ಭಾರತೀಯ ಚಿತ್ರರಂಗದ ನೂರು ವರ್ಷ, ಧಾರವಾಡ ಉತ್ಸವ-2013
ಭಾರತೀಯ ಚಲನ ಚಿತ್ರರಂಗದ ನೂರು ವರ್ಷಗಳ - ಒಂದು ದಿನದ ವಿಚಾರ ಸಂಕಿರಣವೊಂದು ಧಾರವಾಡ ಉತ್ಸವ - 2013 ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತದಿಂದ ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ನನಗೂ ಆಹ್ಹಾನವಿದ್ದು, ನನ್ನ ವಿಚಾರಗಳನ್ನು ಸಂಕಿರಣದಲ್ಲಿ ಹಂಚಿಕೊಂಡೆ. ಅದರ ಒಂದು ಫೋಟೋ ತುಣುಕು, ಫೇಸ್ ಬುಕ್ ನಲ್ಲಿ ಗೆಳೆಯ ಡಾ. ಶಶಿಧರ ನರೇಂದ್ರ, ಆಕಾಶವಾಣಿ ಧಾರವಾಡ, ಹಾಗೂ ಕಿರುತೆರೆ ಕಲಾವಿದ, ಫೇ ಬು ನಲ್ಲಿ ತೇಲಿಬಿಟ್ಟದ್ದನ್ನು ತಮ್ಮೊಡನೆ ಹಂಚಿಕೊಂಡೆ ಅಷ್ಟೆ ಗೆಳೆಯರೆ.- ಲಕ್ಷ್ಮೀಕಾಂತ ಇಟ್ನಾಳ, ಧಾರವಾಡ