"ಶಿವತತ್ತ್ವರತ್ನಾಕರ" - ನಾಲ್ಕನೇ ಸಂಪುಟ ಲೋಕಾರ್ಪಣೆ ಸಮಾರಂಭ

"ಶಿವತತ್ತ್ವರತ್ನಾಕರ" - ನಾಲ್ಕನೇ ಸಂಪುಟ ಲೋಕಾರ್ಪಣೆ ಸಮಾರಂಭ

ಕೆಳದಿಯ ಬಸವರಾಜ ಭೂಪಾಲ ವಿರಚಿತ
"ಶ್ರೀಶಿವತತ್ತ್ವರತ್ನಾಕರ" ಸಂಪುಟ 4ರ ಲೋಕಾರ್ಪಣೆ
ಕೃತಿಯ ವಿಶೇಷಗಳು:
ಒಟ್ಟು 13,000 ಶ್ಲೋಕಗಳು! ಹತ್ತು ವಿದ್ವಾಂಸರ ಮಂಡಳಿಯಿಂದ ಕೆಳದಿಯ ಅರಸ ಬಸವರಾಜ ಭೂಪಾಲನ ನೇತೃತ್ವದಲ್ಲಿ ಸಂಕಲನ!!. ವಿವಿಧ ಶಾಸ್ತ್ರ ವಿಷಯಗಳು, ಖಗೋಳಾದಿ ವಿಜ್ಞಾನಗಳು, ಕುಕ್ಕುಟ ಶಾಸ್ತ್ರವೇ ಮೊದಲಾದ ಜೀವ ವಿಜ್ಞಾನ, ರಥ ನಿರ್ಮಾಣ, ನೃತ್ಯಶಾಲಾ ನಿರ್ಮಾಣ, ಮುಂತಾದ ಇಂಜಿನಿಯರಿಂಗ್, ಸಂಗ್ರಾಮ, ಇತಿಹಾಸ, ಆಗಮ, ಮುಂತಾದ ಸಂಕೀರ್ಣಗಳು ಹೀಗೆ ಒಟ್ಟು 213ಕ್ಕೂ ಹೆಚ್ಚು ಶಾಸ್ತ್ರಗಳ ವಿವರಣೆಗಳು; ವಿಶ್ವದ ಪ್ರಾಚೀನ ವಿಶ್ವಕೋಶ ಎಂಬ ಹೆಗ್ಗಳಿಕೆ. ಕರ್ನಾಟಕದ ಇಂದಿನ ಶಿವಮೊಗ್ಗ ಜಿಲ್ಲೆಯ ಕೆಳದಿಯಲ್ಲಿ ರಚಿತ. ಕನ್ನಡ ನೆಲದಿಂದ ಬಂದ ಮೊದಲ ಸಂಸ್ಕೃತ ವಿಶ್ವಕೋಶವೆಂಬ ಹೆಗ್ಗಳಿಕೆ! ಸವಿಗನ್ನಡದಲ್ಲಿ ಮೊದಲ ಬಾರಿಗೆ, ವಿಸ್ತೃತವಾದ ವಿವರಣೆಗಳೊಂದಿಗೆ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ್ ರಿಂದ ಸಂಪಾದಿಸಿ, ದರೇಸಾ ಪಬ್ಲಿಕೇಷನ್ಸ್ ನಿಂದ ಚೊಚ್ಚಲ ಕೃತಿಯಾಗಿ ಪ್ರಕಟಣೆ.
ಪ್ರವೇಶ
"ಭಾರತೀಯ ಸಂಸ್ಕøತಿಯ ಆಚೆಈಚೆಗಳನ್ನು ಆಳ ಅಗಲಗಳನ್ನು ತಿಳಿಯುವವರು ಶ್ರೀಶಿವತತ್ತ್ವರತ್ನಾಕರದಲ್ಲಿ ಅವಗಾಹನಮಾಡಿ ಅಲ್ಲಿರುವ ಅಮೂಲ್ಯರತ್ನಗಳನ್ನು ಅವುಗಳ ಅನಘ್ರ್ಯಗುಣಗಳನ್ನು ಅರಿತುಕೊಳ್ಳಬೇಕು; ಅಧ್ಯಯನ ಮಾಡಬೇಕು. ಅಹುದು. ಕೇವಲ ವೇದಗಳನ್ನಾಗಲಿ, ಪುರಾಣಗಳನ್ನಾಗಲಿ, ಇತಿಹಾಸಗಳನ್ನಾಗಲಿ, ಶಾಸ್ತ್ರಗ್ರಂಥಗಳನ್ನಾಗಲಿ ಓದುವುದರಿಂದ ನಮ್ಮ ಸಂಸ್ಕøತಿಯ ಸಮಗ್ರ ಸಂದರ್ಶನವನ್ನು ಸಂಪಾದಿಸಲಾಗುವುದಿಲ್ಲ. ಅವು ಒಂದೊಂದು ಅದರ ಅತ್ಯುತ್ತಮ ಅಂಶಗಳು ಮಾತ್ರ. ಪ್ರಕೃತಗ್ರಂಥವಾದ ಶ್ರೀಶಿವತತ್ತ್ವರತ್ನಾಕರವು ಪುರಾಣ ಭಾಷೆಯಲ್ಲಿ ರಚಿತವಾಗಿದ್ದರೂ ಎಲ್ಲ ಅಂಶಗಳನ್ನು ಅದು ಹೊಂದಿ ಒಟ್ಟಿನಲ್ಲಿ ಸಾಕಾರ ಸಂಸ್ಕøತಿಯಾಗಿವೆಯೆಂದು ಹೇಳಬಹುದು; ಇದು ಸಂಸ್ಕøತಿಯ ವಾಙ್ಮೂರ್ತಿ. ಇದು ಸಂಸ್ಕøತಿಗೆ ಹಿಡಿದ ಕೈಗನ್ನಡಿಯಾಗಲೀ, ಕೈದೀವಿಗೆಯಾಗಲೀ ಅಲ್ಲ; ಇದು ಮೈಮೆವೆತ್ತಮೈ. ಇಲ್ಲಿ ಮುಳುಗಿದರೆ ಅದರ ಆಳದಲ್ಲಿ ಶಿವತತ್ತ್ವವೆಂಬ ರತ್ನವೊಂದು ಪ್ರಧಾನವಾಗಿ ದೊರೆಯುವುದಷ್ಟೇ ಅಲ್ಲ; ಸಿದ್ಧನಿಗೆ ಕೈವಶವಾಗಿರುವ ಅಣಿಮಾದಿಗಳಂತೆ ಅನೇಕ ಲೌಕಿಕಾಲೌಕಿಕ ರತ್ನಗಳೂ ದೊರೆಯುವುವು. ಈ ರತ್ನಗಳು ರತ್ನಾಕರ (ಸಾಗರ)ದಲ್ಲಿದ್ದರೂ ಹಿತಮಿತವಾಗಿ ಸಂಸ್ಕರಿಸಲ್ಪಟ್ಟವುಗಳಾಗಿವೆ. ಈ ಗ್ರಂಥ ವಿಜ್ಞಾನಪೂರ್ವವರ್ತಿಯಾದ ಸಂಸ್ಕøತಿಯನ್ನು ಅಭ್ಯಸಿಸುವವರಿಗೆ ಅದ್ಭುತವಾದ ರಸದೌತಣ, ಮಣಿ, ಮಂತ್ರ, ತಂತ್ರ, ಔಷಧ, ರಸ, ಸಾಹಿತ್ಯ, ಸಂಗೀತ, ಚಿತ್ರ, ವಾಸ್ತು, ನೃತ್ಯ, ಇತಿಹಾಸ, ಜ್ಯೋತಿಷ, ಆಗಮ, ಖಗೋಳ, ಭೂಗೋಳ, ರಥ, ತುರಗ, ಹಸ್ತಿ, ಸಂಗ್ರಾಮ, ಕೃಷಿ, ರಾಜನೀತಿ ಮುಂತಾದ ವಿಷಯ ವಿವಿಧತೆಗಳನ್ನೊಳಗೊಂಡ ಅಪೂರ್ವಪಾಕವಿದು".
ವಿವಿಧ ಸಂಪುಟಗಳ ಪರಿವಿಡಿ
ಸಂಪುಟ-1 -   ಭೇದ ಸಂಪುಟ
ವೇದಸಾಹಿತ್ಯ, ಸ್ಮøತಿ-ಉಪಸ್ಮøತಿ, ಪುರಾಣಸಾಹಿತ್ಯ, ಶೈವ ಮತ್ತು ವೈಷ್ಣವಾಗಮಗಳು, ಷಡ್ದರ್ಶನಗಳು, ವಿಶ್ವದ ಉತ್ಪತ್ತಿ, ದೃಶ್ಯ ಪ್ರಪಂಚದ ವಿವರಣೆ, ಲಿಂಗಗಳ ವಿವರಣೆ, ಶಿವ-ನಾದ ಉತ್ಪತ್ತಿ, ವಿರಾಟ್ ಸ್ವರೂಪ, ಭೂತ-ಪಂಚಭೂತಗಳು, ಬ್ರಹ್ಮಾಂಡದ ವಿವರಣೆ, ನರಕ ಪ್ರಭೇದಗಳು, ಲೋಕಾಲೋಕಗಳು, ಜಂಬೂದ್ವೀಪ-ಬ್ರಹ್ಮಾಂಡ ವಿವರಣೆ, ಮೇರು ಪರ್ವತ, ದೇವ-ದಾನವ-ರಾಕ್ಷಸರು, ದ್ವೀಪಗಳು, ಗ್ರಹ-ಮೇಘಗಳ ವಿವರಣೆ, ತಿಥಿ, ನಕ್ಷತ್ರ, ಮಾಸ, ರಾಶಿಗಳ ವಿವರಣೆ, ವರ್ಷಾಶಾಸ್ತ್ರ,  ಗ್ರಹಶಾಸ್ತ್ರ, ದೇವತಾಶಾಸ್ತ್ರ.
ಸಂಪುಟ-2 - ಸೃಷ್ಠಿ ಸಂಪುಟ
ಭಾರತದ ಉತ್ತರ-ದಕ್ಷಿಣ ಸೀಮೆಗಳು, ನದ-ನದಿಗಳ ವಿವರಣೆ, ಅರಣ್ಯಗಳು, ಪುಣ್ಯಕ್ಷೇತ್ರಗಳು, ಶಕಪುರುಷರು, ಮಹಾರಾಜರ ರಾಜ್ಯಭಾರ, ವರ್ಣಾಶ್ರಮಧರ್ಮನಿರೂಪಣೆ, ಸಾಧಾರಣಧರ್ಮ, ಮಹಾಪಾತಕಗಳು, ಸೂರ್ಯ ಚಂದ್ರವಂಶದ ರಾಜರು, ಬಸವೇಶ್ವರಚರಿತ್ರೆ, ಶಿವಪೂಜಾವಿಧಿ, ಕಲಿಧರ್ಮ ಕಲಿದೋಷ, ವಿಜಯನಗರ ನಿರ್ಮಾಣ ಚರಿತ್ರೆ, ಮಲ್ಲದೇಶಾದಿಗಳು, ಕೆಳದಿ ರಾಜವಂಶ, ನಿಧಿಶಾಸ್ತ್ರ, ವಿಷಶಾಸ್ತ್ರ, ರಾಜಧರ್ಮಶಾಸ್ತ್ರ, ಶಕುನಶಾಸ್ತ್ರ, ದೇವತಾ ಪ್ರತಿಷ್ಠಾಪನೆ, ರಾಜನೀತಿಶಾಸ್ತ್ರ, ಸ್ವರ ಮುಹೂರ್ತಶಾಸ್ತ್ರ, ಯುದ್ಧಶಾಸ್ತ್ರ, ರಾಜ್ಯಸಪ್ತಾಂಗ.

ಸಂಪುಟ-3 - ವಿದ್ಯಾ ಸಂಪುಟ
ವಾಸ್ತುಶಾಸ್ತ್ರ, ನಗರ ನಿರ್ಮಾಣಶಾಸ್ತ್ರ, ನಾಟಕಶಾಲಾನಿರ್ಮಾಣ, ನೃತ್ಯಶಾಸ್ತ್ರ, ಗೀತ-ತಾಲ ವಿವರಣೆ, ಸಂಗೀತಶಾಸ್ತ್ರ, ವಾದ್ಯಶಾಸ್ತ್ರ, ವನಶಾಸ್ತ್ರ, ಜಲಶಾಸ್ತ್ರ್ತ್ರ, ಅರಣ್ಯಶಾಸ್ತ್ರ, ಸಸ್ಯಶಾಸ್ತ್ರ, ಸ್ತ್ರೀಭೇದ,  ಕಾಮಶಾಸ್ತ್ರ, ಉಪಭೋಗಶಾಸ್ತ್ರ, ಗಂಧಶಾಸ್ತ್ರ, ಭೂಷಣೋಪಭೋಗ, ರತ್ನಶಾಸ್ತ್ರ, ಪಾಕಶಾಸ್ತ್ರ, ಆಯುರ್ವೇದಶಾಸ್ತ್ರ, ವೃಕ್ಷಾಯುರ್ವೇದ, ರಸಶಾಸ್ತ್ರ, ಔಷಧಿಶಾಸ್ತ್ರ, ವಿಷಶಾಸ್ತ್ರ, ವಿಷಚಿಕಿತ್ಸೆ.
ಸಂಪುಟ-4  ಶಾಸ್ತ್ರ ಸಂಪುಟ
ರಾಜ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ, ಮಂತ್ರಶಾಸ್ತ್ರ, ಸಂಗೀತಶಾಸ್ತ್ರ, ಕಾವ್ಯಶಾಸ್ತ್ರ, ನಾಟ್ಯಶಾಸ್ತ್ರ, ಜಾತಕರ್ಮವಿಧಿ, ಶಿಕ್ಷಣಶಾಸ್ತ್ರ, ಗ್ರಹಶಾಸ್ತ್ರ, ಖಗೋಲಶಾಸ್ತ್ರ, ಸ್ತ್ರೀಪುರುಷಲಕ್ಷಣ ವಿವರಣೆ, ಹಸ್ತಿಶಾಸ್ತ್ರ, ಅಶ್ವಶಾಸ್ತ್ರ, ದಕ್ಷಿಣದೇಶದ ಪರಿಚಯ, ಯೋಗಶಾಸ್ತ್ರ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಧನುರ್ವಿದ್ಯೆ, ಮಲ್ಲವಿದ್ಯೆ, ಕುಕ್ಕುಟಶಾಸ್ತ್ರ, ಭಸ್ಮವಿದ್ಯೆ, ಶಿವಪೂಜಾವಿಧಿ, ಮಣಿಶಾಸ್ತ್ರ.
ಸಂಪುಟ-5
ಪಿಂಡಾಂಡ ನಿರೂಪಣೆ, ಸಂಸಾರ ಸುಖ-ದುಃಖ ನಿರೂಪಣೆ, ಮೋಕ್ಷಶಾಸ್ತ್ರ, ವೈದಿಕದರ್ಶನಗಳು, ಅವೈದಿಕದರ್ಶನಗಳು, ಶಿವಾಚಾರ, ಷಟ್‍ಸ್ಥಲ ನಿರೂಪಣೆ, ಶಿವಾಚಾರವಿಧಿ, ವಿಸೃತ ಶಬ್ದಸೂಚಿ ಮತ್ತು ಗ್ರಂಥಸೂಚಿ.
ಸಮಾರಂಭದ ವಿವರ:
1.     ಸಾನಿಧ್ಯ - ಪೂಜ್ಯ ಶ್ರೀ ಸ್ವಾಮಿ ಹರ್ಷಾನಂದಜಿ ಮಹರಾಜ್
2.    ಅಧ್ಯಕ್ಷತೆ: ಮಾನ್ಯ ನ್ಯಾಯಮೂರ್ತಿ ಎ. ಜೆ. ಸದಾಶಿವ

3.    ಮುಖ್ಯ ಅತಿಥಿಗಳು : ಡಾ. ಹೊ. ಶ್ರೀನಿವಾಸಯ್ಯ
4.    ಸಂಪುಟ ಕುರಿತು : ಪ್ರೊ. ಜಯತೀರ್ಥಾಚಾರ್ಯ ಮಳಗಿ
5.    ಸಂಪಾದಕರ ಮಾತು: ಪೆÇ್ರ. ಮಲ್ಲೇಪುರಂ ಜಿ ವೆಂಕಟೇಶ್,
     ಸ್ವಾಗತ: ಎಂ. ಎ. ದಯಾಶಂಕರ
    ವಂದನಾರ್ಪಣೆ: ಶ್ರೀಮತಿ ಶಾಂತಲಾ ಡಿ. ಕಿರಣ್
    ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ ಆವರಣ, ಚಾಮರಾಜಪೇಟೆ. ಬೆಂಗಳೂರು.
ದಿನಾಂಕ: 22-2-2014
ವಿವರಗಳಿಗೆ: (1) 9632294500
  (2) 9845284448
  (3) 9449456010
  (4) 9902548782
  (5) 9845355172