ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !

ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ," ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !

ಬರಹ

ಈಗ ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪ್ರಾರಂಭೋತ್ಸವದ ಸಿದ್ಧತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ, " ಡಾ. ಎಮ್. ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಏರ್ಪೋರ್ಟ್," ಎಂದು ಹೆಸರಿಡಬೇಕೆಂಬುದು ನಮ್ಮೆಲ್ಲರ ಕಳ-ಕಳಿಯ ಮನವಿ" !


ಬೆಂಗಳೂರಿನ ಹೊಸ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ ಹೆಸರನ್ನು ಭಾರತದ ಸುಪುತ್ರ, ಡಾ. ವಿಶ್ವೇಶ್ವರಯ್ಯ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಎಂದು ಹೆಸರಿಸುವುದು ಅತಿ ಉಪಯುಕ್ತ ! ಭಾರತದ ಔದ್ಯೋಕರಣದ ಶಿಲ್ಪಿಯೆಂದೇ ಎಲ್ಲರ ಗೌರವಕ್ಕೆ ಪಾತ್ರರಾದ ಮಹಾಶಿಲ್ಪಿ, ಸರ್ ಎಮ್. ವಿಶ್ವೇಶ್ವರಯ್ಯ ನವರ ಜೀವನವೇ ಒಂದು ಆದರ್ಶಮಯ ತೆರೆದ ಪುಸ್ತಕದಂತೆ ಇದೆ. ಅವರ ಸೇವೆಗೆ ನಮ್ಮ ಕೃತಜ್ಞತೆಯನ್ನು ತೋರಿಸುವ ಕಾಲ ಬಂದಿದೆ.


ಅಭಿಯಂತರಾಗಿದ್ದ ಅವರು, ಮಹಾಚಿಂತಕರು, ದಿವಾನನರು, ಮತ್ತು ಮಧ್ಯಮವರ್ಗದಲ್ಲಿ ಜನಿಸಿದ್ದಾಗ್ಯೂ, ಉದ್ಯಮಿಗಳಾಗಿ ಎಲ್ಲವನ್ನೂ ನಿಭಾಯಿಸಿದ ಹೆಗ್ಗಳಿಗೆ ಅವರದು. ೧೯೧೨ ರಲ್ಲಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರಿಗೆ ಮೈಸೂರಿನ ದಿವಾನ ಪದವಿಯನ್ನು ವಹಿಸಿಕೊಡಲಾಯಿತು. ಆಗ ಅವರು ಮಾಡಿದ ದೇಶಸೇವೆಯನ್ನು ಯಾರೂ ಕನಸಿನಲ್ಲಿಯೂ ಮರೆಯಲಾರದಂತಹದು.


ಶಾಲಾ ತಾಂತ್ರಿಕ ಕಾಲೇಜುಗಳು,


ಮೈಸೂರು ವಿಶ್ವವಿದ್ಯಾಲಯ,


ಮೈಸೂರ್ ಬ್ಯಾಂಕ್,


ಸ್ಥಾಪನೆ, ನೀರಾವರಿ ಕಾಲುವೆಗಳ ಸ್ಥಾಪನೆ ,


ಪ್ರಮುಖ ತಯಾರಿಕಾ ಘಟಕಗಳ ನಿರ್ಮಾಣ.


ಪೇಪರ್, ಉಕ್ಕಿನಿಂದ, ಶಕ್ತಿ ಹಾಗೂ ಸೋಪ್ ತಯಾರಿಕೆಯ ಸಹಿತ.


* ಭದ್ರಾವತಿ ಐರನ್ ಅಂಡ್ ಸ್ಟೀ ಇಂಡಸ್ಟ್ರೀಸ್ ಲಿಮಿಟೆಡ್.


* ಗವರ್ನ್ಮೆಂಟ್ ಸೋಪ್ ಫ್ಯಾಕ್ಟರಿ.


* ಸ್ಯಾಂಡಲ್ ವುಡ್ ಪೇಪರ್ ಫ್ಯಾಕ್ಟರಿ.


* ಏರೋನಾಟಿಕಲ್ ಇಂಜಿನಿಯರಿಂಗ್ ಇದನ್ನು ಆಗಿನಕಾಲದ ಬೊಂಬಾಯ್ ಪ್ರಾಂತ್ಯದ ಲಾಲ್ ಚಂದ್ ಹೀರಾಚಂದ್ ರವರ ಧನಸಹಾಯದಿಂದ ಸ್ಥಾಪಿಸಿದರು.


* ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದರು.


* ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆ.


* ಮೈಸೂರ್ ಬ್ಯಾಂಕ್ ಸ್ಥಾಪನೆ.


* ಮೈಸೂರ್ ಲ್ಯಾಂಪ್ ಫ್ಯಾಕ್ಟರಿ.


ಇದಲ್ಲದೆ ಶಿವನಸಮುದ್ರದಲ್ಲಿ ಹೈಡ್ರೊ ಎಲೆಕ್ಟ್ರಿಕ್ ಪರಿಯೋಜನೆಯನ್ನು,


ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಬೆಂಗಳೂರು,


ಮೈಸೂರು ವಿಶ್ವವಿದ್ಯಾಲಯ, ಮೈಸೂರ್,


೧೯೧೭ ರಲ್ಲಿ ಮೊಟ್ಟಮೊದಲು ಗವರ್ನ್ಮೆಂಟ್ ಇಂಜಿಮ್ನಿಯರಿಂಗ್ ಕಾಲೇಜ್,


ಇದರ ಹೆಸರನ್ನು ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ ಎಂದು ನಾಮಕರಣಮಾಡಿದ್ದರು.


ಇಂತಹ ಸುಪುತ್ರನ ಹೆಸರನ್ನು ಈಗ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಭವ್ಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಇಡುವುದು ಅತ್ಯಂತ ಪ್ರಶಸ್ತ್ಯವೂ ಹಾಗೂ ಗೌರವದಾಯಕವೂ ಹೌದು. ಅದೂ ಅಲ್ಲದೆ, ಕರ್ನಾಟಕದ ಮಣ್ಣಿನಲ್ಲೇ ಎಮ್. ವಿ ಯವರು, ಜನಿಸಿ ತಮ್ಮ ಬಾಳಿನ ಅಂತ್ಯಸಮಯವನ್ನು ಕಳೆದದ್ದು, ಎಲ್ಲರಿಗೂ ತಿಳಿದ ಸಂಗತಿ.


ಇನ್ನು ಕೇವಲ ೩ ದಿನಗಳಲ್ಲಿ ಸಾರ್ವಜನಿಕರಿಗೆ, ನಮ್ಮ ಹೊಸ ವಿಮಾನ ನಿಲ್ದಾಣದ ಬಿಡುಗಡೆಯ ಸಮಾರಂಭ ನಡೆಯಲಿದೆ. ಈಗಲಾದರೂ ನಮ್ಮ ಜನನಾಯಕರು ತಮ್ಮ ಗೌರವವನ್ನು ಸರ್ ಎಮ್. ವಿ ರವರಿಗೆ ತೋರಿಸುವುದರ ಮೂಲಕ, ಅವರು ಮೈಸೂರಿಗೆ ಮಾಡಿದೆ ಅಪಾರಸೇವೆಯನ್ನು ನೆನೆಯಲು ಅನುವುಮಾಡಿಕೊಡುವರೆಂದು ನಂಬಬೇಕಾಗಿದೆ.


ದೇವರು ಸದ್ಬುದ್ಧಿಯನ್ನು ಕರುಣಿಸಲೆಂದು ಮಾತ್ರ ನಾವು ಕೇಳಿಕೊಳ್ಳಬಹುದು.


ಮಹಾರಾಷ್ಟ್ರದಲ್ಲೋ ಪಶ್ಚಿಮ ಬಂಗಾಳದಲ್ಲೋ ಆಗಿದ್ದರೆ, ಇಂತಹ ಪ್ರಮೇಯ ಬರುತ್ತಿರಲಿಲ್ಲ. ಪ್ರಚಂಡ ಭಾಷಾಪ್ರೇಮಿಗಳು ಅವರು.


ಮಣ್ಣಿನಮಕ್ಕಳನ್ನು ನೆನೆದು ಗೌರವಿಸುವ ಸೌಜನ್ಯವನ್ನು ತೋರಿಸುತ್ತಲೇ ಬಂದಿದ್ದಾರೆ.


ನಮ್ಮ ಜನರಿಗೆ ದೇವರು ಆ ಬುದ್ಧಿಯನ್ನು ದಯಪಾಲಿಸಲಿ.