ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?

ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?

ಬರಹ

ಕೆಂಪೆಗೌಡರು ಬೆಂಗಳೂರಿನ ನಿರ್ಮಾಪಕರು. ಅದು ನಿರ್ವಿವಾದದ ಮಾತು. ಆದರೆ, ನಮ್ಮ ನವ-ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ಅಂದ್ರೆ, ಸರ್ . ಎಮ್. ವಿ ಯವರದಲ್ಲವೇ ? ಪಂಪ, ಕನ್ನಡದ ಆದಿಕವಿ. ಬಸವಣ್ಣನವರು, ಅದರ್ಶಪ್ರಿಯರು. ನೃಪತುಂಗ- ಮಹಾ ಚಕ್ರವರ್ತಿ. ಅಕ್ಕಮಹದೇವಿ, ಹೆಸರಾಂತ ಶಿವ ಶರಣೆ. ಕಿತ್ತೂರು ಚೆನ್ನಮ್ಮ, ಇತ್ಯಾದಿ.

ಆದರೆ, ತಂತ್ರಜ್ಞಾನ, ನವ್ಯ, ಆಧುನಿಕ ವ್ಯಹಹಾರಗಳು, ಉದ್ಯಮ ಕ್ಷೇತ್ರಗಳ ನಿರ್ಮಾಣ ಇವೆಲ್ಲಾ ಗಣನೆಗೆ ತೆಗೆದುಕೊಳ್ಳಬೇಡವೇ ? ಸದ್ಯ. ಡಾ. ರಾಜ್ ಕುಮಾರ್ ಹೆಸರನ್ನು ತರಲಿಲ್ಲ. ರಾಜ್ ಹೆಸರನ್ನು ಒಂದು ಭವ್ಯ ಕಲಾಮಂದಿರವನ್ನು ಕಟ್ಟಿದಾಗ ಬಳಸಿ. ಕೆಂಪೇ ಗೌಡರ ಹೆಸರು ಅಮರವಾಗಿದೆ. ಬೆಂಗಳೂರು ಪೂರ್ತಿ ಅವರದೇ. ಅವರ ನೀಲ ನಕ್ಷೆಯನ್ನೇ ನಾವು ಇಂದಿಗೂ ಅನುಸರಿಸುತ್ತಿದ್ದೇವೆ. ಅಲ್ಲವೇ ?

ಎಲ್ಲಾ ಬಿಟ್ಟು ಆಧಿನಿಕ ಏರ್ಪೋರ್ಟ್ ಗೆ ಅವರ ಹೆಸರ್ಯಾಕೆ ಸ್ವಾಮಿ ? ಡಾ. ವಿಶ್ವೇಶ್ವರಯ್ಯನವರಿಗಿಂತಾ ಭಾರಿ ದೊಡ್ಡೋರು. ಹಿರಿಯರು ಅವರು. ಅಲ್ಲವೇ !

ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
ನಮ್ಮ ರೈತಮಕ್ಕಳ ಜೀವನನ ಬಂಗಾರಮಾಡಿದ ಮಾನುಬಾವನ್ನ ಮರಯಕ್ಕಾದೀತೇನಣ್ಣ ? ಒಸಿ ಅಂಗೇ ಇಚಾರಮಾಡಿ.
ಕಾಲ ಇನ್ನು ಮಿಂಚಿಲ್ಲ ಕಣಣ್ಣ. ಉಸಾರು, ಅನ್ನಕೊಟ್ಟೋರ್ನ ಮರ್ಯೋದು ಯಾವ್ನ್ಯಾಯ. ಇದೆಲ್ಲಾ, ಈನ ಬುದ್ದೀನ ಏಳ್ಕೊಟ್ಟೊರು ಯಾರು ಅಂತೀನಿ ?