ಹಂಸ ಹಾಡುವ ಹೊತ್ತು ಪುಸ್ತಕದ ಬಿಡುಗಡೆ ಸಮಾರಂಭ

5

 ಸಂಪದ ಜಾಲತಾಣದ ಗೆಳೆಯರೇ,
ಹಲವು ತಿಂಗಳುಗಳ ಕೆಳಗೆ, ನಮ್ಮ ಸಂಪದ ಜಾಲತಾಣದಲ್ಲಿ "ಹಂಸ ಹಾಡುವ ಹೊತ್ತು"  ಎಂಬ ನೀಳ್ಗತೆಯನ್ನು ಪ್ರಕಟಿಸಿದ್ದೆ. ಅದನ್ನು ಮೆಚ್ಚಿಕೊಂಡು ಜಾಲತಾಣದ ಗೆಳೆಯರನೇಕರು ಪ್ರತಿಕ್ರಿಯಿಸಿದ್ದರು. ಅದನ್ನು ಒಂದು ಕಾದಂಬರಿಯಾಗಿ ಬೆಳೆಸುವ ಬಗ್ಗೆಯೂ ಕೆಲವರು ಸೂಚಿಸಿದ್ದರು. ಅಂತೆಯೇ ಆ ಕಥೆಗೆ ಹೊಸ ಆಯಾಮವೊಂದನ್ನು ಮತ್ತು ಹಲವಾರು ಸನ್ನಿವೇಶಗಳನ್ನು ಸೇರಿಸಿ, ಕಾದಂಬರಿಯಾಗಿ ರಚಿಸಿದ್ದೇನೆ. ಅದನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದವರು ಪ್ರಕಟಿಸಿದ್ದಾರೆ. ಕಾದಂಬರಿಯ ಬಿಡುಗಡೆಯನ್ನು ದಿನಾಂಕ ಮಾರ್ಚ್ ೧೮ ರಂದು ಮಾಡಲಿದ್ದಾರೆ. ಆ ವೇಳೆಗೆ ಸಂಪದದ ಗೆಳೆಯರಾರಾದರೂ ಹುಬ್ಬಳ್ಳಿಯಲ್ಲಿ ಇರುವುದಾದರೆ, ಕಾರ್ಯಕ್ರಮಕ್ಕೆ ಆಗಮಿಸ ಬೇಕೆಂದು ಈ ಮೂಲಕ ಕೋರುತ್ತೇನೆ.
ದಿನಾಂಕ: ೧೮/೦೩/೨೦೧೨.

ಸ್ಥಳ: ಐ.ಎಮ್.ಎ. ಸಭಾಂಗಣ,
      ಕೆನರಾ ಬ್ಯಾಂಕ್ ಕಟ್ಟಡದ ಎರಡನೇ ಮಹಡಿ,
      ಬೈಲಪ್ಪನವರ ನಗರ, ಹುಬ್ಬಳ್ಳಿ.
ಇಂತು,
ತಮ್ಮ ಗೆಳೆಯ,
 
ಡಾ|| ಕ.ರಮೇಶ ಬಾಬು.
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೀ ಪಾರ್ಥಸಾರಥಿಯವರೆ, ಮೊದಲಿನಿಂದಲೂ ಪ್ರೋತ್ಸಾಹಕರ ನುಡಿಗಳನ್ನಾಡಿ ನನ್ನನ್ನು ಹುರಿದುಂಬಿಸಿದ್ದೀರಿ. ನಿಮ್ಮ ಅಭಿನಂದನೆಗಳಿಗೆ ಕೃತಜ್ಞತಗಳು.

ಪ್ರೀತಿಯ ರಮೇಶ, ನಾನು ಸಂಪದ ಪರಿವಾರಕ್ಕೆ ಹೊಸ ಸದಸ್ಯನಾಗಿದ್ದೆನೆ. ದಯವಿಟ್ಟು ನನಗೆ ನಿಮ್ಮ ಆ ಕಥೆಯನ್ನು ಕಳಿಸಿಕೊಟ್ಟರೆ ನನಗೆ ಅದನ್ನು ಓದುವ ಆಸೆ ಇದೆ. my mail id pannagkamat@gmail.com.

+1 ರಮೇಶ್ ಬಾಬು ಅವ್ರೆ ನೀವು ವಿಸ್ಮಯನಗರಿ.ಕಾಮ್ ನಲ್ಲಿಯೂ ಇದ್ದೀರಿ... ತುಂಬಾ ದಿನಗಳಿಂದ ಅಲ್ಲಿ -ಇಲ್ಲಿ ಯಾವುದೇ ನಿಮ್ಮ ಲೇಖನ ಬರಹ ಬರ್‍ದೇ ಈರ್ವುದು ಗೋಚರಿಸಿತ್ತು ಈ ಮಧ್ಯೆ ನಿಮ್ಮ ಆ ಬರಹದ ಪುಸ್ತಕ ಬಿಡುಗಡೆ ಕುರಿತ ಮಾಹಿತಿ ತಿಳಿದು ಸಂತೋಷ ಆಯ್ತು... ನನ್ನ ಶುಭಾಶಯಗಳು ಶುಭವಾಗಲಿ.....

ನೀವು ಸರಿಯಾಗಿ ಗಮನಿಸಿದ್ದೀರಿ. ಶಾಲೆಗೆ ಚಕ್ಕರ್ ಕೊಟ್ಟು ಉಪಾಧ್ಯಾಯರ ಬಳಿ ಸಿಕ್ಕಿಹಾಕಿಕೊಂಡ ವಿದ್ಯಾರ್ಥಿಯಂತಾಯ್ತು ನನ್ನ ಪಾಡು. ನಿಮ್ಮ ಶುಭಾಶಗಳಿಗೆ ಕೃತಜ್ಞತೆಗಳು.

ಪ್ರಿಯ ರಮೇಶ್ ಅವರೇ, ಹಂಸ ಹಾಡುವ ಹೊತ್ತು ಅಚ್ಚಾಗುತ್ತಿರುವ ವಿಷಯ ತಿಳಿದು ತುಂಬಾ ಖುಷಿ ಆಯಿತು. ಕಾದಂಬರಿ ನಿಮಗೆ ಹೆಚ್ಚಿನ ಹೆಸರು ಒದಗಿಸಲಿ, ಮತ್ತು ನಿಮ್ಮಲ್ಲ್ಲಿನ ಸಾಹಿತ್ಯ ಕೃಷಿ ಹೊಸ ಹುರುಪನ್ನು ನೀಡಲಿ ಎಂದು ಆಶಿಸುತ್ತೇನೆ. ಸಂಪದದಲ್ಲಿ ಓದಿದ ಹಲವಷ್ಟು ಒಳ್ಳೆಯ ಲೇಖನದಲ್ಲಿ ನಿಮ್ಮ ಹಂಸ ಹಾಡುವ ಹೊತ್ತು ಎಲ್ಲಕ್ಕಿಂತ ಮಿಗಿಲಾಗಿ ನಿಂತ ಕಥೆ, ಕಥೆ ಅನ್ನುವುದಕ್ಕಿಂತ ವೈದ್ಯಕೀಯ ಮಾಹಿತಿಗಳ ಹೂರಣ ಎಂದರೆ ತಪ್ಪಾಗಲಾರದು. ಇದು ಈಗ ಪುಸ್ತಕವಾಗಿ ಬರುತ್ತಿದೆ ಎಂದು ತಿಳಿದು ಖುಷಿ ಆಯಿತು. ಅದರಲ್ಲಿನ ಹೊಸ ಆಯಾಮಗಳನ್ನು ಓದುವ ಮನಸ್ಸಾಗಿದೆ. ಶುಭ ವಾಗಲಿ.

ಧನ್ಯವಾದಗಳು. ನೀವು ಸೂಚಿಸಿದಂತೆ, ಮುಖಪುಟದ ಚಿತ್ರವನ್ನು ಪ್ರಕಟಿಸಲು ಪ್ರಯತ್ನಿಸಿದೆ. ಅದು .jpg format ನಲ್ಲಿದ್ದರೂ ಅದೇಕೋ ಅಳವಡಿಸಲಾಗುತ್ತಿಲ್ಲ.

ಅಭಿನಂದನೆಗಳು ರಮೇಶ್ ಬಾಬು ರವರೇ. ತಮ್ಮ ಕಥೆ ನಿಜಕ್ಕೂ ತುಂಬಾ ಸೊಗಸಾಗಿದೆ.ಪ್ರಕಟಿಸಿದಾಗ ಜನಮನ್ನಣೆಗಳಿಸುವಲ್ಲಿ ಅನುಮಾನವೇ ಇಲ್ಲ. ಹಾರ್ದಿಕ ಶುಭ ಹಾರೈಕಗಳು.

ಶ್ರೀಮತಿ ನಾಗರತ್ನರವರೆ, ತಮ್ಮ ನಿರಂತರ ಪ್ರೋತ್ಸಾಹಕರ ನುಡಿಗಳಿಗೆ ಧನ್ಯವಾದಗಳು. ನೀವು ಇನ್ನೂ ಹುಬ್ಬಳ್ಳಿಯಲ್ಲಿಯೇ ಇರುವಿರಾದರೆ ದಯವಿಟ್ಟು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೋರುತ್ತೇನೆ.