ಹೆಣ್ಣು, ಶೀಲ, ಕನ್ಯತ್ವ ಮತ್ತು ಮುಕ್ತ ನಾಗರೀಕತೆ(ನಿರ್ಭೀಡ ಹೆಣ್ಣೊಬ್ಬಳ ಮನದಾಳ)

To prevent automated spam submissions leave this field empty.

ಮೊದಲೇ ಹೇಳಿಬಿಡುತ್ತೇನೆ ನಿರ್ಭೀಡ ಹೆಣ್ಣು ಎಂದು ಕರೆದದ್ದು ನನ್ನನ್ನಲ್ಲ ಮುಂದೆ ಓದಿ
ಸ್ವಲ್ಪ ಹಾಟ್ ಟಾಪಿಕ್ ಆದರೆ ತುಂಬಾ ದಿನದಿಂದ ಮನಸಲ್ಲಿ ಕೊರೀತಾ ಇತ್ತು. ಟೈಪ್ ಮಾಡೋಕೆ ನೂರಾರು ಅಡ್ಡಿ ಅಡಚಣೆಗಳು, ಇಂದು ಹೊರಗಡೆ ಹಾಕ್ತಾ ಇದ್ದೇನೆ

ಹೋದ ಶನಿವಾರ ವಾಲೆಂಟೈನ್ಸ್ ದಿನ ಯಲಹಂಕ ಏರ್ ಶೋ ಗೆ ಹೋಗಿದ್ದೆವು :)
ನನಗೇನು ಅದರಲ್ಲಿ ಅಂತಹ ವಿಶೇಷ ಆಸಕ್ತಿ ಇಲ್ಲ ನಮ್ಮ ಮನೆಯವರು ಅದೇ ಫ಼ಿಎಲ್ದ್ನಲ್ಲಿ ಕೆಲಸ ಮಾಡುವುದರಿಂದ ಟಿಕೇಟ್ ಸಿಕ್ಕಿತು ಹಾಗಾಗಿ ನಾನು ಜೊತೆಗೆ ಹೋದೆ, ಜೊತೆಗೆ ಎರೆಡು ಬಾಲಗಳು (ನನ್ನ ಮಗಳು, ನನ್ನ ಅಕ್ಕನ ಮಗಳು)
ವಿಮಾನಗಳನ್ನೆಲ್ಲಾ ನೋಡಿಯಾದ ಮೇಲೆ ಇವರು ಸ್ಟಾಲ್ಸ್ ನ ವೀಕ್ಷಣೆಗೆ ಹೋದರು ನಾನು ಹಾಗು ಬಾಲಗಳೆರೆಡು ಅಲ್ಲೇ ಕ್ಯಾಂಟೀನ್ ಮುಂದೆ ಕೂತೆವು.

ನನ್ನ ಪಕ್ಕದಲ್ಲೇ ಜೋಡಿಯೊಂದು ಬಂದಿತು. ಆ ಹೆಂಗಸು ನನ್ನ ಬಳಿಯಲ್ಲೇ ಕೂತಳು, ಅವಳ ಫ್ರೆಂಡ್ ಎಲ್ಲಿಯೋ ಹೊರಟನು.
ಸ್ವಲ್ಪ ಹೊತ್ತಿನಲ್ಲೇ ನನ್ನ ಅವಳ ಮಾತುಕತೆ ಶುರುವಾಯಿತು ಅವಳು ಕನ್ನಡದವಳೇ, ಯಾವುದೋ ಎಲೆಕ್ಟಾನಿಕ್ ಕಂಪೆನಿಯಲ್ಲಿ ಸೋರ್ಸಿಂಗ್ ಹೆಡ್ ಎಂದು ಪರಿಚಯಿಸಿಕೊಂಡಳು ಮಾತು ಹಾಗೆ ಮಂಗಳೂರಿನ ಪಬ್ ಬಗ್ಗೆ ಹೊರಳಿತು.
ನೋಡಲು ಸೌಮ್ಯವಾಗಿದ್ದರೂ ಮಾತು . ಆಲೋಚನೆಗಳು ವಿಭಿನ್ನ ಎನಿಸಿತು
ನನ್ನ ನಿಲುವು ಕೊಂಚ ಹಳೆಯದು ಸ್ತ್ರೀ ಸ್ವಾತಂತ್ರ್ಯ ಸಂಸ್ಕೃತಿ ಎಂದೆಲ್ಲಾ ಬಡ ಬಡಿಸಿದೆ
ನನ್ನ ಮಾತುಗಳು ಹಳೆಯವೇ ಹಾಗಾಗಿ ನನ್ನ ಮಾತುಗಳನ್ನು ಕಟ್ ಮಾಡಿ ಅವಳ ಆಲೋಚನೆಗಳನ್ನಷ್ಟೆ ಹೇಳುತ್ತೇನೆ
" ಯಾವ ಸಂಸ್ಕೃತಿ ಯಾವ ಕನ್ಯತ್ವ, ಇವೆಲ್ಲಾ ಸುಮ್ಮನೆ ಸಮಾಜ ಮಾಡಿರೋ ಕಟ್ಟುಪಾಡುಗಳು, ನಾವು ಮನುಷ್ಯರೆ ನಮಗೂ ಆಸೆ ಆಕಾಂಕ್ಷೆ ಇರುತ್ತವೆ, ಮದುವೆಗೆ ಮುಂಚೆ ಹೆಣ್ಣು ಲೈಂಗಿಕ ಸುಖ ಹೊಂದಬಾರದು ಅನ್ನೋದು ತಪ್ಪಲ್ಲವಾ. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯಾನಾ. ಹೆಣ್ಣು ಕನ್ಯತ್ವ ಕಳೆದುಕೊಳ್ಳುತಾಳೆ ಅನ್ನೋದು ತಲೆ ಇರದವರ ಮಾತಲ್ಲ್ವಾ.
ಹೆಣ್ಣಿಗೆ ಕನ್ಯತ್ವ ಇರ್ಬೇಕು ಅಂದರೆ ಗಂಡು ಬ್ರಹ್ಮಚಾರಿ ಆಗಿರಬೇಕು ಆದರೆ ಅದು ಈಗ ಸಾಧ್ಯ ಇಲ್ಲ
ಯಾವ ಹೆಣ್ಣು ಸೀತೆ ಥರ ಇರೋಕೆ ಚಾನ್ಸೇ ಇಲ್ಲ , ಮನಸಲ್ಲಿ ಮದುವೆಗೆ ಮುಂಚೆ ಬೇರೆ ಯಾರೋ ಒಬ್ಬರನ್ನಾದರೂ ಅಪೇಕ್ಷಿಸಿರುತ್ತಾಳೆ. ಹಾಗೆ ನೋಡಿದರೆ ಅದೂ ಮಾನಸಿಕ ವ್ಯಭಿಚಾರ .
ನಾನು ಕಾಲೇಜಲ್ಲಿ ಓದುವಾಗ ಒಬ್ಬರನ್ನ ಪ್ರೀತಿಸಿದ್ದೆ. ನಂತರ ಇಬ್ಬರಿಗೂ ಏನೋ ಜಗಳ ಆಯ್ತು. ಈಗ ನಾನೇ ಬೇರೆ ಅವನೇ ಬೇರೆ, ನಾನೆಲ್ಲಾ ಕೊಟ್ಟೆ ಅನ್ನೋದು ತಪ್ಪು . ಹಾಗೆ ಅವನು ಎಲ್ಲಾ ಲಾಭ ಪಡೆದ ಅನ್ನೋಹಾಗಿಲ್ಲ ನಾವಿಬ್ಬರೂ ಪರಸ್ಪರ ಹಂಚಿಕೊಂಡಿದ್ದೇವೆ.ಈಗ ಬಂದಿರೋನು ನನ್ನ ಬಾಯ್‌ಫ್ರೆಂಡ್ ಮುಂದೆ ಅವನ ಜೊತೆ ಮದುವೆ ಖಂಡಿತಾ ಆಗುತ್ತೆ ಅಂತ ಹೇಳೊಕಾಗಲ್ಲ ಯಾರೊಡನೆ ಬೇಕಾದರೂ ಆಗಬಹುದು,
ನಮಗೆ ಇಷ್ಟಾ ಇರೋ ಹಾಗೆ ಇರೋಕೆ ಈ ಸಮಾಜ ಬಿಡಲ್ಲ ಅಂತ ನಾವು ನಮ್ಮ ಆಸೆನೆಲ್ಲಾ ಅದುಮಿ ಇಡ್ಲಿಕ್ಕ್ಕಾಗಲ್ಲ ಅಲ್ಬಾ
ಮೊದಲೆಲ್ಲಾ ಹೆಣ್ಣು ಚೂಡಿದಾರ್ ಹಾಕ್ಕೋಳೋದೆ ತಪ್ಪು ಅಂತ ಹೇಳ್ತಿದ್ದ ಸಮಾಜ ಅದನ್ನ ಟೋಟಲ್ಲು ಅಕ್ಸೆಪ್ಟ್ ಮಾಡಿದೆ, ಹಾಗೆ ಮುಂದೆ ಹೆಣ್ಣು ಮದುವೆಗೆ ಮುಂಚೆ ಸೆಕ್ಸ್ ಹೊಂದಿರೋದು ಅಕ್ಸೆಪ್ಟ್ ಆಗಬಹುದು
ಇನ್ನೂ ಎಷ್ಟು ದಿನ ಅಂತ ಹೆಂಗಸರು ಕೂಪ ಮಂಡೂಕಗಳ ಹಾಗೆ ತಾವು ಕುಳಿತ ಬಾವೀನೆ ಪ್ರಪಂಚ ಅಂತಂದ್ಕೋತಿರ್ಬೇಕು. "
ಅವಳು ಇನ್ನೂ ಹೇಳುತ್ತಿದ್ದಳು
ನನ್ನ ಪ್ರಶ್ನೆ ಕೇಳಿದೆ " ಮುಂದೆ ಮದುವೆಯಾದರೆ ಇವೆಲ್ಲಾವನ್ನು ನಿಮ್ಮ ಗಂಡನಿಗೆ ಹೇಳ್ತೀರಾ"
"ಹೌದು ಆದರೆ ಮದುವೆಗೆ ಮುಂಚೇನೆ . ಅವನು ಒಪ್ಪಿಲ್ಲಾ ಅಂದ್ರೆ ನೀನು ಶ್ರೀರಾಮಾನ ಅಂತ ಕೇಳ್ತೀನಿ. ಹೌದು ಅಂದರೆ ಆಯ್ತು ಸೀತೆನ ಹುಡುಕ್ಕೋ ಅಂತೀನಿ, ಒಪ್ಪಿದರೆ ಮದುವೆ ಇಲ್ಲ ಅಂದರೆ ಇಲ್ಲ"
ನನಗೆ ತಲೆ ನೋವು ಬಂತು. ಇವಳೇನು ನನ್ನ ಬ್ರೈನ್ ವಾಶ್ ಮಾಡೋಕೆ ಬಂದಿದಾಳ ಹೇಗೆ ಅಂತನ್ನಿಸ್ತಿತ್ತು. . ಈ ವಿಚಾರ ಧಾರೆನ ಎಲ್ಲೂ ಕೇಳಿಲ್ಲಾ .
ನನ್ನ ಭಾರತೀಯ ನಾರಿಯರು ನಾವು ಎಂಬ ಮಾತಿಗೆ
ಭಾರತೀಯ ನಾರಿ ಎನ್ನೋ ಸಮಾಜ ಯಾಕೆ ಭಾರತೀಯ ಪುರುಷ ಎನ್ನೋದಿಲ್ಲ. ಹೆಂಡತಿ ಬದುಕಿರುವಾಗಲೆ ಗಂಡು ಇನ್ನೊಂದು ಮದುವೆ ಆಗಬಹುದು. ಇಬ್ಬರ ಜೊತೆಯೂ ಸಂಸಾರ ಮಾಡಬಹುದು . ಆದರೆ ನಮ್ಮ ಸಮಾಜ ಅದೇ ಹೆಣ್ಣು ಇನ್ನೊಬ್ಬನೊಡನೆ ಮಾತಾಡಿದರೆ ತಪ್ಪು ಅನ್ನುತ್ತಲ್ಲ ಇಂಥ ಸಮಾಜಕ್ಕೆ ನಾವ್ಯಾಕೆ ಹೆದರಬೇಕು?
ಹೀಗೆ ಅವಳ ಮಾತಿನ ಮೋಡಿಗೆ ಸಿಲುಕಿದ್ದೆ ಕೊನೆಯದಾಗಿ
ಅದಿರಲಿ ನೀವು ಯಾಕೆ ಇದನ್ನೆಲ್ಲಾ ನನ್ನ ಹತ್ತಿರ ಹೇಳ್ತಾ ಇದ್ದೀರ್‍ ಎಂದು ಕೇಳಿದೆ
"ಯಾಕೆಂದರೆ ನಿಮ್ಮ ಬಗ್ಗೆ ನನಗೇನು ಗೊತ್ತಿಲ್ಲ, ನನ್ನ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ನಿಮಗೆ ಹೇಳಿದರೆ ಯಾವುದೇ ಅಪಾಯ ಇಲ್ಲ ಅಂತ ಗೊತ್ತಿದೆ. ತುಂಬಾ ದಿನದಿಂದ ನನ್ನ ಮನಸಲ್ಲಿ ಇರೋದನ್ನ ಯಾರಲ್ಲಾದರೂ ಹೇಳ್ಬೇಕು ಅಂತನ್ನಿಸ್ತಿತ್ತು. ಈಗ ಮನಸ್ಸು ಹಗುರ ಆಗಿದೆ" ಅಂದಳು.
ಅಬ್ಬಬ್ಬಾ ಹೀಗೂ ಇರ್ತಾರಾ ಅನ್ನಿಸ್ತಾ ಇದ್ದ ಹಾಗೆ ಮತ್ತೆ ಮತು ಶುರು ಮಾಡಿದಳು
"ಈಗ ನೋಡಿ ನೀವು ಇಬ್ಬರು ಮಕ್ಕಳನ್ನು ಕೂರಿಸ್ಕೊಂಡು ಹೆಣಗ್ತಾ ಇದೀರಾ . ನಿಮ್ಮ ಯಜಮಾನರು ಆರಾಮಾವಾಗಿ ಹೋಗಿದಾರೆ. ಎಲ್ಲಿದೆ ಸ್ತ್ರೀ ಸ್ವಾತಂತ್ರ್ಯ ಹೇಳಿ, ಮನೇಲಿ ಅಡಿಗೆ ನೀವೇ ಮಾಡ್ವೇಕೆ ಹೊರತು ನಿಮ್ಮ ಯಜಮಾನರು ಮಾಡಲ್ಲ ಅಲ್ವಾ.ಅದ್ಯಾಕೆ ನಿಮ್ಮದೆ ಜವಾಬ್ದಾರಿ ಆಗಿರ್ಬೇಕು ಹೀಗೆ ಹೆಣ್ಣು ಇಲ್ಲಿ ಎಷ್ಟೆ ಸಮಾನತೆ ಸಿಕ್ಕಿತು ಅಂತ ಹೇಳಿದರು. ನನ್ನ ಪ್ರಕಾರ ಅದು ಸಿಕ್ಕಿಲ್ಲ. ಅದಕ್ಕೆ ನನ್ನ ಸ್ವಾತಂತ್ರ್ಯಾನ ನಾನೆ ಆರಿಸಿಕೊಂಡಿದ್ದೀನಿ. "
ನಗುತ್ತಾ ನೋಡಿದಳು ಅದೇನು ನಗೂನೋ ಅಥವ ಅವಳ ಆಯ್ಕೆಯ ಬಗ್ಗೆ ಹೆಮ್ಮೆಯೋ ತಿಳಿಯಲಿಲ್ಲ
ಅವಳ ಮಾತಿಗೆ ಉತ್ತರ ಕೊಡುವಷ್ಟ್ರ್‍ಅಲ್ಲಿ ಅವಳ ಬಾಯ್ ಫ್ರೆಂಡ (ಅವಳೇ ಹೇಳಿದಂತೆ ) ಬಂದ. ನನಗೆ ಬಾಯ್ ಹೇಳಿದಳು, ಫೋನ್ ನಂ ಕೇಳೋಣ ಅನ್ನಿಸಿತು ಆದರೆ ಅವಳು ಕೊಡಲಿಕ್ಕಿಲ್ಲ ಎಂದು ತೋರಿ ಸುಮ್ಮನಾದೆ. ಇವರು ಇನ್ನೂ ಬಂದಿರಲಿಲ್ಲ.
ನನಗೆ ಆಲೋಚನೆಗಳು ಶುರುವಾದವು ಸ್ತ್ರೀ ಸ್ವಾತಂತ್ರ್ಯ ಎಂದರೆ ಹೀಗು ಉಂಟೆ ಹೆಣ್ಣು ಹಾಳಾಗುವುದು, ಕಾಲು ಜಾರುವುದು, ನಡತೆಗೆಟ್ಟವಳು ಎಂಬ ಮಾತಿಗೆಲ್ಲಾ ಅರ್ಥವೇ ಇರೋದಿಲ್ಲ ಹೀಗಾದರೆ. ಅವೆಲ್ಲಾ ಸವಕಲು ಮಾತುಗಳಾಗುವುದರಲ್ಲಿ ಸಂಶಯವೇ ಇಲ್ಲ
ನಿಜಕ್ಕೂ ಅವಳು ಹೇಳಿದ ಮಾತುಗಳಲ್ಲಿ ಅರ್ಥವಿದೆ ಅನ್ನಿಸಿತು
ಅವಳೇ ಹೇಳಿದ ಹಾಗೆ ಕೂಪ ಮಂಡೂಕದ ಥರ ಇದ್ದು ಇದನ್ನೇ ಪ್ರಪಂಚ ಅಂದುಕೊಂಡಿದ್ದೀನೇನೋ ಅಂತನ್ನಿಸುತ್ತಿದ್ದಂತೆ. ಕೂಪ ಮಂಡೂಕವನ್ನು ಸಾಗರಕ್ಕೆ ಕರೆದುಕೊಂಡು ಬಂದ ಸಾಗರ ಮಂಡೂಕ ತಾನೆ ತಿಮಿಂಗಿಲದ ಬಾಯಿಗೆ ತುತ್ತಾದದ್ದು ನೆನಪಿಗೆ ಬಂದು ಕೂಪ ಮಂಡೂಕವಾಗಿರುವುದೇ ಲೇಸು ಎಂದನಿಸಿ ಸುಮ್ಮನಾದೆ ಅಷ್ಟರಲ್ಲೇ ಇವರು ಬಂದರು. ಅವರಿಗೆ ಹೇಳಿದರೆ ನಗುತ್ತಾ ಅವಳು ಸುಮ್ಮನೆ ಬಡಾಯಿ ಕೊಚ್ಚಿಕೊಂಡಿರ್ತಾಳೆ ಹಾಗೆಲ್ಲ ಹೆಣ್ಣು ಇರಕ್ಕೆ ಆಗಲ್ಲ ಎಂದು ಸುಮ್ಮನಾದರು.
ಆದರೂ ಅವಳು ಹಾಗು ಅವಳ ಮಾತು ಇನ್ನೂ ಮನದಿಂದ ಮರೆಯಾಗಿಲ್ಲ
ಸಂಪದಿಗರೆ ಅವಳ ಈ ಮಾತಿಗೆ ನಿಮ್ಮ ಅಭಿಪ್ರಾಯವೇನು. ನೀವು ಅವಳ ಮಾತಿನ ಪರವೋ ಅಥವ ವಿರೋಧವೋ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆ ಹುಡುಗಿ ಬರೀ ಬಡಾಯಿ ಕೊಚ್ಚಿಕೊಂಡಳೋ ಅಥವಾ ಅವಳ ಬಗ್ಗೆ ಮನಬಿಚ್ಚಿ ಮಾತನಾಡಿದಳೋ ಯಾರು ಬಲ್ಲರು? ಆದರೆ ಇದೇ ರೀತಿ ಆ ಹುಡುಗಿಯ ನಡೆವಳಿಕೆ ಮುಂದುವರೆದರೆ ಖಂಡಿತಾ ಮುಂದೊಂದುದಿನ ಪಶ್ಚಾತ್ತಾಪ ಪಡುತ್ತಾಳೆ, ಹಾಗೆಯೇ ಒಳ್ಳೇ ಗೃಹಿಣಿಯಾಗಲಾರಳು.
ನನ್ನ ಪ್ರಕಾರ ಎಲ್ಲದಕ್ಕೂ ಅತಿ ಮಿತಿ ಇರಬೇಕು. ಅದೇ ನಮಗೆ ಮುಳ್ಳಾಗಬಾರದು.

ಕಮಲಾರವರೇ
ಆ ಹುಡುಗಿಯ ನಿಲುವು ಹಿಡಿಸದಿದ್ದರೂ ಅವಳ ಆಲೋಚನೆವಿಭಿನ್ನ ಅನ್ನಿಸಲಿಲ್ಲವೇ?
ಅವಳ ಆಲೋಚನೆಯಲ್ಲೂ ಸತ್ಯವಿದೆ ಅನ್ನಿಸುತ್ತಿದೆ ನನಗೆ.

ರೂಪರವರೇ,

ಖಂಡಿತಾ ಸತ್ಯ ಇಲ್ಲ. ಅದೊಂದು ಹುಚ್ಚು ಆಲೋಚನೇ ಅನ್ನಿಸಿತು.
ನೀವು ಹೀಗೆ ಯೋಚನೆ ಮಾಡಿ. ಆ ಹುಡುಗಿ ಮದುವೆಯಾದ ಮೇಲೂ ಅದೇ ರೀತಿ ಮುಂದುವರೆದು ಮುಂದೆ ಅವಳಿಗೊಂದು ಮಗುವಾಗಿ ಆ ಮಗುವು ಬೆಳೆದು ಅವಳ ನಡವಳಿಕೆಯೇ ಬಂದರೆ ಆ ಮಗುವಿನ ಗತಿ???

ರೂಪಾ

ಅವರವರ ಭಾವಕ್ಕೆ ಭಕುತಿಗೆ :)

ಆ ಹುಡುಗಿಯ ವಿಚಾರದಲ್ಲಿ ಆ ಕ್ಷಣದ ಹೊಸ ಆಲೋಚನೆಗಳು, ಆ ಕ್ಷಣ ನಿಮ್ಮ ಆದರ್ಶಗಳ ತಳುಕಿಂದಷ್ಟೆ ಈ ವಿಭಿನ್ನತೆ, ಆಕೆಯ ಜೀವನಾನುಭವ ಆಕೆಗೆ, ಆ ಹುಡುಗಿಯಿದ್ದ ಹಾಗೆ ಇತರರೂ ಇರಬಹುದು, ಇಲ್ಲದೆಯೂ ಇರಬಹುದು,

ನಾವು ಜೀವನದ ಹಾದಿ ಸವೆಸುವಾಗ ನಮ್ಮದೇ ಅನುಭವದ, ನಮ್ಮದೇ ಸುತ್ತಮುತ್ತಲಿನ ಜನರ ವಿಶ್ವಾಸದ ಮೇಲೆ ನಮ್ಮ ಜೀವನ ನಡೆಯುತ್ತದೆ, ಆಕೆಯದು ಆ ರೀತಿಯಿರಬಹುದು. ಅದಕ್ಕೆ ಆಕೆಯ ಆಲೋಚನೆಗಳ ಜೊತೆಗೆ ಆಕೆಯ ಜೀವನ ಪರಿಯೂ ವಿಭಿನ್ನ ಅಷ್ಟೆ.

ಅರವಿಂದ್

ರೂಪ

ನಿಮ್ಮದೇ ಕೆಳಗಿನ ಸಾಲುಗಳನ್ನು ಇನ್ನೊಮ್ಮೆ ಬೇರೆಯಾಗೆ ಓದಿಕೊಳ್ಳಿ.

>>ಅದಿರಲಿ ನೀವು ಯಾಕೆ ಇದನ್ನೆಲ್ಲಾ ನನ್ನ ಹತ್ತಿರ ಹೇಳ್ತಾ ಇದ್ದೀರ್‍ ಎಂದು ಕೇಳಿದೆ
"ಯಾಕೆಂದರೆ ನಿಮ್ಮ ಬಗ್ಗೆ ನನಗೇನು ಗೊತ್ತಿಲ್ಲ, ನನ್ನ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ನಿಮಗೆ ಹೇಳಿದರೆ ಯಾವುದೇ ಅಪಾಯ ಇಲ್ಲ ಅಂತ ಗೊತ್ತಿದೆ. ತುಂಬಾ ದಿನದಿಂದ ನನ್ನ ಮನಸಲ್ಲಿ ಇರೋದನ್ನ ಯಾರಲ್ಲಾದರೂ ಹೇಳ್ಬೇಕು ಅಂತನ್ನಿಸ್ತಿತ್ತು. ಈಗ ಮನಸ್ಸು ಹಗುರ ಆಗಿದೆ" ಅಂದಳು.
<<

ಆಕೆಗೆ ಬೇಕಿದ್ದು ನಿಮ್ಮೊಂದಿಗೆ ಅವಳ ಮನದಾಳತ ಮಾತುಗಳನ್ನು ಹಂಚಿಕೊಳ್ಳಲಷ್ಟೆ. ಅಪರಿಚಿತರಲ್ಲಿ ನಮಗೆಂತಾ ಬಿಂಕ ಬಿನ್ನಾಣವೆಂಬುದು ಅವಳ ಸಿದ್ದಾಂತವಿರಬಹುದು. ಅದಕ್ಕೆ ಅವಳ ಧ್ಯೆರ್ಯ, ನಿರ್ಭಿಡತೆ ನಿಮಗೆ ಇಷ್ಟವಾಗಿದೆ.

ಅರವಿಂದ್

ನಂದಕುಮಾರ್ ರವರೇ,

ನಮ್ಮ ಅಪ್ಪ ಅಮ್ಮಂದಿರು ನಮಗೆ ಇಷ್ಟಬಂದ ಹಾಗೆ ಇರಲು ಬಿಟ್ಟಿದ್ದರೆ ನಾವು ಆ ಹುಡುಗಿಯ ತರಹ ಆಲೋಚಿಸುತ್ತಿದ್ದೆವೇನೋ.

ಅಯ್ಯೋ ನಾನು ವಾದ ಮಾಡುತ್ತಿಲ್ಲ ಮೇಡಂ. ನನಗೆ ವಾದ ಮಾಡಲು ಬಾರದು. ನಾ ಹೇಳಿದ್ದು ಕೆಲವರನ್ನು ಹಾಗೆ ಬಿಟ್ಟರೆ ಒಳ್ಳೆಯದು ಅಂತ. ಅವರ ಜೊತೆ ಬೆರೆತರೆ ನಮ್ಮಲ್ಲೂ virus ತುಂಬಬಹುದು :). ಕೊನೆಗೆ ಎಲ್ಲ ಅಧ್ವಾನ :). ಹಿರಿಯರ ಜೊತೆ ಗಲಾಟೆ. ಸುಮ್ಮನೆ ಒಂದು ಕಿವಿಯಿಂದ ಕೇಳಿ ಇನ್ನೊದು ಕಿವಿಯಿಂದ ಬಿಡುವುದೇ ವಾಸಿ. ನಿಮಗೆ ಅವರ ಮಾತುಗಳು ಒಳ್ಳೆಯದು ಎನಿಸಿದರೆ ಸ್ವೀಕರಿಸಿ ಇಲ್ಲ ignore ಮಾಡಿ.

ರೂಪಾ,
"ಇನ್ನು ಮುಂದೆ ಒಟಿ ಹೆಣ್ಣು ಸಿಕ್ಕರೆ ಜಾಗರೂಕರಾಗಿರಿ" ಅಂತ ನಿಮಗೆ ಸಲಹೆ ಕೊಡೋಣ ಅನ್ನಿಸ್ತಿದೆ.
:-)
ನೀವು ನಿಮ್ಮ ತತ್ವಾದರ್ಶಗಳ ಮೇಲೆ ಜೀವಿಸಿ.
ನೂರು ಜನಗಳದ್ದು ನೂರು ಮಾತು.
ಸುಳ್ಳು ಸಾವಿರ ಜನ ಆಡಿದರೂ ಅದು ಸತ್ಯ ಆಗೋಲ್ಲ.
ಸತ್ಯ ಯಾರು ಆಡದಿದ್ದರೂ ಅದು ಸುಳ್ಳಾಗೋಲ್ಲ.
:-)

ಭಾರತೀಯ ಸಂಸ್ಕ್ರುತಿ, ಸಂಸ್ಕಾರ, ಸಂಪ್ರದಾಯಗಳು, ಅವುಗಳೆಷ್ಟು ಅಮೂಲ್ಯ ಹಾಗೂ
ಮಹಿಳೆ ಸಹನಾಶೀಲಳು, ಅವಳಿಂದ ಹೆಚ್ಚು ಸಂಸ್ಕಾರ, ಸಂಪ್ರದಾಯಗಳು ಉಳಿದುಕೊಂಡು ಹೋಗುತ್ತವೆ ಎಂಬ ನಂಬಿಕೆ ಎಲ್ಲ ಮಾಯ !!!!!!!!!?????????

ಅಂಬಿಕಾ
>.ಮಹಿಳೆ ಸಹನಾಶೀಲಳು, ಅವಳಿಂದ ಹೆಚ್ಚು ಸಂಸ್ಕಾರ, ಸಂಪ್ರದಾಯಗಳು ಉಳಿದುಕೊಂಡು ಹೋಗುತ್ತವೆ ಎಂಬ ನಂಬಿಕೆ ಎಲ್ಲ ಮಾಯ !!!!!!!!!?????????
ಕಾದು ನೋಡಬೇಕು . ಅಂದು ಒಬ್ಬಳು ಮುಂದೆ ಈ ರೀತಿಯವರನ್ನು ನೋಡಬೇಕಾಗಿ ಬರಬಹುದು.

ರೂಪಕ್ಕ ,

ಏನು ಹೇಳಬೇಕೊ ನನ್ಗೆ ಗೊತ್ತಾಗುತ್ತಿಲ್ಲ ಆದರೆ ನನ್ಗೆ ಈ ಸಮಯದಲ್ಲಿ ಆಣ್ಣಾವ್ರು ಹಾಡು ಜ್ಣಾಪಕಕ್ಕೆ ಬಂತು " ಏನೆಂದೂ ನಾ ಹೇಳಲಿ ಮಾನವನ ಆಸೆಗೆ ಕೊನೆಯೆಲ್ಲಿ....."
ಅವಳ ಬದುಕು ಅವಳು ಹೀಗೆ ಇರಬೇಕು ಅಂತ ನಿರ್ದಾರಿಸಿದ್ದಾಳೆ ಮುಂದೆ ಏನಾದರೂ ತೊಂದರೆ ಬಂದರೆ ಅವಳೆ ಅನುಭವಿಸುತ್ತಾಳೆ ಇದರ ಮದ್ಯ ಯಾರೂ ಏನೆ ಹೇಳಿದರೂ ಅದು ಗೊರ್ಕಲ್ಲ ಮ್ಯಾಲೆ ಮಳೆ ಬಿದ್ದಂತೆ ಅಷ್ಟೆ.

--ಗೌಡ್ರು

ರೂಪ ಅವರೆ,

ಆ ಹೆಣ್ಣು ಮಗಳ ಮಾತುಗಳು "Rebel" ಮಾತುಗಳೆಂದು ನನ್ನ ಅನಿಸಿಕೆ. ಆಕೆಯನ್ನು ಎರಡು ರೀತಿಗಳಲ್ಲಿ ನೋಡಬಹುದು (ನನ್ನ ಪ್ರಕಾರ :-))
೧. ನಿಮ್ಮ ತಲೆ ಕೆಡಿಸಲೆಂದೇ ಆ ಮಾತುಗಳ ಮಂಡಿಯನ್ನು ತಂದಿರುವ ಒಬ್ಬ Agent (ಅದು ನಿಜವಾದಲ್ಲಿ, ನೀವು, ನಿಮ್ಮಂತಹ ಮಹಿಳೆಯರು ಹುಷಾರಾಗಿರಬೇಕು)
೨. ತನ್ನ ಜೀವನದಲ್ಲಿ (ಮನೆ, ನೆಂಟರಿಷ್ಟರು, ... ಇತ್ಯಾದಿಗಳಿಂದ) ಬಹಳಷ್ಟು ನೊಂದು ಈರೀತಿಯಾಗಿ ವರ್ತಿಸುವ ನಿರ್ಧಾರಕ್ಕೆ ಬಂದಾಕೆ (ಅದು ನಿಜವಾದಲ್ಲಿ, ಆಕೆಗೆ ತಿಳಿದವರ ಸಹನೆಯ ಸಲಹೆ ಅಗತ್ಯ)

ಈ ಮೇಲಿನ ಎರಡೂ ಪರಿಸ್ಥಿತಿಗಳಲ್ಲೂ ಆಕೆಯದ್ದು, ನಿಧಾನಿಸಿ ಯೋಚಿಸಿದ ಮಾತುಗಳಲ್ಲ ಬದಲಿಗೆ ಸುಮ್ಮನೇ ಸಮಾಜವನ್ನೇ ಧಿಕ್ಕರಿಸುವ ಮನೋಭಾವವಷ್ಟೆ. ಆದರೆ, ಪಕ್ಕದಲ್ಲಿ ಕೂತು ಕೇಳುವಾಗ ಬಹಳಷ್ಟು ಮಂದಿಗೆ ಅವು "ಕುತೂಹಲ ಕೆರಳಿಸುವ" ಮಾತುಗಳಾಗಿರುತ್ತವೆ.

ಸ್ವತಂತ್ರ್ಯ ಆಲೋಚನೆ ತಪ್ಪಲ್ಲ ಆದರೆ, ಸ್ವೇಚ್ಛಾಚಾರದ ಮಾತುಗಳು ಸರಿಯಾಗವು, ಅಲ್ಲವೆ!!

ನನಗೇನೋ ಆಕೆಯ ವಾದಸರಣಿಯಲ್ಲಿ ಸ್ವಲ್ಪ ಮಟ್ಟಿಗೆ ಸತ್ಯವಿದೆ ಅನ್ನಿಸಿತು. ಅವಳು ಹೇಳುತ್ತಿರುವುದಾದರೂ ಏನು? ಗಂಡಿಗೆ ಬೇರೆ, ಹೆಣ್ಣಿಗೆ ಬೇರೆ ಸಂಸ್ಕೃತಿಯೇ ಎಂದು. ಹೌದು, ಯಾಕೆ ಬೇರೆ ಬೇರೆ ಇರಬೇಕು? ಅವಳೆಲ್ಲೂ ತನ್ನ ಗಂಡನಿಗೆ ಮೋಸ ಮಾಡುವೆನೆಂದು ಹೇಳಲಿಲ್ಲ. ತನ್ನ ಇತಿಹಾಸವನ್ನು ಅವನು ಒಪ್ಪುವುದಾದರೆ ಮಾತ್ರ ಮದುವೆಯಾಗುವೆಯೆಂದು ಇಲ್ಲದಿದ್ದರೆ ಅವನಿಷ್ಟವೆಂದು ಹೇಳಿದಳು. ಆದ್ರೆ ಅವಳು generalise ಮಾಡಿ ಹೇಳಿದ ರೀತಿ ಸರಿಯಲ್ಲವಷ್ಟೆ. ಬರೀ ಹೆಣ್ಣೇ ಸಂಸ್ಕೃತಿಯನ್ನು ಕಾಪಾಡಲು ಸಾಧ್ಯವಿಲ್ಲ. ಹಾಗೆಯೇ ಬರೀ ಗಂಡು ಕೂಡಾ. ಇಬ್ಬರದು ಸರಿಸಮಾನ ಪಾಲು ಇದೆ.

ಇನ್ನೊಂದು ವಿಷಯವನ್ನು ನಿಮ್ಮಿಬ್ಬರ ಮಾತಿನಲ್ಲಿ ನಾನು ಗಮನಿಸಿದ್ದೇನೆಂದರೆ, ಅವಳು ಇನ್ನು ಗೊಂದಲದಲ್ಲಿದ್ದಾಳೆ. ಆದ್ದರಿಂದಲೇ ನೀವು ಅಪರಿಚಿತರಾದ್ದರಿಂದ ನಿಮ್ಮ ಹತ್ತಿರ ಹೇಳಿಕೊಂಡದ್ದು ಎಂದು ಒಪ್ಪಿಕೊಂಡಿದ್ದಾಳೆ. ಅಂದರೆ ನೀವು ಪರಿಚಿತರಾಗಿದ್ದರೆ ಅವಳು ನಿಮ್ಮ ಬಳಿ ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಅನ್ನಿಸುತ್ತೆ. ಹಾಗೂ ಪರಿಚಿತರು ಯಾರೂ ಈ ವಾದವನ್ನು ಒಪ್ಪುವುದಿಲ್ಲ ಎನ್ನುವ ಸತ್ಯದ ಅರಿವೂ ಇದೆ ಅನ್ನಿಸುವುದಿಲ್ಲವೇ.

ನಿಮ್ಮ ವಾದಸರಣಿಯನ್ನು ಮೆಚ್ಚಿದೆ ಇಂಚರ

>>ಅವಳು ಇನ್ನು ಗೊಂದಲದಲ್ಲಿದ್ದಾಳೆ. ಆದ್ದರಿಂದಲೇ ನೀವು ಅಪರಿಚಿತರಾದ್ದರಿಂದ ನಿಮ್ಮ ಹತ್ತಿರ ಹೇಳಿಕೊಂಡದ್ದು ಎಂದು ಒಪ್ಪಿಕೊಂಡಿದ್ದಾಳೆ. ಅಂದರೆ ನೀವು ಪರಿಚಿತರಾಗಿದ್ದರೆ ಅವಳು ನಿಮ್ಮ ಬಳಿ ಹೀಗೆಲ್ಲಾ ಮಾತನಾಡುತ್ತಿರಲಿಲ್ಲ ಅನ್ನಿಸುತ್ತೆ.

ಅದು ಸತ್ಯವಾದ ಮಾತು ಇಂಚರ

ಭಾರತೀಯ ಮಹಿಳೆಯ ಬಗ್ಗೆ preconceived notion ಇಲ್ಲದೆ ಯೋಚನೆ ಮಾಡಿದರೆ ಆಕೆಯ ವಾದದಲ್ಲಿ ಸತ್ಯ ಇದೆ.

ರೂಪ ರವರೇ,
ಯಾರೋ ನಿಮಗೆ ಸುಮ್ನೆ ಟೈಮ್ ಪಾಸ್ ಗೋಸ್ಕರ ವಾಗಿ ಹೇಳಿದ ಕಥೆಯೋ ಅಥಾವ ತನ್ನ ಮನದ ಆಸೆಯನ್ನು ನಿಮ್ಮ ಬಳಿ ಹೇಳಿಕೊಂಡಳೋ ಗೋತ್ತಿಲ್ಲ..ಈ ವಿಷಯವನ್ನು ಸಮಾಜದ ದೃಷ್ಟಿಯಿಂದ ನೋಡಿದರೆ ಹಲವು ಅಭಿಪ್ರಾಯಗಳು ಬರುತ್ತವೆ ಕೆಲವರಿಗೆ ಇಷ್ಟವಾಗಬಹುದು ಮತ್ತೆ ಕೆಲವರು ಅದಕ್ಕೆ ತದ್ವಿರುದ್ದವಾಗಿಯು ಸಹ ಇರಬಹುದು.ಆದರೆ ಯಾರಿಗೊ ಸಹ ನೋವಾಗಬಾರದು.ಮತ್ತೆ ಅದರಿಂದ ಸಮಾಜಕ್ಕೆ ದಕ್ಕೆಯಾಗದಿರಲಿ ಎಂಬುದಷ್ಟೆ ನನ್ನ ಅಭಿಪ್ರಾಯ.....

ಖಂಡಿತ ಇಲ್ಲ ರೂಪರವರೇ...

ಸಮಾಜವು ಸಹ ಒಂದು ಅವಿಭಾಜ್ಯ ಅಂಗ. ಆದರೆ ನಮ್ಮ ಯಾವುದೇ ಕೆಲಸ ಕಾರ್ಯಗಳಿಂದ ಸಹ ಸಮಾಜಕ್ಕೆ ಒಳಿತಾಗ ಬೇಕೆ ವಿನಹ ಅದಕ್ಕೆ ಕೆಡಕಾಗಬಾರದು.ಏಕೆಂದರೆ ನಮ್ಮ ಅಕ್ಕ ಪಕ್ಕದಲ್ಲಿ ಎಲ್ಲ ರೀತಿಯ ಜನರಿದ್ದಾರೆ.ಅಲ್ಲದೆ ಸಾವಿರಾರು ಕನಸುಗಳನು ಹೋತ್ತು ಎಷ್ಟೋ ಜನ ತಂದೆ ತಾಯಂದಿರು ತಮ್ಮ ಮಕ್ಕಳನು ಸಲಹುತಿದ್ದಾರೆ. ಆದರೆ ನಮ್ಮ ಆಸೆಗಳಿಗೋಸ್ಕರ ತಂದೆ ತಾಯಿಗಳು ಕಟ್ಟಿಕೂಂದಿರುವ ಕನಸುಗಳನು ಬರೀ ಗಾಳಿಗೋಪುರ ಮಾಡುವುದು ಸರಿಯಲ್ಲ ಎಂಬುದು ನನ್ನ ಭಾವನೆ.ಹೆತ್ತವರಿಗಿಂತ ನಮ್ಮ ಆಸೆಗಳು ದೊಡ್ಡದಲ್ಲ.......... ನೀವೆಂತೀರಿ.....?

ರೂಪ,
ಎಂದಿನಂತೆ ನಿಮ್ಮ ಚಿಂತನೆ ಇಷ್ಟವಾಯಿತು.ಇದುವರೆಗಿನ ಎಲ್ಲಾ ಪ್ರತಿಕ್ರಿಯೆಗಳ ಮೇಲೂ ಕಣ್ಣಾಡಿಸಿದೆ. ಯಾರೊಬ್ಬರೂ ಆಕೆಗೆ ಪೂರ್ಣ ಬೆಂಬಲ ಕೊಡಲಿಲ್ಲ. ಇದೇ ನಮ್ಮ ಸಂಸ್ಕೃತಿಯ ಹಿರಿಮೆ.ಇದು ಭಾರತ. ಹೊರದೇಶಗಳಲ್ಲಾದರೆ ಸಾರ್ವಜನಿಕವಾಗಿ ಯಾವುದೋ ಗಂಡಸಿಗೆ ಯಾರೋ ಹೆಂಗಸು ಚುಂಬಿಸುವುದನ್ನು ನೋಡುತ್ತೇವೆ.ನಮ್ಮ ದೇಶದಲ್ಲಿ ಎಲ್ಲಕ್ಕೂ ಒಂದು ರೀತಿ-ನೀತಿ ಇದೆ. ಶೀಲ ಎಂಬುದು ಕೇವಲ ಹೆಣ್ಣಿಗಲ್ಲ. ಗಂಡಿಗೂ ಇದೆ.
ಈ ರೀತಿಯ ಅತಿರೇಕವಾಗಲು ಕಾರಣ ಸಕಾಲದಲ್ಲಿ ಮದುವೆಯಾಗದಿರುವುದು. ಗಂಡು ತನ್ನ ಇಪ್ಪತ್ತೈದನೆಯ ವಯಸ್ಸಿನವರಗೆ, ಹೆಣ್ಣು ತನ್ನ ಇಪ್ಪತ್ತನೆಯ ವಯಸ್ಸಿನವರಗೆ ತಮ್ಮ ವಿದ್ಯಾಭ್ಯಾಸ ಹಾಗೂ ಮುಂದಿನ ಯೋಜನೆಗಳಿಗೆ ಪೂರ್ಣ ಗಮನ ಕೊಟ್ಟು ಆನಂತರ ಗಂಡು ತನ್ನ ೨೩ ರಿಂದ ೨೬-೨೭ ರೊಳಗೆ ಹೆಣ್ಣು ತನ್ನ ೨೦ ರಿಂದ ೨೨-೨೩ ರೊಳಗೆ ಮದುವೆಯಾದರೆ ಬದುಕು ಹಸನು.ಅದಿಲ್ಲದಿದ್ದಾಗ, ದುಡುಕಿ ಆತುರಪಟ್ಟರೆ ಮುಂದಿನ ಬದುಕೆಲ್ಲಾ ಭವಣೆಯೇ. ಯಾವ ಚರ್ಚೆಯಿಂದಲೂ ವೈಯಕ್ತಿಕ ನೆಮ್ಮದಿ ಸಿಗುವುದಿಲ್ಲ. ಕಟ್ಟುಪಾಡುಗಳೆಲ್ಲವೂ ವೈಯಕ್ತಿಕ ಸಮೃದ್ಧ ಜೀವನಕ್ಕಾಗಿಯೇ ಹೊರತು ಅನ್ಯಥಾ ಅಲ್ಲ.

ಶ್ರೀಧರ್ ಅವರೇ, ನಮಸ್ಕಾರ.

ನಿಮ್ಮ ಪ್ರತಿಕ್ರಿಯೆ ಓದಿದಾಗ ಮೂಡಿಬಂದ ನನ್ನ ಅನಿಸಿಕೆಗಳು.
>>ಈ ರೀತಿಯ ಅತಿರೇಕವಾಗಲು ಕಾರಣ ಸಕಾಲದಲ್ಲಿ ಮದುವೆಯಾಗದಿರುವುದು.

ಇದಕ್ಕಿಂತಲೂ ಮಿಗಿಲಾಗಿ ವಿವೇಕದ ಕೊರತೆ ಅಥವಾ ಸದ್ವಿವೇವಕದ ಕೊರತೆ ಅನ್ನಬಹುದು.
ಸಕಾಲದಲ್ಲಿ ಮದುವೆ ಆಗುವುದರಿಂದ ಅಥವಾ ಆಗದಿರುವುದರಿಂದ ಹೆಚ್ಚಿನ ಬದಲಾವಣೆ ಆಗದೆಂದು ನನ್ನೆಣಿಕೆ.
ಕಾಮ ಎನ್ನುವುದು ಖಾಯಿಲೆಯಂತೆ ಪೀಡಿಸಿದಾಗ, ಒಂದು ನ್ಯೂನತೆಯಾಗಿ ಕಾಡಿದಾಗ, ವ್ಯಕ್ತಿ ಮದುವೆ ಆಗಿದ್ದರೂ, ಆಗದೇ ಇದ್ದರೂ ಅದಕ್ಕೆ ಬಲಿಯಾಗೇ ಆಗುತ್ತಾನೆ. ಎಲ್ಲಕ್ಕೂ ಮಿಗಿಲಾಗಿ ಬೇಕಾಗಿರುವುದು ಸನ್ಮಾರ್ಗದರ್ಶನ, ಸದ್ವಿವೇಕ ಮತ್ತು ಸಂಸ್ಕೃತಿಯ ಅರಿವು.
ಮನುಷ್ಯ, ತಾನು ಯಾರು (ಯಾರ ಮಗ, ಯಾವ ಕುಟುಂಬದವನು) ಎಂಬ ಅರಿವನ್ನು ಸದಾ ಜಾಗೃತವಾಗಿರಿಸಿಕೊಂಡಿದ್ದರೆ, ಒಳ್ಳೆಯದು, ಅಷ್ಟೆ.
ಬೇರಾವ ಕಡಿವಾಣದ ಅಗತ್ಯವೂ ಇಲ್ಲ.

<ಎಲ್ಲಕ್ಕೂ ಮಿಗಿಲಾಗಿ ಬೇಕಾಗಿರುವುದು ಸನ್ಮಾರ್ಗದರ್ಶನ, ಸದ್ವಿವೇಕ ಮತ್ತು ಸಂಸ್ಕೃತಿಯ ಅರಿವು.>
ಎರಡುಮಾತಿಲ್ಲ ಸುರೇಶ್.

"ಬದುಕು ಕಟ್ಟುಪಾಡುಗಳಿಂದ ಮುಕ್ತವಾಗಿರಬೇಕು.

ಮನುಶ್ಯನಿಗೆ(ಹೆಣ್ಣಾಗಲಿ-ಗಂಡಾಗಲಿ) ಯಾರ, ಯಾವ ಭೀಡೆಯೂ ಇರಬಾರದು.

ಬದುಕನ್ನು ತನ್ನಿಚ್ಛೆ ಬಂದಂತೆ ಆಸ್ವಾದಿಸುವ, ಅನುಭವಿಸುವ, ಹೊಸತನ್ನ ಪಡೆಯುವ/ಹುಡುಕುವ
ಮೂಲಕ ಸಿಗುವ ಅಚ್ಚರಿಯನ್ನು ಸವಿಯುವಂತಿರಬೇಕು. ( ಪೂರ್ವಾಗ್ರಹವಿಲ್ಲದೆ).

ಅದೇ ಸ್ವಾತಂತ್ರ್ಯ. ಇದು ಸ್ವಾತಂತ್ರ್ಯ ಮೀರಿದ ಸ್ವೇಚ್ಚಾಚಾರ ಅನ್ನೋದು ಢೋಂಗಿತನ."

ಅಂತ ಅವಳಿಗೆ ಅನ್ನಿಸಿರಬೇಕು. ನಾನೂ ಅದನ್ನೇ ಯೋಚಿಸುತ್ತಿದ್ದೇನೆ....

ಅವಳು ಹೇಳಿದ್ದು ನಿಜ. ಆ ರೀತಿ ಭಾರತೀಯ ಕನ್ಯಾಮಣಿಗಳನ್ನು ದಿನಾ ನೋಡುವ ನಾನು ಅವಳ ನಿಲುವು ತಪ್ಪು ಏಂದರೆ ಅರ್ಥವಿಲ್ಲದಂತಾಗುತ್ತದೆ.
ಆವಳು ಎಲ್ಲಿಯೂ ಅದನ್ನು ತನ್ನ ಗಂಡನಿಂದ ಮುಚ್ಚಿಡುತ್ತೇನೆಂದು ಹೇಳಿಲ್ಲ. "ಆವಳ ನಿಲುವು ಅವಳಿಗೆ ಸರಿ."

ಕೈಲಿರುವ ೫ ಬೆರಳುಗಳಲ್ಲಿಯೇ ಸಮಾನತೆಯಿಲ್ಲ, ಇನ್ನು ಸಮಾಜದಲ್ಲಿರುವ ಎಲ್ಲರು ಒಂದೇ ರೀತಿ ಇರಬೇಕೆಂದರೆ ಕಷ್ಟ.

ನೀವು ಇನ್ನು ಸ್ವಲ್ಪ ಅವಳ ಜೊತೆ ಮಾತಾಡಿದ್ದರೆ ಮನದಾಳವೆಂದು ಬರೆಯಬಹುದಿತ್ತೇನೋ!!! ... ನೀವು ಬರೆದಿರುವುದು ಬರಿ ಅವಳ ಮನ ಎಂದು ನನ್ನ ಅನಿಸಿಕೆ.

ಒಂದು ಪ್ರತಿಕ್ರಿಯೆಯಲ್ಲಿ, ಇದು "ಗಂಭೀರ ವಿಷಯವೇ" ಎನ್ನು ವ ಸಂಶಯ ಬಂದಿದೆ. ಇದು ಖಂಡಿತವಾಗಿಯೂ ಗಂಭೀರವಾದ, ಚರ್ಚಾಸ್ಪದವಾದ ವಿಷಯವೆಂದು ನನ್ನ ಅಭಿಪ್ರಾಯ. ಈ ವಿಷಯದ ಆಳವೆಷ್ಟೆಂದರೆ, ಇತಿಹಾಸದ, ಧರ್ಮಗ್ರಂಥಗಳ ಪುಟಗಳನ್ನೂ ತಿರುವಿಹಾಕಬೇಕಾದೀತು! ಹಾಗೊಮ್ಮೆ ಮಾಡಿದರೂ, ಈ ವಿಷಯದ ಬಗ್ಗೆ ಸ್ಪಷ್ಟವಾದ ನಿಲುವು ತಾಳುವುದು ಸುಲಭಸಾಧ್ಯವಲ್ಲ, ಅಲ್ಲವೇ!

Desmond Morris ಅವರ Human Sexes ಅನ್ನುವ documentary ಸರಣಿಯನ್ನು ವೀಕ್ಷಿಸಿದರೆ, ಈ ಚರ್ಚೆಯ ವಿಷಯವಾಗಿ, ಹಲವು ಮಾಹಿತಿಗಳು ದೊರೆಯುತ್ತವೆ (though it may not be directly linked to the subject). ನಿಮಗೆ ಆ ಸರಣಿಯ videos ಸಿಕ್ಕರೆ ಖಂಡಿತವಾಗಿ ವೀಕ್ಷಿಸಿ.

ಮೇಡಂ ನಿಮಗೆ ಆಕೆಯ ಯೋಚನೆಗಳಲ್ಲಿ ಸತ್ವವಿದೆ ಅನಿಸಿದೆ. ಅದರಲ್ಲಿ ತಪ್ಪಿಲ್ಲ. ತನ್ನ ಜೀವನವನ್ನು ತನಗಿಷ್ಟ ಬಂದ ರೀತಿಯಲ್ಲಿ ಬದುಕುವ ಹಕ್ಕು ನಿಮ್ಮ ಲೇಖನದ ಹುಡುಗಿಗೆ ಇದೆ. ಆದರೆ ತಾನು ಬದುಕುವ ರೀತಿಯೇ ಎಲ್ಲ ಹೆಣ್ಣುಗಳು ಅನುಕರಿಸಬೇಕಾದ ರೀತಿ, ಸಮಾನತೆಯ ಅಳತೆಗೋಲು ಎಂದುಕೊಳ್ಳುವುದು ಅವಳ ಮೂರ್ಖತನವಲ್ಲದೇ ಮತ್ತೇನು ಇಲ್ಲ. ಹೆಣ್ಣು ಒಬ್ಬನಿಗಿಂತ ಹೆಚ್ಚಿನ ಗಂಡುಗಳ ಸಂಪರ್ಕ ಹೊಂದುವುದು ಅಥವ ಗಂಡು ಮಾಡುವುದೆಲ್ಲ ಅನುಕರಣೆ ಮಾಡುವುದು ಸಮಾನತೆಯ ಸಾಧನೆಯಲ್ಲ. ಇಷ್ಟಕ್ಕು ಸಮಾನತೆ ಎಂಬುದರ ಅವಶ್ಯಕತೆಯೂ ಇಲ್ಲ, ಗಂಡಿಗೆ ಸಮಾಜದಲ್ಲಿ ಬದುಕಲು ಹೇಗೆ ಹಕ್ಕಿದಿಯೋ ಹೆಣ್ಣಿಗೂ ಸಮಾಜವು ಅಷ್ಟೇ ಹಕ್ಕು ಅಧಿಕಾರಗಳನ್ನು ಕೊಟ್ಟಿದೆ, ಅದನ್ನು ಧಿಕ್ಕರಿಸುವ ಅವಕಾಶವೂ ಹೆಣ್ಣಿಗಿದೆ. ನಿಯಮಗಳನ್ನು ಉಲ್ಲಂಘಿಸುವ ಗಂಡನ್ನು ಸಮಾಜ ತಿರಸ್ಕರಿಸುವಂತೆ ಹೆಣ್ಣನ್ನೂ ತಿರಸ್ಕರಿಸುವ ಹಕ್ಕು ಸಮಾಜಕ್ಕಿದೆ.

Sorry i don't have the software to write in Kannada...

You need to think like an animal (living being..). Every animal has to reproduce, and if the sex is not enjoyable then there is no driving thing about reproduction. Though we being the most rational, civilized animal we have follow some patterns of rules(which is being evolved not made) and every body do explore thing.... In such a dynamic formal(but not strict) system, disturbance and strive for equilibrium is an inherent property of the system. The thoughts of her may be a disturbance or strive for equilibrium... To analyze such system you need to have more variables... not just our society(in this context what you call as true Indian culture) , you need to look at higher level, make abstraction, generalize.. but which is difficult to do for normal human brain...

I hope you get the concept of what i'm trying to tell... To evolve for better the system, there should be two poles co-existing.. and striving for equilibrium... So live the life the way you think (... and the thought is also altered by your connections too, its collective)

Rakshith

ಆ ಹೆಣ್ಣು ಈ ದೇಶದ ಸಂಸ್ಕ್ರತಿಯನ್ನು ಅರಿತವಳಾಗಿದ್ದರೆ ಈ ರೀತಿ ಮಾತು ಆಡುತ್ತಿರಲಿಲ್ಲ
ಹೆಣ್ಣಿಗೆ ತನ್ನದೇ ಆದ ಒಂದು ಮಹತ್ವ ಹೊಂದಿದ್ದಾಳೆ ಗಂಡಿನ ಸರಿಸಮಾನಳಾಗಿ ಬದುಕುವ ಹಕ್ಕಿದೆ ಹೊರತು ತನ್ನ ಸಂಸ್ಕ್ರತಿಗೆ ಧಕ್ಕೆ ತಂದು ಬದುಕುವ ಹಕ್ಕನ್ನು ಯಾವ ಹೆಣ್ಣು ಬಯಸುವದಿಲ್ಲ
ಆ ವಿಚಾರವನ್ನಿ ವಿಮರ್ಶಿಸಿದಾಗ ಆ ಹೆಣ್ಣು ತನ್ನ ಜೀವನವನ್ನು‌ ವಿಷಯದಲ್ಲಿ ಹಾಳು ಮಾಡಿಕೊಂಡಿದ್ದಾಳೆ ಎಂಬದು ನನ್ನ ಸಂಶಯವಾಗಿದೆ