ಸಣ್ಣ ಕಥೆ

ಸಣ್ಣ ಕಥೆ

ಬರಹ



ಬೂಮರಾಂಗ್-೧  

ತನ್ನೆರಡೂ ಕಾಲುಗಳನ್ನು ಮೇಜಿನಮೇಲಿಂದ ಕೆಳಗೆ ಬಿಸುಟ ಬೀರಪ್ಪ, ಕಾರಣವಿಲ್ಲದೇ ಎದ್ದು ಕುಳಿತ .ಮುಂಗೈಗೆ ಕಟ್ಟಿದ ಕೈಗಡಿಯಾರವನ್ನೊಮ್ಮೆ ನೋಡಿಕೊಂಡ, ಮುಂದಿನ ರೈಲು  ಬರಲು ಇನ್ನೂ ಎರಡು ಘಂಟೆಯಿದ್ದು, ಅಲ್ಲಿಯವರೆಗೆ ಮಾಡಲು ಕೆಲಸವಿಲ್ಲವಲ್ಲ ಎಂದುಕೊಳ್ಳುತ್ತಾ ತನ್ನ ರೂಮಿನಿಂದ ಹೊರಬಂದ. ಕಾಕನ ಹೋಟೆಲ್ಲಿನಲ್ಲಿ ಒಂದು ಚಾ ಕುಡಿದು ಟೈಮ್ ಪಾಸ್ ಮಾಡಲೆಂದು.ಇವತ್ತು ತನಗೇನೂ ಲಾಭವೇ ಆಗಿರಲಿಲ್ಲ, ನಿನ್ನೆ ಮೊನ್ನೆಯ ಮೇಲಿನ ಕಮಾಯಿ ತುಂಬಾನೇ ಜಾಸ್ತಿಯಿತ್ತು. ಅದೇಖುಷಿಯಲ್ಲಿದ್ದ ಬೀರಪ್ಪ ಇವತ್ತು ಅಂತಹದ್ದೇನೂ ಆಗಿರಲಿಲ್ಲ,ಕಣ್ಣ ಮುಂದೆ ಇಬ್ಬರು ಸಣಕಲರು ನಿಂತು ಕೊಂಡಿದ್ದರು.ಏನೂ ಅಂತಹಾ ಒಳ್ಳೆಯ ನಿದ್ದೆಯಿ ಂದ ಎಬ್ಬಿಸಿದರಲ್ಲಾ ಎನ್ನುವ ಬೇಸರ ಬೀರಪ್ಪನ ಕಂಗಳಲ್ಲಿ. ಆದರೂ ತೋರ್ಪಡಿಸದೇ "ಯಾಕ್ರೋ ಏನಾಯ್ತು!! ಒಂದೇ ಸಮ ಬಡ್ಕೊಳ್ತೀರಲ್ಲಾ, ಯಾರಾದರೂ ಸತ್ತರೇನೂ? ಎಂದ."ಸಾರ್, ಇಲ್ನೋಡೀ ಸಾರ್ ನಮ್ಮ ಹ್ಯತ್ತಿರ ಒಳ್ಳೆಯ ಅಕ್ಕಿ ಇದೆ ಸಾರ್ ಬೇಕಾ ನಿಮಗೆ?" ಕೇಳಿದ ಅವರಲ್ಲೊಬ್ಬಾತ.

ಇಲ್ಲ ಸಾರ್ ಇದು ಗುಂಟೂರಿನ ಅಕ್ಕಿ ಸಾರ್ ನೋಡಿ ಸ್ಯಾಂಪಲ್ ಬೇಕಾದರೆ, ಸೋನಾ ಮಸೂರಿ, ಚಿನ್ನ ಸಾರ್ ಚಿನ್ನ’ ಅವನಂದ ಮಾತಿಗೆ ಬೀರಪ್ಪ ಆತನ ಅಂಗೈಯಲ್ಲಿದ್ದ ಸ್ಯಾಂಪಲ್ ಅಕ್ಕಿ ನೋಡಿದ, ನಿನ್ನೆ ತಾನೆ ಮಂಡಿಯಿಂದ ತಾನೂ ತ್ಯಾಂಪಿ ತಂದ ಅಕ್ಕಿಯ ನೆನಪಾಯಿತು ಆತನಿಗೆ ರೂಪಾಯಿ ಇಪ್ಪತ್ತೆಂಟರ ಹಾಗೆಇಪ್ಪತೈದು ಕೇಜಿ ತಂದಿದ್ದರು., ಅದೂ ಹೀಗೇ ಇತ್ತು. ಎಷ್ಟು ಕೇಳಿದನಾತ. ಇಪ್ಪತೈದು ಕೊಡಿ ಸಾರ್ ಇಲ್ಲಿಂದ ಮನೆಗೆ ಬೇರೆ ಹೋಗಬೇಕು ,ಪೇಟೆಗೆ ಹೋದರೆ ಇಪ್ಪತ್ತೆಂಟಕ್ಕೆ ಮೋಸವಿಲ್ಲಸಾರ್" ಎಂದು ಇನ್ನೇನೇನೋ ಹೇಳುವಷ್ಟರಲ್ಲಿ ಮೋಹನ್ದಾಸ್ ಓಡಿಬಂದು.
’ಹಾಗೆಲ್ಲಾ ಯಾರನ್ನೂ ನಂಬಬೇಡಿ ಸಾರ್ ಇವ್ರೆಲ್ಲಾ ಕಳ್ಳರು ಸಾರ್’ ಎಂದ."ಇದ್ರಲ್ಲಿ ಏನಪ್ಪಾ ಕಂಡಿತು ನಿಂಗೆ ಕಳ್ಳತನ? ಅವನು ಪಾಪ ಊರಿಗೆ ಹೋಗಲು ಕಾಸಿಲ್ಲ, ಅಕ್ಕಿ ಮಾರಿ ಹೋಗ್ತಾ ಇದ್ದಾರೆ ಅಷ್ಟೇಯಾ", ಎಂದ ರಾಮಕೃಷ್ಣ, ತೆಲುಗು ಶಬ್ದ ಕೇಳಿಯೇ ಪುಳಕಿತ ಗೊಂಡಿತ್ತು ಆತನ ಮನಸ್ಸು.

ಹೌದು ಎಷ್ಟು ಅಕ್ಕಿ ಇದೆ? ಈ ಸಾರಿಯ ಪ್ರಶ್ನೆ ಶ್ರೀನಿವಾಸನಿಂದ.ಆತನೂ ಸ್ಯಾಂಪಲ್ ನೋಡಿ ಖುಶಿಗೊಂಡಿದ್ದ.ಆತ ರಾಮಕೃಷ್ಣನ ಕಿವಿಯಲ್ಲಿ ಇನ್ನೂ ಕಡ್ಮೆ ಮಾಡಿಸಿಕೊಳ್ಳಿ ಆತ ಒಪ್ಪಬಹುದು, ಎನ್ನುತ್ತಾ ತಾನೇ ಆತನ ಕಡೆ ತಿರುಗಿ ಏಯ್ ನಾನು ಇಪ್ಪತ್ತು ರೂಪಾಯಿ ಕೊಡೋದು ಸರೀನಾ?   ಎಂದ. ಅಕ್ಕಿಯಾತ ಇಲ್ಲಾ ಸಾರ್ ಲಾಸ್ ಆಗುತ್ತೆ ನಮಗೆ ಎಂದ .ಬೀರಪ್ಪ ಬಂದು ಆಯ್ತಪ್ಪ ನಿನ್ನೆಲ್ಲಾ ಅಕ್ಕಿ ನಾವೇ ಕೊಂಡ್ಕೋತೀವಿ ಆದರೆ ಎಲ್ಲರೂ ಇಪ್ಪತ್ತು ರೂಪಾಯಿಯಿಂದ ಒಂದು ಪೈಸೆಯು ಜಾಸ್ತಿ ಕೊಡೊಲ್ಲಾ, ಸಾಧ್ಯವಾದರೆ ಕೊಡು ಇಲ್ಲದಿದ್ದರೆ ಬಿಡು" ಎಂದ, ರಾಮಕೃಷ್ಣ ಮತ್ತು ಶ್ರೀನಿವಾಸ ರಿಗೆ ಒಂದು ಕ್ವಿಂಟಲ್ ಅಕ್ಕಿಯ ಹಣ ಹೊಂದಿಸಬೇಕಾಗಿತ್ತು, ಅಂತೂ ಇಂತೂ ಅವರಿಬ್ಬರು ಎರಡು ಸಾವಿರಹೊಂದಿಸಿದರು, ಮತ್ತು ಡ್ಯೂಟಿಯಿಂದ ಆತಮೊದಲು ಹೊರಡುವದೆಂತಲೂ ನಂತರ ಈತ ಹೊರಡುವದೆಂತಲೂ ನಿಶ್ಚಯವಾಗಿತ್ತು.ಬೀರಪ್ಪ ಇವತ್ತು ತಾನು ಒಳ್ಳೆಯ ಲಾಭದಾಯಕ ವ್ಯಾಪಾರ ಮಾಡಿದೆನೆಂಬ ಖುಶಿಯಲ್ಲಿ ಏಟೀಏಂನಿಂದ ಎಂಟು ಸಾವಿರ ತಂದು ಎಣಿಸಿ ಅಕ್ಕಿಯವನಿಗೆ ಕೊಟ್ಟ,ಇವತ್ತಿನ ಈ ವ್ಯಾಪಾರದಿಂದ, ಮನೆಗೆ ಹೋದಾಗ ತ್ಯಾಂಪಿಯ ಸ್ವಾಗತ ಎಣಿಸಿ ಮನದಲ್ಲೇ ಖುಷಿಗೊಂಡಿದ್ದ ಬೀರಪ್ಪ.

ಆಗಲೇ ಕಾಚಿಗುಡ ರೈಲು ಬಂತು, ಆತ ತನ್ನ ಅಕೆಲಸದಲ್ಲಿ ಮುಳುಗಿ ಹೋದ.

ಸುಮಾರು ಎರಡು ಘಂಟೆಯ ನಂತರವೇ ಆತನಿಗೆ ನೆನಪಾಗಿದ್ದು, ಅಷ್ಟರಲ್ಲಿ ಶ್ರೀನಿವಾಸನ ಫೋನು ಬಂತು.
"ಸರ್ ನಮಗೆ ಮೋಸವಾಯ್ತು!! ಆ ಕಳ್ಳರು, ತೋರಿಸಿದ್ದು ಒಂದು ಅಕ್ಕಿ ಕೊಟ್ಟಿದ್ದು ಇನ್ನೊಂದು ತರಹದ್ದು." ಇದಂತೂ ಇಪ್ಪತ್ತು ರೂಪಾಯಿ ಬಿಡಿಸಾರ್, ಹತ್ತು ರೂಪಾಯಿಯೂ ಯಾರೂ ಕೊಡಲಿಕ್ಕಿಲ್ಲ ಸಾರ್".
ಅಷ್ಟರಲ್ಲಿ ಮೋಹನ್ ದಾಸ್ ಓಡಿ ಬಂದು ಹೇಳಿದ" ಬೀರಪ್ಪನೋರೇ ಅವನ್ನು ಕೊಟ್ಟಿದ್ದ ಅಕ್ಕಿ ಒಂದು ಚೀಲದಲ್ಲಿ  ಬರೇ ಮೂವತ್ತೆರಡು ಮುವತ್ಮೂರು ಕೇಜಿ ಇರಬಹುದಷ್ಟೇ, ಆತ ಹೇಳಿದ ಹಾಗೆ ಐವತ್ತಲ್ಲ್ವೇ ಅಲ್ಲ"

ಬೀರಪ್ಪ ತನ್ನ ಮೇಜಿನ ಡ್ರಾವರಿನಿಂದ ಕ್ಯಾಲ್ಕುಲೇಟರ್ ತೆಗೆದು ತನಗೆ ಇವತ್ತಿನ ವ್ಯಾಪಾರದಲ್ಲಿ ಒಂದು ಕೇಜಿ ಅಕ್ಕಿಗೆ ಎಷ್ಟು ಬಿತ್ತು ಅಂತ ಲೆಕ್ಕ ಮಾಡುತ್ತಾ ಮನೆಗೆ ಹೋದಾಗ ಹೇಗಿನ ಸ್ವಾಗತ ಇರಬಹುದೆಂಬುದನ್ನು ಯೋಚಿಸಿಯೇ ನಡುಗಿದ ಕುಳಿತಲ್ಲೇ.