ಇವರಲ್ಯಾರು ನನ್ನವರು?
ಬರಹ
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ
ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ
ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಮುಖ್ಯ ಘಟನೆಗಳ ಮಾತ್ರ ನಾ ಮರೆಯೋಲ್ಲ
ಸುಭಿಕ್ಷ ಕಾಲದಲಿ ಹಿಂದೆ ಇದ್ದವರು ನೂರು
ದುರ್ಭಾಗ್ಯ ಬರಲು ಉಳಿದವರು ಮೂರೇ ಮೂರು
ಕಾಸಿಲ್ಲದೇ ಕೈಲಾಸ ತೋರಿದವರು ಕಡಿಮೆ ಏನಿಇಲ್ಲ
ಮರೆಯಲಾರದ ಪಾಠ ಕಲಿಸಿದವರಿವರೇ ಅಲ್ಲ?
ಮುಳುಗುತಿರಲು ಆಶಯದ ಆಸರೆಯ ತೋರಿದವರೊಬ್ಬರು
ತೆವಳುತ್ತಿದ್ದವಗೆ ನಡೆಯಲು ಕಲಿಸಿದವರಿನ್ನೊಬ್ಬರು
ಮೆಟ್ಟಿಲ ಮೇಲೆ ಕುಳ್ಳಿರಿಸಿ ಮೇಲೆ ಹತ್ತಿಸಿದವರೊಬ್ಬರು
ಉತ್ತುಂಗಕ್ಕೇರಿಸಿ ಕೆಳಗೆ ತಳ್ಳಿದವರು ಮಗದೊಬ್ಬರು
ಹಿಂದಿನಿಂದ ಚೂರಿ ಇರಿದವರೇ ನಮ್ಮ ಮಕ್ಕಳು
ನೋಡಲು ಮಾತ್ರ ಮುಖವಾಡ ಧರಿಸಿದ ಆಕಳು
ಸಣ್ಣ ಇರಿತಕೆ ಒಮ್ಮೆಗೇ ಹೋಗದು ಪ್ರಾಣ
ದಿನ ದಿನಕೆ ದೇಹವಾಗುವುದು ಸಣ್ಣ ಸಣ್ಣ
ತುಳಿದ ಹಾದಿ ನೋಡಿದವರು ನೀವೆಲ್ಲ
ನಿಮಗೆ ಅದರ ಅರಿವಾಗಿರಲಿಕ್ಕಿಲ್ಲ
ಅನುಭವಿಸಿದವಗೆ ತಿಳಿವುದು ದು:ಖ ದುಮ್ಮಾನ
ಇತರರು ಕೇಳುವುದು ಕಣ್ಣೀರಿನ ಹುಸಿಗಾನ