ಕನ್ನಡದ ಹುಡುಗಿ

ಕನ್ನಡದ ಹುಡುಗಿ

ಬರಹ



ಆಧುನಿಕವು ಹುಡುಗಿಯ ವೇಷಭೂಷಣ

ನಾಚಿಕೆಯು ಅವಳ  ಮುಖದಾಭಾರಣ

ಹಾಗಿದ್ದರವಳು ಕನ್ನಡದ ಹುಡುಗಿ

 

ಜೀನ್ಸು ಹಾಕಿ ಬರುವಳು ಕಚೇರಿಗೆ

ಗೆಜ್ಜೆಗಳು ಕಾಣುವವು ಅದರ ಕೆಳಗೆ

ಹಾಗಿದ್ದರವಳು ಕನ್ನಡದ ಹುಡುಗಿ

 

ತೋಳಿಲ್ಲದ ಧಿರಿಸು ಧರಿಸಿದರೂ

ಇರುವುದು ಮೇಲೆ ಓಡನಿಯ ಹೊದಿಕೆ

ಹಾಗಿದ್ದರವಳು ಕನ್ನಡದ ಹುಡುಗಿ 

 

ಎಲ್ಲಾ ಕಷ್ಟಗಳಲು ಕೂಡಿಸುವಳು ಕೈಯ್ಯ

ಧರಿಸುವಳು ಕೈಗಳಲಿ ಗಾಜಿನ ಬಳೆಯ

ಹಾಗಿದ್ದರವಳು ಕನ್ನಡದ ಹುಡುಗಿ

 

ಮೊಗದಲ್ಲಿ ಗರ್ವಿ ಮಾತಿನಲಿ ದರ್ಪ

ಹೃದಯದಲಿ ಕೋಮಲ ಹೂವಿನಂಥವಳು

ಹಾಗಿದ್ದರವಳು ಕನ್ನಡದ ಹುಡುಗಿ