ಗುಡು ಗುಡಿಯಾ ಸೇದಿ ನೋಡಾ
ಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography. ಮ್ಯೂಸಿಕ್ಇಂಡಿಯಾಆನ್ಲೈನ್ ನಲ್ಲಿ ಪೂರ್ತಿ ಇದೆ - http://www.musicindiaonline.com/p/x/tV7wwjx3jS.As1NMvHdW/
ಸಿಡಿ ಕೊಂಡು ಕೇಳಿದರೆ ಅತ್ಯುತ್ತಮ :-)
ಪೂರ್ಣ ಪದ:
ಗುಡು ಗುಡಿಯಾ ಸೇದಿ ನೋಡಾ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಮನಸೆಂಬ ಸಂಚಿಯ ಬಿಚ್ಚಿ
ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ
ನೆರವೆಂಬ ಚಿಲುಮೆಯ ಹಚ್ಚಿ
ಬುದ್ಧಿ ಅನುವಂಥ ಕೆಂಡವ ಮೇಲಲಿ ಮುಚ್ಚಿ
ಗುಡು ಗುಡಿಯಾ ಸೇದಿ ನೋಡಾ
ಬುರುಡಿಯೆಂಬುದು ಶರೀರ
ಇದನರಿತು ಸುಕೃತಗಿಟ್ಟು ಕೊಡಲಿ ಆಕಾರ
ವರ ಶಿಶುನಾಳನೆಂಬ ನೀರ ತುಂಬಿ
ಅರಿವೆಂಬ ಅರುವೆಯಾ ಹಚ್ಚು ಮೋಜುಗಾರ
ಗುಡು ಗುಡಿಯಾ ಸೇದಿ ನೋಡಾ
ಶುದ್ಧ ಜ್ಞಾನ ಮೇಲೇರಿ ದಾರಿದ್ರ್ಯ ದೇಹ ಸುಟ್ಟು
ಹೊಗೆಯು ಹಾರುವುದು ಬುದ್ಧಿವಂತ ರಾಯನದು
ವರಸಿದ್ಧ ಶಿಶುನಾಳಧೀಶನ ತೋರುವುದು
ಗುಡು ಗುಡಿಯಾ ಸೇದಿ ನೋಡಾ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಗುಡು ಗುಡಿಯಾ ಸೇದಿ ನೋಡಾ