ಗಾಂಧೀ ಜಯಂತಿಯಲ್ಲಿ ಪ್ರತಿಜ್ಞಾ ವಿಧಿ

Submitted by Amaresh patil on Fri, 10/03/2014 - 16:01

ನಿನ್ನೆ ಅಕ್ಟೋಬರ 2 ರಂದು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ನಾನು ಕಾರ್ಯ ನಿರ್ವಹಿಸುವ ಕನ್ನಾಳ ಗ್ರಾಮ ಪಂಚಾಯತಿಗೆ ರಾಜ್ಯ ಸರಕಾರ ನೀಡಿರುವ  ಗಾಂದೀ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಷಯವಾಗಿತ್ತು. ಜೋತೆಗೆ ಗಾಂಧೀಜಿಯವರ ಜಯಂತಿಯಂದು ಮಾನ್ಯ ಪ್ರಧಾನ ಮಂತ್ರಿಗಳು ಸ್ವಚ್ಚ ಭಾರತ ಅಭಿಯಾನದ ಸ್ಷಚ್ಚತಾ ಆಂದೋಲನವನ್ನು ಎಲ್ಲಾ ಸರಕಾರಿ ಕಛೇರಿಗಳಲ್ಲಿ ಗಾಂಧೀ ಜಯಂತಿಯ ಅಚರಣೆ ನಂತರ ಸ್ವಚ್ಚತಾ ಆಂದೋಲನದ ಪ್ರತಿಜ್ಞಾ ವಿಧಿಯನ್ನು ಬೋದಿಸುವುದು, ಸ್ವಿಕರಿಸುವದು‍,ನಂತರ ಸ್ವ ಇಚ್ಚೆಯಿಂದ ಸಾರ್ವಜನಿಕರು,ಜನಪ್ರತಿನಿದಿಗಳು,ಸರಕಾರಿ ಅಧಿಕಾರಿಗಳು, ಆಂದೋಲನದಲ್ಲಿ ಭಾಗಿಯಾವುದರ ಪ್ರಕ್ತಿಯೆಂತೆ ನಾವು ಕೂಡಾ ನಮ್ನ ಗ್ರಾಮ ಪಂಚಾಯತಿಯಲ್ಲಿ ಗಾಂಧೀಜಿಯವರ ಜಯಂತಿಯ ನಂತರ ಸ್ವಚ್ಚತಾ ಆಂದೋಲನ ಪ್ರತಿಜ್ಞಾ ವಿಧಿಯನ್ನು ಬೋದಿಸುವ ಅವಕಾಶ ನನಗೆ ಒದಗಿ ಬಂತು ಸ್ವಚ್ಚತಾ ಆಂದೋಲನದ ಪ್ರತಿಜ್ಞಾ ವಿಧಿಯನ್ನು ಸ್ವಿಕರಿಸಿದ ನಂತರ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಗ್ರಾಮದ ಬೀದಿಗಳಲ್ಲಿ ಕಸಗೂಡಿಸುವದರೊಂದಿಗೆ ಆಂದೋಲನಕ್ಕೆ ಚಾಲನೆ ನೀಡಲಾಯಿತು.ಈ ಅಂದೋನವು ಮಾನ್ಯ ಪ್ರಧಾನ ಮಂತಿಗಳು ಕರೆನೀಡಿರುವ ಹಾಗೆ ವರ್ಷದಲ್ಲಿ 100 ದಿನಗಳವರೆಗೆ ಎಲ್ಲರೂ ನಡೆದಾಗ ಪ್ರಧಾನ ಮಂತ್ರಿಗಳ ಕರೆಗೆ ಹಾಗೂ ಯುಗಪುರುಷ.ಶಖಪುರುಷ.ರಾಮ್ ರಾಜ್ಯದ ಕನಸುಕಂಡ ಮಹಾತ್ಮನಿಗೊಂದು ನಾವು ಗೌರವ ಸಲ್ಲಿಸಿದಂತೆ‍‍