Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
ಬರಹ
ನಾನು ವೆಬ್ ಬ್ರೌಸ್ ಮಾಡಲು Firefox ಬಳಸುತ್ತೇನೆ. ಆದರೆ ಕನ್ನಡ ವೆಬ್ ಪೇಜ್ ಗಳಿಗೆ ಹೋದಾಗ ಅದು ಅಕ್ಷರಗಳನ್ನು ಸರಿಯಾಗಿ ತೋರಿಸುವುದಿಲ್ಲ. ಈಗ ಕೆಲವು ದಿನಗಳ ಹಿಂದೆ Firfox 3 beta 4 ವರ್ಶನ್ ಬಿಡುಗಡೆ ಮಾಡಿದ್ದಾರೆ. ನಾನು ಒಮ್ಮೆ ಪರೀಕ್ಷಿಸೋಣ ಎಂದು download ಮಾಡಿದೆ. ಅದರಲ್ಲಿ ಕನ್ನಡ ಸರಿಯಾಗಿ ಮೂಡುತ್ತಿದೆ :). Internet Explorer ನಲ್ಲಿ ಯಾವ ರೀತಿ ಕನ್ನಡ ಬರುತ್ತದೆಯೋ ಅದೇ ರೀತಿ Firfox 3 ನಲ್ಲೂ ಅಕ್ಷರಗಳು ಮೂಡುತ್ತದೆ. ಹೊಸ ಬಿಡುಗಡೆಯನ್ನು ನಿಮ್ಮ ಕಂಪ್ಯೂಟರ್ ಗೆ ಇಳಿಸಿಕೊಳಲು
http://www.mozilla.com/en-US/firefox/all-beta.html ಗೆ ಹೋಗಿರಿ.