ಶಿವಾರ್ಪಣಂ

ಶಿವಾರ್ಪಣಂ

ಬರಹ

ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ.

ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ

ಕಪಿಲಾ ತೀರದ ನಂಜುಂಡೇಶನೆ ನೇತ್ರಾವತಿಯ ಮಂಜುನಾಥನೇ
ಗವಿಪುರದ ಗಂಗಾಧರನೆ ಗೋಕರ್ಣದ ಮಹಾಬಲೇಶ್ವರನೇ
ನಂದೀಬೆಟ್ಟದ ನಂದೀಶ್ವರನೆ ಶ್ರೀಶೈಲದ ಮಲ್ಲಿಕಾರ್ಜುನನೇ
ಬಾದಾಮಿಯ ನಟರಾಜನೆ ಕೂಡಲ ಸಂಗದ ಸಂಗಮೇಶನೇ

ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ

ಧರ್ಮೋದ್ಭವನೆಂದು ಹಾಲನುಣಿಸುವೆ ಸರ್ವಭೂತದಮನೆಂದು ಮೊಸರನೀವೇ
ರುದ್ರರೂಪನೆಂದು ತುಪ್ಪವ ಕುಡಿಸುವೆ ಮಹಾದೇವನೆಂದು ಜೇನನು ತಿನಿಸುವೆ
ಈಶಾನಸರ್ವನೆಂದು ಸಕ್ಕರೆ ಕೊಡುವೆ ತಿಮಿರಾಪಹಾರನೆಂದು ನೀರನು ಸುರಿವೆ
ವಿಭೂತಿ ಧರಿಸಿ ಹಣ್ಣನು ತಿನಿಸಿ ಹಗಲಿರುಳೂ ನಿನ ಪೂಜಿಸುವೆ

ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಒ ಶಿವನೇ ಉದ್ಧರಿಸೋ

ಗಂಗೆಯ ಧರಿಸಿದ ಗಂಗಾಧರನೇ ಅಕ್ಕ ಮಹಾದೇವಿಯ ಚನ್ನಮಲ್ಲಿಕಾರ್ಜುನನೇ
ತ್ರಿಶೂಲಪಾಣಿ ತ್ರೈಂಬಕೇಶ್ವರನೇ ಗಿರಿಜಾಪತಿ ಹೇ ಉಮಾಶಂಕರನೇ
ಉದ್ಧರಿಸೋ ಹರನೇ ಉದ್ಧರಿಸೋ
ಭಕುತರ ಉದ್ಧರಿಸೋ ಒ ಶಿವನೇ ಉದ್ಧರಿಸೋ