ಇನ್ನೊಂದು ಹಾಡುಗಬ್ಬಮಂ ಪಾಡಿರಿ!

ಇನ್ನೊಂದು ಹಾಡುಗಬ್ಬಮಂ ಪಾಡಿರಿ!

ಬರಹ

ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ ( http://sampada.net/node/1053) ಮತ್ತು ತೆರೆಯೋ ಬ್ರೌಸರ್ರು - ( http://sampada.net/node/1176) ಮಾದರಿಯಲ್ಲಿ ಇನ್ನೊಂದು ಹಾಡುಗಬ್ಬ! ; ಹೂಗಳನ್ನು ಪೋಣಿಸಿ ಹೂವಿನ ಮಾಲೆ ಕಟ್ಟಿದ ಹಾಗೆ , ಶಬ್ದ ಜೋಡಿಸಿ ಸ್ವಸಂತೋಷಕ್ಕೆ ಕಟ್ಟಿ ಹಾಡಿಕೊಂಡ ಹಾಡು .)

ಈಗಾಗಲೇ ಕೇಳಿರದಿದ್ದರೆ , 'ಹುಣ್ಣಿಮೆ' ಧ್ವನಿಸುರುಳಿಯಲ್ಲಿರುವ 'ಹೇಳೆ ಸಖಿ ಹೇಳೇ' ಕೇಳಿದರೆ ಒಳ್ಳೆಯದು.

www.udbhava.com ನಲ್ಲಿ "Hele Sakhi Hele" ಎಂದು ಹುಡುಕಿ ಕೇಳಿರಿ.

ಅದೇ ಧಾಟಿಯಲ್ಲಿ ನಾನು ಈ ಹಾಡುಗಬ್ಬಂ ಪಾಡುವೆಿ ( ಶ್ರೀ ಅ. ರಾ. ಸೇ. ರವರು ಹೇಳಿದಂತೆ!) ಇದರ ಹಿನ್ನೆಲೆ:- ಇತ್ತೀಚೆ ಟ್ರೇನು ಹಿಡಿಯಲು ಅನಗತ್ಯವಾಗಿ ಓಡಿ ಹೋಗಿ ನಮ್ಮ ಸಹೋದ್ಯೋಗಿಯೊಬ್ಬರು ಬಿದ್ದು ಮೂಳೆ ಮುರಿದುಕೊಂಡರು.
---------------------
ಓಡದಿರು ಶ್ರೀಕಾ ,ಓಡಬೇಡವೋ ,
ಓಡುತಿರಲಿ ಇಡಿಯ ಮುಂಬೈ ,
ನೀನು ಓಡಬೇಡ!

ಓಡಿ ಹೋಗಲಿ ಒಂದು ಟ್ರೇನು ,
ಹಿಂದೆ ಬರುವದು ಇನ್ನೊಂದು ತಾನು ,
ನೀನು ಓಡಬೇಡ!

ಫ಼ಾಸ್ಟು ಟ್ರೇನು ನಿನಗೆ ಸಲ್ಲ!
ಸ್ಲೋವೇ ತಕ್ಕುದು ನಿನಗೆ ಕೇಳು ,
ನೀನು ಓಡಬೇಡಾ!

ಕೋಟಿ ಮಂದಿ ಇರಲು ಇಲ್ಲಿ ,
ನಿನ್ನ ಹಾಗೆ ನೀನೆ ಒಬ್ಬ .
ಜೀವ ಇರಲಿ ಭದ್ರ!

ಓಡದಿರು ಶ್ರೀಕಾ ಓಡಬೇಡವೋ ,
ಓಡಿ ಓಡಿ ಇಲ್ಲಿ ಬಂದೆ ,
ಇನ್ನು ಎಲ್ಲಿಗೋಟ?

----- ಇದೇ ಸಮಯಕ್ಕೆ ಇನ್ನೊಂದು ವರ್ಶನ್ನು ಎನ್ನನ್ನು ಎತ್ತಿ ಆಡಿಸು , ಪಾಡಿಕೋ ಎನ್ನುತ್ತಿದೆ.

ಓದದಿರು ಶ್ರೀಕಾ ಓದಬೇಡವೋ ,
ಓದಿ ಓದಿ ಇಲ್ಲಿ ಬಂದೆ , ಇನ್ನು ಎಷ್ಟು ಓದು ?

ಹತ್ತಿ ಕೂಡುವೆ ಹದಿಮೂರು ಮಜಲು ,
ಹತ್ತಿ ಮಲಗುವೆ ಹದಿನಾರು ಮಜಲು!
ಸವೆಸಿ ಬಂದೆ ಜಗದ ಎತ್ರ ,
ಇನ್ನು ಸುಮ್ನೆ ಕೂಡೋ!
--------
ಟಿಪ್ಪಣಿ : - ಕಚೇರಿ ೧೩ ಅಂತಸ್ತಿನಲ್ಲಿ , ಫ಼್ಲ್ಯಾಟು ೧೬ನೇ ಅಂತಸ್ತು . ಜಗತ್ತಿನ ಅತ್ಯಂತ ಎತ್ತರದ ಮೋಟಾರೇಬಲ್ ರಸ್ತೆ - ಲೇಹ್ ನಲ್ಲಿದೆ ,ಅಲ್ಲಿಗೆ ಹೋಗಿ ಬಂದಿದ್ದೇನೆ. ಶ್ರೀಕಾ ಎಂದರೆ ನಾನೇ. ಈವರೆಗೆ ಓದಿದ್ದಕ್ಕೆ / ಓಡಿದ್ದಕ್ಕೆ ಈ ಕಚೇರಿ ತಲುಪಿದ್ದೇನೆ.