುದೆ ದುಡ್ಡನ್ನ ತಗೊಳ್ಳೊ ಹಾಗಿಲ್ಲ. ಯಾರನ್ನಾದರೂ ಸೇರಿಸು ಇಲ್ಲ ಆಂದರೆ ಈ ದುಡ್ಡು ಕೇಳಬೇಡ ಏಂದರು.
ಮಹೇಶನಿಗೆ ಈಗ ತನ್ನ ಸ್ನೆಹಿತ ಶಿವುನ ಸ್ನೆಹ ಅರ್ಠವಾಗಿತ್ತು. ಆದರೆ ಅವನಾದರೂ ಏನೂ ಮಾಡುವಂತಿದ್ದ . ಮರುದಿನವೇ ಹಳ್ಳಿಯಲ್ಲಿದ್ದ ಇನ್ನೊಬ್ಬ ಸ್ನೇಹಿತ ರಂಗನ ಬಳಿಯಲ್ಲಿ ಹೋಗಿ ಅವನನ್ನು ಪುಸಲಾಯಿಸಿ ಕೆಲಸಕ್ಕೆ ಸೇರಿಸಿ . ಕೈಗೆ ಬಂದ ಹಣದಿಂದ ಸಾಲ ತೀರಿಸಿ ಊರು ಸೇರಿ ಉಸ್ ಎಂದು ಉಸಿರು ಬಿಟ್ಟ