ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?

ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?

ಬರಹ

ಗಿರಿಯವರ ಗತಿ,ಸ್ಥಿತಿ ಕಾದಂಬರಿ, ಚಿತ್ತಾಲರ ಶಿಕಾರಿ, ಲಂಕೇಶರ ಬಿರುಕು ಮತ್ತು ತೇಜಸ್ವಿಯವರ ಸ್ವರೂಪ - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಒಂದು ಬಗೆಯಲ್ಲಿ ಇನ್ನೇನು ಇದು ವಿಕ್ಷಿಪ್ತತೆಗೆ ಹೊರಳುತ್ತದೆ ಎನ್ನುವ ಮಟ್ಟದ ಒಂಟಿತನದ ಹಲಬುವಿಕೆ ಇಲ್ಲಿದೆ. ಇಲ್ಲ ಇದೇ ವಿಕ್ಷಿಪ್ತ ಮನಸ್ಥಿತಿ ಎಂದು ಕೆಲವು ಕಡೆ ಅನಿಸಿದರೂ ಅಚ್ಚರಿಯಿಲ್ಲ. ಇದನ್ನು ನವ್ಯ ಎಂದೆಲ್ಲ ಕರೆಯುವುದು ಬೇಕಿಲ್ಲ. ಹಾಗೆಯೇ ನೋಡಬಹುದು. ಲಂಕೇಶ್ ಅಕ್ಕ ಬರೆಯುವ ಹೊತ್ತಿಗೆ ಬದುಕಿನ ಕ್ಷುದ್ರತೆಯ ಕಡೆಗೆ ನೋಡುವ ಅವರ ದೃಷ್ಟಿಕೋನದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದು ಗೋಚರಿಸುತ್ತದೆ. ತೇಜಸ್ವಿಯವರಂತೂ ನವ್ಯದ ಬಗ್ಗೆ ತಿರಸ್ಕಾರ ಬಂದು ಬರವಣಿಗೆಯ ಬೇರೆಯೇ ಮಜಲಿಗೆ ನಡೆದವರು. ಚಿತ್ತಾಲರು ಶಿಕಾರಿ ಬರೆಯುವುವಾಗಲೇ ಬೇರೆಯೇ ಹದ ಕಂಡುಕೊಂಡಿದ್ದರು ಅನಿಸುತ್ತದೆ. ಅದಕ್ಕೆ ಶಿಕಾರಿಯಲ್ಲೇ ನಮಗೆ ಹೊಳಹುಗಳಿವೆ.

ಗತಿ,ಸ್ಥಿತಿ ಬದುಕಿನ ಬೇಸರ (boredom) ಮತ್ತು ಅಸಹ್ಯತೆ (nausea)ಗಳ ಆಭಿವ್ಯಕ್ತಿ ಎನ್ನುತ್ತಾರೆ ಜಿ.ಎಸ್.ಅಮೂರ.

ಅಂಕಿತ ಪ್ರಕಾಶನ, 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು - 560004. ಫೋನ್:26617100, 26617755 ಪುಟಗಳು : 132+viii ಬೆಲೆ: ರೂಪಾಯಿ ಐವತ್ತು.