ಭಾರತೀಯರ ಬುದ್ಧಿವಂತಿಕೆ...

ಭಾರತೀಯರ ಬುದ್ಧಿವಂತಿಕೆ...

ಬರಹ

ಮಿಂಚಂಚೆಯಲ್ಲಿ ಬಂದದ್ದು..ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...


 


"ನ್ಯೂ ಯಾರ್ಕ್ ನಲ್ಲಿದ್ದ ಭಾರತೀಯನೊಬ್ಬ ಬ್ಯಾಂಕೊಂದಕ್ಕೆ ಹೊಕ್ಕಿ ಲೋನ್ ಆಫೀಸರ್ ಹತ್ತಿರ ಹೋಗಿ..


ನಾನು ಎರಡು ವಾರದ ಮಟ್ಟಿಗೆ ಕೆಲಸದ ಮೇಲೆ ಭಾರತಕ್ಕೆ ಹೋಗುತ್ತಿದ್ದೇನೆ..ನನಗೆ $ ೫,೦೦೦ ಸಾಲ ಬೇಕಿದೆ


ಎಂದು ಕೇಳಿದನು..


 


ಆಗ ಬ್ಯಾಂಕಿನ ಅಧಿಕಾರಿ ಅವನಿಗೆ ಹೇಳಿದರು..ನೋಡಿ ನಾವು ನಿಮಗೆ ಸಾಲ ನೀಡಲು ಏನಾದರೂ ಅಡವಿಡಬೇಕೆಂದು...


ತಕ್ಷಣ ಭಾರತೀಯ ಆ ಅಧಿಕಾರಿಗೆ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ  ತನ್ನ ಹೊಸ "ಫೆರಾರಿ" ಕಾರಿನ ಕೀಯನ್ನು ಹಾಗು ಕಾರಿನ ದಾಖಲೆಗಳನ್ನು


ಆತನ ಕೈಗೆ ನೀಡಿದನು.


 


ತಕ್ಷಣ ಆತನಿಗೆ ಸಾಲ ನೀಡಿ ಅಧಿಕಾರಿ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡಲು ಶುರು ಮಾಡಿದನು.. ಈ ಭಾರತೀಯರಿಗೆ


ಬುದ್ಧಿನೇ ಇಲ್ಲ...ಕೇವಲ $ ೫,೦೦೦ ಸಾಲಕ್ಕೆ ತನ್ನ $ ೨,೫೦,೦೦೦ ಬೆಲೆಯ ಹೊಸ "ಫೆರಾರಿ" ಕಾರನ್ನು ಅಡ ಇಟ್ಟಿದಾನಲ್ಲ..ಎಂದು ನಕ್ಕು


ಆ ಕಾರನ್ನು ಬ್ಯಾಂಕಿನ ಪಾರ್ಕಿಂಗ್ನಲ್ಲಿ ನಿಲ್ಲಿಸಲು ಹೇಳಿದನು...


 


ಎರಡು ವಾರದ ನಂತರ ವಾಪಸಾದ ಭಾರತೀಯ $ ೫,೦೦೦ ಸಾವಿರ ಜೊತೆಗೆ $ ೧೫.೪೧ ಬಡ್ಡಿಯನ್ನು ಪಾವತಿಸಿ ತನ್ನ ಕಾರನ್ನು ತೆಗೆದುಕೊಂಡು


ಹೋಗಲು ಅನುವಾದನು.. ಆಗ ಸಾಲ ನೀಡಿದ ಅಧಿಕಾರಿ ಬಂದು ನೀವು ನಮ್ಮ ಬ್ಯಾಂಕಿನ ಜೊತೆ ವ್ಯವಹರಿಸಿದಕ್ಕಾಗಿ ಧನ್ಯವಾದಗಳು..ಆದರೆ


ನನಗೊಂದು ಅನುಮಾನ... ನಾವು ನಿಮ್ಮ ಬಗ್ಗೆ ಗಳಿಸಿದ ಮಾಹಿತಿಯ ಪ್ರಕಾರ ನೀವೊಬ್ಬ ಕೋಟ್ಯಧೀಶ ಎಂದು ತಿಳಿಯಿತು...ಹಾಗಿದ್ದರು ಸಹ


ಕೇವಲ $ ೫,೦೦೦ ಕ್ಕೆ ಸಾಲ ಯಾಕೆ ಮಾಡಿದಿರೆಂದು ಕೇಳಬಹುದೇ...


 


ಆಗ ಭಾರತೀಯ ಬಹಳ ಶಾಂತವಾಗಿ ಉತ್ತರಿಸಿದ..."ನ್ಯೂ ಯಾರ್ಕ್ ನಲ್ಲಿ ಬೇರೆ ಯಾವ ಜಾಗದಲ್ಲಿ ಎರಡು ವಾರಕ್ಕೆ ಕೇವಲ $ ೧೫.೪೧ ಕೊಟ್ಟು


ಕಾರನ್ನು ಪಾರ್ಕ್ ಮಾಡಬಹುದು ಹಾಗೆ ಎರಡು ವಾರಗಳ ನಂತರವೂ ಅದು ಅಲ್ಲೇ ಅದೇ ಸ್ಥಿತಿಯಲ್ಲಿ ಇರುವುದು ಎಂದು ಹೇಗೆ ನಂಬುವುದು.."


ಅದಕ್ಕೆ ಇಲ್ಲಿ ಬಿಟ್ಟೆ ಎಂದು ಹೇಳಿದ...


 


ಈಗ ಪೆಚ್ಚಾಗುವ ಸರದಿ ಆ ಅಧಿಕಾರಿಯದು....