ಸರ್ವೇ ಸಂಪದಿಗಾಃ ಸುಖಿನೋ ಭವಂತು : ಓದಿ, ನಕ್ಕು, ಬಿಡಿ.

ಸರ್ವೇ ಸಂಪದಿಗಾಃ ಸುಖಿನೋ ಭವಂತು : ಓದಿ, ನಕ್ಕು, ಬಿಡಿ.

ಬರಹ


ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ, ಅವನೇ ಬುದ್ಧ.
ಸಂಪದಿಗರೆಲ್ಲ ಸಂಡೇ ಮೂಡಿನಲ್ಲಿರಲು ಇವನೊಬ್ಬ ಕೊರೆದ, ಇವನೇ (ಶಾಸ್ತ್ರೀ ಎಂಬ) ಪೆದ್ದ.
*೦*
ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು?
ಯಾರು ಯಾರು ನಾವ್ ಯಾರು? ನಾವೆಲ್ಲ ಇಲ್ಲಿ ಸಂಪದರು.
*೦*
ಸರ್ವೇ ಸಂಪದಿಗಾಃ ಸುಖಿನೋಭವಂತು.
ಇದು survey: ಸಂಪದಿಗರು ಹೇಗಿದ್ದಾರೆ, ಎಂತು?
*೦-
ನಾವಾಡುವ ನುಡಿಯೇ ಕನ್ನಡ ನುಡಿ....
ನಾವಿರುವಾ ತಾಣವೆ ಗಂಧದ ಗುಡಿ.

ನಾವಾಡುವ ನುಡಿಯೇ ಸಂಪದ ನುಡಿ....
ನಾವ್ ಬರೆಯೋ ತಂತ್ರವೆ ಬರಹ, ಶ್ರೀಲಿಪಿ, ನುಡಿ....
ಡಿಫರೆಂಟ್ ಡಿಫರೆಂಟ್ ಬಿಡಿ.
*೦*
ಸಂತೆ ಹೊತ್ತಿಗೆ ಮೂರು ಮೊಳ ಪೋಣಿಸಿದರಂತೆ.
ಸಂಪದದ ಗುಂಡಿ ಒತ್ತಿ ಮೂರಕ್ಷರ ಗೀಚಿದರಂತೆ.
*೦*
ಎಲ್ಲ ಬಲ್ಲವರಿಲ್ಲ; ಬಲ್ಲವರು ಬಹಳಿಲ್ಲ.
ಎಲ್ಲ ಓದುವರಿಲ್ಲ; ಓದುವರು ಬಹಳಿಲ್ಲ.
*೦*
ಮಾತಿಗೆ ಬಾರದ ವಸ್ತು ಬಹಳಿದ್ದರೇನು?
ಓದುವರಿಲ್ಲದ ಬರಹ ಪ್ರಕಟಿಸಿ ಫಲವೇನು?
*೦*
ನಗುನಗುತಾ ನಲೀ ನಲೀ ಏನೇ ಆಗಲೀ.
ಬರಿಬರೀತಾ ಬೆಳೀ ಬೆಳೀ ಯಾರೇ ಓದಲೀ ಬಿಡಲೀ.
*೦*
ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ.
ಬರೆಯಲಾರೆ, ಬರೆಯದೆ ಇರಲಾರೆ.
*೦*
ಸ್ತ್ರೀಗೆ ಬೇಕು ಸಮಾನತೆ.
ಸ್ತ್ರೀ ಸಂಪದಿಗರು ಹೆಚ್ಚು ಬರೆಯೋಲ್ಲ ಯಾಕೆ ಮತ್ತೆ?
ಬರೆಯೋಕೆ ಬಿಡೋಲ್ವಂತೆ ಅವರತ್ತೆ!
ಬ್ರಹ್ಮಚಾರಿಣಿಯರಿಗೇನಂತೆ?
ಬ್ರಹ್ಮಾಂಡ ಪ್ರೋಗ್ರಾಮ್‌ಗಳಂತೆ!
*೦*
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ.
ನನ್ನಂಥ ಲೇಖಕಗೆ ಕಿಂಚಿತ್ತು ಭಯವಿಲ್ಲ.
*೦*
ಕಾಫಿ ಕಪ್ಪಿನಲ್ಲಿ ನೊಣ.
ಯುವ ಸಂಪದಿಗರ ಮಧ್ಯೆ ಈ ಮುದಿರಾಮ.
ಆದರೆ,
ಚಾ ಕಪ್ಪಿನಲ್ಲಿ ಬಿರುಗಾಳಿ!
ಭರ್ಜರಿ ಈ ಶಾಸ್ತ್ರಿಯ ಧಾಳಿ!
*೦*
ಅವಳ ಉಡುಗೆ ಇವಳಿಗಿಟ್ಟು ಆಡಬಯಸಿದೆ;
ಇವಳ ತೊಡುಗೆ ಅವಳಿಗಿಟ್ಟು ನೋಡಬಯಸಿದೆ.

ಶಾಸ್ತ್ರಿ ಬರೆದ ಲೇಖನವನು ಆಸು ಹೊಗಳಿದ;
ಆಸು ಬರೆದ ಕವನವನ್ನು ಶಾಸ್ತ್ರಿ ಹೊಗಳಿದ.
*೦*
ಜೀನಾ ಯಹ್ಞಾ, ಮರ್‌ನಾ ಯಹ್ಞಾ, ಇಸ್‌ಕೇ ಸಿವಾ ಜಾನಾ ಕಹ್ಞಾ?
ಪಢ್‌ನಾ ಯಹ್ಞಾ, ಲಿಖ್‌ನಾ ಯಹ್ಞಾ, ಇಸ್‌ಕೇ ಸಿವಾ ರಾಸ್ತಾ ಕಹ್ಞಾ?
*೦*
ಸರ್ವೇ ಸಂಪದಿಗಾಃ ಸುಖಿನೋ ಭವಂತು.
Survey: Some ಪದಿಗಾಃ ಸುಖಿ no ಭವಂತಿ!
-೦-