7 ಮದುವೆ ಅನುಭವ

7 ಮದುವೆ ಅನುಭವ

ಬರಹ
ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದರು. ಅವರಿಗೆಲ್ಲರಿಗೂ ಆಗಲೆ ಮದುವೆಯಾಗಿತ್ತು. ನಮ್ಮ ಅತ್ತೆಯಂದಿರು ಚಿಕ್ಕಪ್ಪನಿಗೆ 'ನೀನು ಮದುವೆಯಗುತ್ತಿರುವ ಹುಡುಗ. ಸ್ವಲ್ಪ ಗೊಭೀರತೆಯಿಂದಿರಲು ಕಲಿತುಕೊ.' ಎಂದು ಹಾಗೆ ಹೀಗೆ ಎಂದೆಲ್ಲಾ ಬೋಧಿಸುತ್ತಿದ್ದರು. ಇದು ತುಂಬಾ ಹೊತ್ತಿನ ವರೆಗೆ ನಡೆಯಿತು. ಚಿಕ್ಕಪ್ಪನೋ ತುಂಬಾ ತಮಾಷೆಯ ವ್ಯಕ್ತಿ. ಅವನು 'ನೀವೇನೂ ಚಿಂತೆ ಮಾಡಬೇಡಿ. ನನಗೆ 7 ಮದುವೆ ಹಾಗೂ ಸಂಸಾರದ ಅನಭವವಿದೆ' ಎಂದ. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಹೆಣ್ಣಿನ ಕಡೆಯವರು ಸ್ವಲ್ಪ ಚಿಂತೆಗೀಡಾದರೆಂದು ಅನ್ನಿಸಿತು. ಹುಡುಗನಿಗೆ ಈ ಮೊದಲೆ ಮದುವೆ ಅಗಿದೆಯೊ ಎಂದನ್ನಿಸಿರಬೇಕು. ವಧುವಿನ ತಾಯಿ 'ಅಂದರೆ ಏನಪ್ಪ ನನೀನು ಹೇಳುತ್ತಿರುವುದು?' ಎಂದು ಪ್ರಶ್ನಿಸಿದರು. ಆಗ ಚಿಕ್ಕಪ್ಪ 'ನಾನು ಈಗಾಗಲೆ ಅಕ್ಕಂದಿರ, ಅಣ್ಣಂದಿರ ಮದುವೆ ಹಾಗೂ ಸಂಸಾರ ನೋಡಿದ್ದೇನೆ. ಅದೇ ನನ್ನ 7 ಮದುವೆ ಹಾಗೂ ಸಂಸಾರದ ಅನಭವ.' ಎಂದು ವಾತಾವರಣ ತಿಳಿಗೊಳಿಸಿದನು. ಆಗ ಎಲ್ಲರೂ 'ಓ ಹಾಗೋ!' ಎಂದು ನಕ್ಕು ಬಿಟ್ಟರು.