ಆಯ್ದ ಸಂಸ್ಕೃತ ಸುಭಾಷಿತಗಳು (೨೮-೩೦)
೨೮.
ಯಾರ ಮುಖವು ಪ್ರಸನ್ನವಾಗಿದ್ದು , ಯಾರ ಮಾತುಗಳು ಅಮೃತಸಮಾನವೋ , ಪರೋಪಕಾರವೇ ಯಾರ ಕೆಲಸವು ಆಗಿರುವದು ಅವರನ್ನು ಯಾರು ತಾನೇ ಗೌರವಿಸುವದಿಲ್ಲ ?
ಮೂಲ :-
ವದನಂ ಪ್ರಸಾದಸದನಂ
ಹೃದಯಂ ಸುಧಾಮುಚೋ ವಾಚ:
ಕರಣಂ ಪರೋಪಕರಣಂ
ಯೇಷಾಂ ಕೇಷಾಂ ನ ತೇ ವಂದ್ಯಾ: ?
೨೯.
ಒಳ್ಳೆಯ ಜನರ ಸಹವಾಸದ ಬಯಕೆ , ಪರರ ಸದ್ಗುಣವನ್ನು ಪ್ರೀತಿಸುವದು , ಗುರುವಿನಲ್ಲಿ ನಮ್ರತೆ , ಕಲಿಕೆಯ ಚಟ , ಸ್ವಪತ್ನಿಯಲ್ಲಿ ಪ್ರೀತಿ , ಜನರ ನಿಂದೆಯ ಭಯ , ಶೂಲಪಾಣಿಯಾದ ಶಿವನಲ್ಲಿ ಭಕ್ತಿ , ಮನಸ್ಸಿನ ನಿಗ್ರಹದಲ್ಲಿ ಶಕ್ತಿ , ದುಷ್ಟರ ಸಹವಾಸದಿಂದ ದೂರ ಇರುವಿಕೆ , ಈ ಗುಣಗಳುಳ್ಳ ಜನರಿಗೆ ನಮ್ಮ ನಮಸ್ಕಾರ!
ಮೂಲ :-
ವಾಂಛಾ ಸಜ್ಜನಸಂಗಮೇ
ಪರಗುಣೇ ಪ್ರೀತಿ:
ಗುರೌ ನಮ್ರತಾ
ವಿದ್ಯಯಾಂ ವ್ಯಸನಂ
ಸ್ವಯೋಷಿತಿ: ರತಿ:
ಲೋಕಾಪವಾದಾತ್ ಭಯ:
ಭಕ್ತಿ: ಶೂಲಿನಿ
ಶಕ್ತಿ: ಆತ್ಮದಮನೇ
ಸಂಸರ್ಗಮುಕ್ತಿ: ಖಲೇ
ಏಶು ಏತೇ ವಸಂತಿ ನಿರ್ಮಲಗುಣಾ:
ತೇಭ್ಯೋ ನರೇಭ್ಯೋ ನಮ:
೩೦.
ಇತರರಿಗಾಗಿ ಸ್ವಾರ್ಥವನ್ನು ತ್ಯಜಿಸುವವರು ಸತ್ಪುರುಷರು.
ತಮಗೆ ಹಾನಿಯಾಗದ ಹಾಗೆ ಪರೋಪಕಾರ ಮಾಡುವವರು ಸಾಮಾನ್ಯ ಜನರು.
ಸ್ವಾರ್ಥ ಸಾಧನೆಗಾಗಿ ಪರರಿಗೆ ಹಾನಿ ಮಾಡುವವರು ರಾಕ್ಷಸರು.
ಇನ್ನು ನಿರರ್ಥಕವಾಗಿ ಪರರ ಹಿತಕ್ಕೆ ಧಕ್ಕೆ ಮಾಡುವವರಿಗೆ ಏನನ್ನಬೇಕೋ ತಿಳಿಯದು.
ಮೂಲ :-
ಏತೇ ಸತ್ಪುರುಷಾ: ಪರಾರ್ಥಘಟಕಾ: ಸ್ವಾರ್ಥಾನ್ ಪರಿತ್ಯಜ್ಯಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭೃತ: ಸ್ವಾರ್ಥಾವಿರೋಧೇನ ಯೇ
ತೇಮಿ ಮಾನವರಾಕ್ಷಸಾ: ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ
ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇನ ಜಾನೀಮಹೆ .