ಹಂಸ ಹಾಡುವ ಹೊತ್ತು ಪುಸ್ತಕದ ಬಿಡುಗಡೆ ಸಮಾರಂಭ

ಹಂಸ ಹಾಡುವ ಹೊತ್ತು ಪುಸ್ತಕದ ಬಿಡುಗಡೆ ಸಮಾರಂಭ

 ಸಂಪದ ಜಾಲತಾಣದ ಗೆಳೆಯರೇ,
ಹಲವು ತಿಂಗಳುಗಳ ಕೆಳಗೆ, ನಮ್ಮ ಸಂಪದ ಜಾಲತಾಣದಲ್ಲಿ "ಹಂಸ ಹಾಡುವ ಹೊತ್ತು"  ಎಂಬ ನೀಳ್ಗತೆಯನ್ನು ಪ್ರಕಟಿಸಿದ್ದೆ. ಅದನ್ನು ಮೆಚ್ಚಿಕೊಂಡು ಜಾಲತಾಣದ ಗೆಳೆಯರನೇಕರು ಪ್ರತಿಕ್ರಿಯಿಸಿದ್ದರು. ಅದನ್ನು ಒಂದು ಕಾದಂಬರಿಯಾಗಿ ಬೆಳೆಸುವ ಬಗ್ಗೆಯೂ ಕೆಲವರು ಸೂಚಿಸಿದ್ದರು. ಅಂತೆಯೇ ಆ ಕಥೆಗೆ ಹೊಸ ಆಯಾಮವೊಂದನ್ನು ಮತ್ತು ಹಲವಾರು ಸನ್ನಿವೇಶಗಳನ್ನು ಸೇರಿಸಿ, ಕಾದಂಬರಿಯಾಗಿ ರಚಿಸಿದ್ದೇನೆ. ಅದನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದವರು ಪ್ರಕಟಿಸಿದ್ದಾರೆ. ಕಾದಂಬರಿಯ ಬಿಡುಗಡೆಯನ್ನು ದಿನಾಂಕ ಮಾರ್ಚ್ ೧೮ ರಂದು ಮಾಡಲಿದ್ದಾರೆ. ಆ ವೇಳೆಗೆ ಸಂಪದದ ಗೆಳೆಯರಾರಾದರೂ ಹುಬ್ಬಳ್ಳಿಯಲ್ಲಿ ಇರುವುದಾದರೆ, ಕಾರ್ಯಕ್ರಮಕ್ಕೆ ಆಗಮಿಸ ಬೇಕೆಂದು ಈ ಮೂಲಕ ಕೋರುತ್ತೇನೆ.
ದಿನಾಂಕ: ೧೮/೦೩/೨೦೧೨.

ಸ್ಥಳ: ಐ.ಎಮ್.ಎ. ಸಭಾಂಗಣ,
      ಕೆನರಾ ಬ್ಯಾಂಕ್ ಕಟ್ಟಡದ ಎರಡನೇ ಮಹಡಿ,
      ಬೈಲಪ್ಪನವರ ನಗರ, ಹುಬ್ಬಳ್ಳಿ.
ಇಂತು,
ತಮ್ಮ ಗೆಳೆಯ,
 
ಡಾ|| ಕ.ರಮೇಶ ಬಾಬು.