ಆಯ್ದ ಸಂಸ್ಕೃತ ಸುಭಾಷಿತಗಳು (೨೫-೨೭)
ಬರಹ
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು.
ಕಾವ್ಯ ಶಾಸ್ತ್ರ ವಿವಾದೇನ ಕಾಲೋ ಗಚ್ಛತಿ ಧೀಮತಾಂ |
ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ ವಾ ||
26. ಹನಿ ಹನಿಯಾಗಿ ಕೊಡವು ನೀರಿನಿಂದ ತುಂಬುವಂತೆ , ವಿದ್ಯೆ , ಧರ್ಮ , ಮತ್ತು ಸಂಪತ್ತನ್ನು ಕ್ರಮೇಣ ಗಳಿಸಬೇಕು.
ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:
ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||
27. ಒಳ್ಳೆಯ ಮಾತಿನಿಂದೊಡಗೂಡಿದ ದಾನ , ಗರ್ವವಿಲ್ಲದ ಜ್ಞಾನ , ಕ್ಷಮೆಯಿಂದೊಡಗೂಡಿದ ಶೌರ್ಯ , ತ್ಯಾಗಶೀಲ ಸಂಪತ್ತು ಈ ಗುಣಗಳೂಳ್ಳವರು ಜಗತ್ತಿನಲ್ಲಿ ದುರ್ಲಭರು.
ಆನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ಇತ್ತಂ ತ್ಯಾಗಯುಕ್ತಂ ದುರ್ಲಭಮೇತತ್ ಚತುಷ್ಟಯಂ ಲೋಕೆ ||