ಇಂದಿನ ಸುದ್ದಿ

ಇಂದಿನ ಸುದ್ದಿ

ಬರಹ

ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ

ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು

ಕೋಟಿ ನೂರಕೆ ಲಕ್ಷಿಸುವುದೆಂತು
ಹೌದು ಅದೆಲ್ಲಿಂದ ಬಂತು
ವಿಮಾನವಿಂದು ಕಾಮಗಾರಿಅಂತು
ಭರವಸೆಯಡಿಯಲಿ ನಿಂತು

ದಿನದಿಂದಿನಕೆ ಕರೆಯದರಗಳು
ಕೈಗೆಟಕುತಿರೆ ಮುಗಿಯದು ಮಾತಿನ್ನೆಂತು
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ವ್ಯವಹಾರ ಕುಸಿದು ಹಣಹೆಣವಾಗಿರೆ
ಮೊಳೆಯುವುದೆಂತಾ ಹಸಿರು

ಕೆಳಗಿಳಿಸಿದನು ಕನ್ನಡಧ್ವಜ ಕಿಣೇಕರ್
ದ್ರೋಹಿಗಳ ಸದೆಬಡಿಯದಿದ್ದರೆ
ನಾವಾಗಬೇಕು ಎಲ್ಲರ ಕಣ್ಣಲಿ ಜೋಕರ್
ಇದೇ ನೋಡಿ ಪ್ರಚಲಿತ ಸುದ್ದಿ
ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ