ಬೆಂಗಳೂರಿನ ಭಾರತೀಯ ವಿಜ್ಞಾನಸಂಸ್ಥೆಯ, ಶತಮಾನೋತ್ಸವ ದಿನದಂದು, ದಿವಂಗತ ಜಮ್‍ಷೆಡ್ಜಿ ಟಾಟಾ ರವರಿಗೆ, ನಮ್ಮೆಲ್ಲರ, ನಮನಗಳು !

ಬೆಂಗಳೂರಿನ ಭಾರತೀಯ ವಿಜ್ಞಾನಸಂಸ್ಥೆಯ, ಶತಮಾನೋತ್ಸವ ದಿನದಂದು, ದಿವಂಗತ ಜಮ್‍ಷೆಡ್ಜಿ ಟಾಟಾ ರವರಿಗೆ, ನಮ್ಮೆಲ್ಲರ, ನಮನಗಳು !

ಬರಹ

ಮಾರ್ಚ್ ೩, ೨೦೦೮ ನೆಯ ತಾರೀಖು, ಅವಿಸ್ಮರಣೀಯದಿನಗಳಲ್ಲೊಂದು। ನಮ್ಮ ಪ್ರೀತಿಯ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ರವರು, ಜನ್ಮತಳೆದು, ೧೬೯ ವರ್ಷಗಳಾಗಿವೆ. ಈ ಸುದಿನ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day, ಕೂಡ. ಟಾಟಾರವರು, ನಮ್ಮ ದೇಶದ ಕೈಗಾರಿಕಾ ಕ್ಷೇತ್ರದ ನಕ್ಷೆಯನ್ನೇ ಬದಲಾಯಿಸಿದರು ! ನಮ್ಮದೇಶದ ಕರ-ಕುಶಲ ಕೈಗಾರಿಕೆಗಳ ಜೊತೆಗೆ ಯಂರ್ತ್ರೋದ್ಯಮದಲ್ಲಿ ಒಂದು ಕ್ರಾಂತಿಯನ್ನು ತಂದರು . ಮುಖ್ಯವಾಗಿ, ದಿನಬಳಕೆಯ ವಸ್ತುಗಳನ್ನು ಸಾಮಾನ್ಯ ಜನರ ಕೈಗೆಟುಕುವಂತಹ ದರದಲ್ಲಿ ಉತ್ಪಾದನೆಯನ್ನು ಮಾಡಿದ್ದು, ಒಂದು ವಿಕ್ರಮವೇ ಸರಿ. ಅದಲ್ಲದೆ, ಮೂಲಭೂತ ಸಂಪನ್ಮೂಲಗಳ ಅಗತ್ಯಗಳಾದ, ’ ಉಕ್ಕ”, ’ಶಕ್ತ”, ಹಾಗೂ ’ಜವಳಿ ಉದ್ಯಮ”, ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ , ಅಮೋಘ ಕೊಡುಗೆ, ’ಟಾಟಾ ಇನ್ಸ್ಟಿಟ್ಯೂಟ್ ” ಅನನ್ಯ. ಅದೂ ಅಂತಹ ವಿಶ್ವವಿಖ್ಯಾತ ಶಿಕ್ಷಣಸಂಸ್ಥೆ, " ಟಾಟಾ ಇನ್ಸ್ಟಿಟ್ಯೂಟ್, " ನಮ್ಮ ಬೆಂಗಳೂರಿನಲ್ಲಿ , ೧೯೧೧ ರಲ್ಲಿ ಯೇ ಸ್ಥಾಪಿಸಿ, ಭಾರತದ ಜನರಮನಗಳಲ್ಲಿ ಅಮರರಾದರು. ಮತ್ತೊಮ್ಮೆ, ನಮ್ಮೆಲ್ಲ ’ಸಂಪದೀಯರ,’ ಪರವಾಗಿ, ನಮ್ಮ ನೆಚ್ಚಿನ "ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ," ರವರಿಗೆ, ಹಾಗೂ ಟಾಟಾ ಸಂಸ್ಥೆಯ ಪದಾಧಿಕಾರಿಗಳಿಗೆ, ಶತ ಶತ, ಪ್ರಣಾಮಗಳು.

 

-Flickr yahoo