ಭಾರತೀಯ ದರ್ಶನಗಳು
ದರ್ಶನ ಎಂದರೆ ಕಾಣುವಿಕೆ. ಜಗತ್ತಿನ ಹುಟ್ಟು, ರಚನೆ, ಜೀವನ , ಬದುಕಿನ ಗುರಿ, ರೀತಿ ಮೊದಲಾದವುಗಳ ಬಗೆಗಿನ ನೋಟ. ತತ್ತ್ವ ಶಾಸ್ತ್ರ ಎಂದೂ ಕರೆಯಲ್ಪಡುತ್ತದೆ.
ಈ ಜಗತ್ತು ಎಂದರೆ ಎನು? ಇದು ಏಕೆ ಮತ್ತು ಹೇಗೆ ಉಂಟಾಯಿತು?
ಜಗತ್ತಿಗೆ ಏನಾದರೂ ನಿಯಮ ನಿಯಂತ್ರಣ ಉಂಟೆ?
ಇದ್ದರೆ ಅದು ಹೇಗೆ ಕೆಲಸ ಮಾಡುತ್ತದೆ?ನಾನು ಎಂಬುದು ಏನು?
ಜಗತ್ತಿಗೂ ನನಗೂ ಏನು ಸಂಬಂಧ?ನಾನುಹೇಗೆ ಬದುಕಬೇಕು?
ದೇವರೆಂಬುವವನು ಇದ್ದಾನೋ? ಇದ್ದರೆ ಹೇಗಿದ್ದಾನೆ?
ಜೀವನಿಗೂ ದೇವನಿಗೂ ಏನು ಸಂಬಂಧ?
ಅವನಿಂದ ಇವನೋ ?ಅವನೇ ಇವನೋ?
ಈ ಜಗತ್ತಿಗಿಂತ ಭಿನ್ನವಾದ ಲೋಕಗಳಿದ್ದಾವೆಯೇ?
ಹುಟ್ಟಿದವನು ಸತ್ತಂತೆ ಸತ್ತವನು ಮತ್ತೆ ಹುಟ್ಟುವನೋ?
ಜಗತ್ತಿನಲ್ಲಿ ಇಷ್ಟೆಲ್ಲ ವೈವಿಧ್ಯ ವೈಚಿತ್ರ್ಯ ಅದ್ಭುತಾದಿ ವಿದ್ಯಮಾನಗಳೆಲ್ಲ ಯಾಕಿವೆ?
ವ್ಯಕ್ತಿಗೆ ಸುಖ ದುಃಖಗಳು ಯಾಕೆ ಮತ್ತು ಹೇಗೆ ಉಂಟಾಗುತ್ತದೆ?
ವ್ಯಕ್ತಿಯ ಕೆಲಸಗಳಿಗೆ ಶುಭ ಮತ್ತು ಅಶುಭ ಫಲಗಳುಂಟೆ?
ಶಾಶ್ವತ ಸುಖವೆಂಬ ಸ್ಥಿತಿಯೊಂದು ಉಂಟೆ?
ಇದೇ ಮುಂತಾದ ಪ್ರಶ್ನೆಗಳು ದರ್ಶನ ಶಾಸ್ತ್ರದ ವಿಷಯಗಳು.ನಮ್ಮ ದೇಶದ ಚಿಂತಕರು ಈ ಬಗ್ಗೆ ಮಾಡಿದ ಪ್ರಯತ್ನಗಳೇ ಭಾರತೀಯ ತತ್ವಶಾಸ್ತ್ರವೆನಿಸಿದೆ.
ಪ್ರಮುಖ ದರ್ಶನಗಳು-
೧. ಚಾರ್ವಾಕ ದರ್ಶನ
೨. ಜೈನ ದರ್ಶನ
೩. ಬೌದ್ಧದರ್ಶನ
೪. ಸಾಂಖ್ಯದರ್ಶನ
೫. ಯೋಗ ದರ್ಶನ
೬. ನ್ಯಾಯ ದರ್ಶನ
೭. ವೈಶೇಷಿಕದರ್ಶನ
೮. ಮೀಮಾಂಸಾದರ್ಶನ
೯. ವೇದಾಂತದರ್ಶನ (ಅದ್ವೈತ, ದ್ವೈತ, ವಿಶಿಷ್ಟಾದ್ವೈತ,.... ಇತ್ಯಾದಿ)
೧೦. ವ್ಯಾಕರಣದರ್ಶನ
೧೧. ಶೈವ ದರ್ಶನ (ವೀರಶೈವ, ಶಕ್ತಿ ವಿಶಿಷ್ಟಾದ್ವೈತ.........)
(ಆಧಾರ - ಅಕ್ಷರ ಪ್ರಕಾಶನದಿಂದ ಪ್ರಕಾಶಿತವಾದ ಭಾರತೀಯ ತತ್ತ್ವ ಶಾಸ್ತ್ರಪ್ರವೇಶ)
ನಾನು ಮನೆಗೆ ತೆಗೆದು ಕೊಂಡು ಬಂದ ಕೆಲವೇ ಹೊತ್ತಿನಲ್ಲಿ ೩೪೦ ಪುಟಗಳ ಪುಸ್ತಕ ಓದಿ ಮುಗಿಯಿತು :)