ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)
ಕನ್ನಡ, ಕನ್ನಡ, ಕನ್ನಡ ಎಂದು ಕನ್ನಡ ಭಾಷೆಯನ್ನು ಪರಭಾಷಿಕರಿಗೆ ಪ್ರೀತಿಯಿಂದ ಕಲಿಸಿಕೊಡುವ ಸಮಯದಲ್ಲೇ ಲೀ ಎಂಬವ , ದುಷ್ಕ್ರುತ್ಯ ಮಾಡಿಬಿಟ್ಟ. ನಮ್ಮ ನಾಡಿನಲ್ಲಿ ಇದ್ದು, ಇಲ್ಲಿಯೇ ಜೀವನ ಸಾಗಿಸುತ್ತಿರುವ ಎಷ್ಟೋ ಜನ ಲೀ ಗಳು ಸಾಫ್ಟ್ ವೇರ್ ಕಂಪನಿಗಳಲ್ಲಿ ಇದ್ದಾರೆ. ಅವರಿದ್ದರೆ ಇರಲಿ ಬಿಡಿ, ಒಬ್ಬರು ಮಾತನಾಡಿದರೆ ಅಥವಾ ಕವನವನ್ನು ಬರೆದರೆ ಕನ್ನಡಕ್ಕೆ ಏನಾಗಿತ್ತೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಈ ಅಭಿಪ್ರಾಯ ಹಲವರದಲ್ಲ. ಒಬ್ಬ ಲೀ ಯನ್ನು ಬೆಳೆಯಲು ಬಿಟ್ಟರೆ ಹತ್ತಾರು ಜನರು ಹುಟ್ಟಿಕೊಳ್ಳುತ್ತಾರೆ. ಇಂತಹ ಪ್ರಕರಣಗಳು ಆಗಾಗ ನಡೆಯುತ್ತಿದ್ದವಂತೆ, ಆದರೆ ಬೆಳಕಿಗೆ ಬರುತ್ತಿರಲಿಲ್ಲ, ಇದಕ್ಕೆ ಕಾರಣ ಶೇ ೨೦ ರಷ್ಟು ಕನ್ನಡಿಗರು, ಉಳಿದವರೆಲ್ಲ ಪರಭಾಷಿಕರು, ಮಾತೆತ್ತಿದರೆ ಹೆಚ್ಚು ಕೆಲಸ ಕೊಟ್ಟು ಹಿಂಸೆ ಮಾಡುವುದು ಹೀಗೆಲ್ಲ ಮಾಡುತ್ತಲೇ ಇದ್ದಾರೆ. ಆದರೂ ಉದಾರಿಗಳಾದ ನಮ್ಮ ಕನ್ನಡ ಸಾಫ್ಟ್ ವೇರ್ ಇಂಜಿನೀಯರುಗಳು ಸಾಫ್ಟ್ ಆಗಿ ಇದ್ದರು. ಆ ಬೆಂಕಿ ಈಗ ಭುಗಿಲೆದ್ದಿದೆ.
ಉದ್ಯಾನ ನಗರಿಯಲ್ಲಿ ಪರಭಾಷಿಕರು ಉದ್ಯೋಗವೆಂದು ಬಂದು ಇಲ್ಲಿಯೇ ಬೇರೂರಿದ್ದಾರೆ. ಇಲ್ಲಿಯೇ ಮನೆ ಕಟ್ಟಿಕೊಂಡು ಭೂಮಿಯ ಬೆಲೆಯನ್ನು ಗಗನಕ್ಕೇರಿಸಿದರು. ಅದೇ ಎಷ್ಟೋ ಜನ ಕನ್ನಡಿಗರು ಉತ್ತರ ಕರ್ನಾಟಕ, ಮೈಸೂರು, ಮಂಗಳೂರಿನಿಂದ ಕೆಲಸಕ್ಕೆ ಅಂತ ಬಂದವರು ಇವತ್ತಿಗೂ ಬಾಡಿಗೆ ಮನೆಯಲ್ಲಿ ಇದ್ದಾರೆ. ಅವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಓದುತ್ತಿದ್ದಾರೆ. (ಸಾಫ್ಟ್ ವೇರ್ ಫ಼ೀಲ್ದ್ ಬಿಟ್ಟು ). ನೋಡಿ ಹೇಗಾಯ್ತು ನಮ್ಮವರ ಪಾಡು. ಎಷ್ಟೋ ಜನರು ರಾತ್ರಿ ಗುಂಡು ಹಾಕಿ ನೀನು ಕನ್ನಡಾನಾ, ಹಾಗಿದ್ರೆ ಹೋಗು. ಬೇರೆ ಭಾಷೆಯವನಾಗಿದ್ರೆ ಅಷ್ಟೆ ಅಂತ ಬೈದು ತಮ್ಮ ಸಿಟ್ಟನ್ನು ನುಂಗಿಕೊಳ್ಳುವ ಜನರನ್ನು ನಾವೆಲ್ಲ ನೋಡಿದ್ದೇವೆ. ಆದ್ದರಿಂದ ಇನ್ನು ಮೇಲಾದರೂ ಇಂತಹ ಸನ್ನಿವೇಶಗಳು ಬರದಂತೆ ನಾವೇ ನೋಡಿಕೊಳ್ಳಬೇಕು. ನಮ್ಮ ಆಫೀಸಿನಲ್ಲಿರುವ ಪರಭಾಷಾ ಸಹೋದ್ಯೋಗಿಗಳಿಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಮೂಡುವಂತೆ ಮಾಡಬೇಕು. ಈಗ ನಮ್ಮ ಆಫೀಸಿನಲ್ಲಿ ನಾವು ಕನ್ನಡಿಗರು ಕೆಲವೇ ಜನ. ಆದರೂ ಎಲ್ಲರೂ ನಮ್ಮ ಜತೆಗೆ ತೊದಲುತೊದಲಾಗಿ ಕನ್ನಡವನ್ನೇ ಮಾತನಾಡುತ್ತಾರೆ. ಎಲ್ಲರ ಕಂಪ್ಯೂಟರ್ ಗಳಲ್ಲಿ ಮುಂಗಾರು ಮಳೆಯ ಹಾಡುಗಳಿವೆ. ಜತೆಗೆ ನಮ್ಮ ರಕ್ಷಣಾ ವೇದಿಕೆಯ ಬಗ್ಗೆ ನೂ ಹೇಳಬೇಕು. ಆಗಲೇ ಅವರಿಗೆ ಭಯ ಇರುತ್ತೆ. ಇನ್ನೊಬ್ಬ ಲೀ ಹುಟ್ಟೋದು ತಪ್ಪುತ್ತೆ. ಈ ಲೀ ಕಥೆ ಏನಾಗುವುದೋ. ಅಪ್ಪಿತಪ್ಪಿ ಕರವೇ ಕಡೆಗೆ ಸಿಕ್ಕರೆ ಅಯ್ಯೋ ಆ ಕಥೆನೇ ಬೇರೆ. ಸಾಫ್ಟ್ ವೇರೂ ಇರಲೀ, ಬಯೋಟೆಕ್ಕೂ ಇರಲೀ, ಜತೆಗೆ ಕನ್ನಡ ಬಗ್ಗೆ ಅಭಿಮಾನವಿರಲೀ, ತಿಳಿದುಕೊ ಲೀ, ಇಲ್ಲವೆಂದರೀ ಮಾಡು ಜಾಗ ಖಾಲೀ.