ಕಣ್ಣು-ಕುರುಡು ಹುಡುಗಿ (ಒಂದು ಚಿಕ್ಕ ಕಥೆ )....

ಕಣ್ಣು-ಕುರುಡು ಹುಡುಗಿ (ಒಂದು ಚಿಕ್ಕ ಕಥೆ )....

ಬರಹ

 

 

 

ಒಂದು ಊರಲ್ಲಿ ಒಬ್ಬ ಕುರುಡು ಹುಡುಗಿ ಇದ್ದಳು, ಅವಳು ಅವಳನ್ನೇ ತಾನು ಕುರುಡಿ ಆಗಿರುವ ಕಾರಣ ತನ್ನನ್ನೇ ದ್ವೆಶಿಸುತ್ತಿದ್ದಳು,

ಅವಳು ಪ್ರತಿಯೊಬ್ಬರನ್ನು,ಅವಳ ಪ್ರಿಯತಮನ ಹೊರತಾಗಿ ದ್ವೆಶಿಸುತ್ತಿದ್ದಳು, ಒಂದು ದಿನ ಅವಳು ಅವಳ ಪ್ರಿಯತಮನಿಗೆ , ಒಂದು ವೇಳೆ ಅವನು ಅವಳಿಗೆ ಕಣ್ಣು ಮರಳಿ ಬರಲು ಸಹಾಯ ಮಾಡಿದರೆ/ದೃಷ್ಟಿ ಬಂದು ಜಗತ್ತನ್ನು ನೋಡಲು ಸಹಾಯ ಮಾಡಿದರೆ , ಅವನನ್ನು ಮದುವೆಯಾಗುವುದಾಗಿ ಹೇಳಿದಳು.

ಆಗೊಂದು ದಿನ ಒಬ್ಬ ತನ್ನ ಕಣ್ಣು ದಾನವಾಗಿ ಕೊಟ್ಟು, ಅವಳಿಗೆ ದೃಷ್ಟಿ ಬರಲು ಸಹಕರಿಸಿದ. ಆಗ ಅವಳು ಅವಳ ಪ್ರಿಯತಮನ ಸಹಿತ ಜಗತ್ತೇ ನೋಬಲ್ಲವಲಾದಳು, ಆಗ ಅವಳ ಪ್ರಿಯತಮ ಅವಳನ್ನು ಕೇಳಿದ ಈಗ ನಿನ್ನ ಕಣ್ಣು ಕಾಣಿಸುತ್ತಿದೆಯಲ್ಲ, ಹಾಗಾಗಿ ಈ ಹಿಂದೆ ನೀನೆ ಹೇಳಿದ ಹಾಗೆ ನನ್ನ ಮದುವೆಯಾಗುವೆಯ? ಅವನ ಮುಖ ನೋಡಿದ ಹುಡುಗಿ ಗಾಬರಿಯಾದಳು, ಯಾಕೆಂದರೆ ಅವನಿಗೆ(ಅವಳ ಪ್ರಿಯತಮ) ಕಣ್ಣೇ ಇರಲಿಲ್ಲ, ಅದ್ದರಿಂದ ಅವಳು ಅವನನ್ನು ಮದುವೆಯಾಗಲು ನಿರಾಕರಿಸಿದಳು, ಅವಳ ಪ್ರಿಯತಮಕಣ್ಣಲ್ಲಿ ನೀರು ತುಂಬಿಕೊಂಡು ಹೋಗುತ್ತಾ ಅವಳಿಗೆ ಹೇಳಿದ, ನನ್ನ ಕಣ್ಣುಗಳನ್ನು ಸರಿಯಾಗಿ ಕಾಪಾಡಿಕೋ ಎಂದ.

(ಅವಳಿಗೆ ಕಣ್ಣು ಬರಲು ಅವನು ತನ್ನದೇ ಕಣ್ಣು ಕೊಟ್ಟಿದ್ದ) ಆದರೆ ಅವಳು ಕಣ್ಣು ಬಂದ ಕೂಡಲೇ ಅವನಿಗೆ ಕೈ ಕೊಟ್ಟಳು........

ಇದು ನನಗೆ ನನ್ನ ಸ್ನೇಹಿತನೊಬ್ಬ ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದ್ದ ಅದು ಅಂಗ್ಲ ಭಾಷೆಯಲ್ಲಿ ಇತ್ತು , ಅದನ್ನು ನಾನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ, ಇದು ಓದಲು ಅಷ್ಟು ಮಜವಲ್ಲದೆ ಇರಬಹುದು ...!!