ಗ್ರೆಗೊರಿ ಪೆಕ್ : ಒಂದು ಸ್ಮರಣೆ.
ಗ್ರೆಗೊರಿ ಪೆಕ್ : ಒಂದು ಸ್ಮರಣೆ. 'ಗನ್ಸ್ ಆಫ್ ನವರೊನ್', 'ಮೆಕೆನ್ನಾಸ್ ಗೋಲ್ಡ್,' ನಂತಹ ಪ್ರಸಿದ್ದ ಚಿತ್ರಗಳಲ್ಲಿ ಭಿನಯಿಸಿದ 'ದೀಮಂತ' ನಟ,ಬದುಕಿದ್ದಿದ್ದರೆ, ಈ ದಿನ ಅವನಿಗೆ 90 ಅರ್ಷ ತುಂಬುತ್ತಿತ್ತು ! 'ಪೆಕ್' ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯ,ದಲ್ಲಿ. ಮುಂದೆ ಅವನು ಥಿಯೇಟರ್ ಗಳಲ್ಲಿ ದುಡಿದು, ನಂತರ ಹಾಲಿವುಡ್ ಸಿನಿಮಾ ರಂಗವನ್ನು ಪ್ರವೇಶಿಸುತ್ತಾನೆ. 5 ಬಾರಿ 'ಆಸ್ಕರ್ ಪ್ರಶಸ್ತಿ'ಗೆ ನೇಮಕಾತಿಯಾಗಿದ್ದು, 1962 ರಲ್ಲಿ ರಿಲೀಸ್ ಆದ 'ಆಟಿಕಸ್ ಫಿಂಚ್' ಎಂಬ ಚಿತ್ರದಲ್ಲಿ ಶ್ರೇಷ್ಟ ಅಭಿನಯ ಮಾಡಿದ್ದಕ್ಕೆ ಪುರಸ್ಕ್ರುತನಾದನು. ಪ್ರಸಿದ್ಧ ಲೇಖಕ, 'ಹಾರ್ಪ್ ಲಿ' ಬರೆದ 'ಮಾಕಿಂಗ್ ಬರ್ಡ್' ಎಂಬ ಕಾದಂಬರಿಯ ಆಧಾರದಮೇಲೆ ಈ ಚಿತ್ರವನ್ನು ತಯಾರಿಸಲಾಗಿತ್ತು. ಸಭ್ಯತೆ, ಮಾನವೀಯತೆ, ದಯಾಪರತೆಗಳ ಸಾಕಾರ ಮೂರ್ತಿಯಂತಿದ್ದ, ಫಿಂಚ್, 'ಘೆಟ್ಟೊ' ಗಳಲ್ಲಿ ವಾಸಮಾಡಿಕೊಂಡು ಅತ್ಯಾಚಾರದಲ್ಲೇ ಜೀವನ ನಿರ್ವಹಿಸುತ್ತಿದ್ದ, ಕರಿಯ ಹುಡುಗರ 'ಡಿಫೆನ್ಸ್ ಲಾಯರ್' ಆಗಿ, ಕೆಲಸ ಮಾಡುತ್ತಾನೆ.ಟಾಮ್ ರಾಬಿನ್ಸನ್, ಎಂಬ ಹುಡುಗ 'ಒಂದು ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ' ಮೊಕದ್ದಮ್ಮೆಯನ್ನೂ ಅತ್ಯಂತ ಮಾನವೀನ ರೀತಿಯಲ್ಲಿ ನಡೆಸುತ್ತಾನೆ. ಕರಿಯರ ಸಂಕಶ್ಟಗಳನ್ನು ಶಾಂತಿ ಯಿಂದ, ಉದ್ವಿಗ್ನತೆ ಇಲ್ಲದೆ ಅವರ ಜೀವನದಲ್ಲಿ ಬೆಳಕನ್ನು ತರಲು ಪ್ರಯತ್ನಿಸುತ್ತಾನೆ.ಬರ್ಬರ ಹತ್ಯೆಗಳನ್ನು ಲೀಲಜಾಲವಾಗಿ ಆಡುತ್ತಿದ್ದ,ಅವರನ್ನು ತಮ್ಮ ಮುಗ್ದ ಬಾಲ್ಯದ ಸುಂದರ ಕ್ಷಣಗಳಿಂದ ವಂಚಿತರಾಗದಂತೆ ಕಾಯುವ ಅವನ ಪ್ರಯತ್ನ ಅನನ್ಯ. ಟಾಮ್ ರಾಬಿನ್ಸನ್ ಹಾಗು 'ಬೂ ರಾಡ್ಲೆ,' ಉತ್ತಮ ರಾಗಲು ಪ್ರಯತ್ನಿಸುತ್ತಾರೆ.ಅಂತಹ 'ಆಟಿಕಸ್ ಫಿಂಚ್' ಪಾತ್ರ ಮಾಡಿ,ಗ್ರೆಗೊರಿ ಪೆಕ್, ಅಮೆರಿಕನ್ನರ ಹ್ರುದಯವನ್ನು ಗೆದ್ದರು.ಇದನ್ನು ಮೆಚ್ಚಿ ವೊಟ್ ಮಾಡಿರುವರ ಸಂಖ್ಯೆ ಅಪಾರ ! ಎ.ಎಫ್.ಐ, ಅವರು, 'ಎಂದೆಂದಿಗೂ ಮರೆಯದ ಮೇರು ನಟ'ಎಂದು ಗೌರವಿಸಿದ್ದಾರೆ. 100 ವರ್ಷಗಳ 100 ಅಸಾಧಾರಣ ಮೇರುವ್ಯಕ್ತಿಗಳ, ನಾಯಕರು ಹಾಗು, ಖಳನಾಯಕರ ಪಟ್ಟಿಯಲ್ಲಿ, 'ಗ್ರೆಗೊರಿ ಪೆಕ್,' ಅವರ ಹೆಸರು ದಾಖಲಾಗಿದೆ !
courtesy : 'Reel Classics'
ವೆಂ.