ಬದುಕು ನನಗೇನು ಕಲಿಸಿದೆ ?

ಬದುಕು ನನಗೇನು ಕಲಿಸಿದೆ ?

ಬರಹ

ಬದುಕು ನನಗೇನು ಕಲಿಸಿದೆ ?

ಡಾ. ಎಚ್.ಎನ್. ಹೀಗೆ ಹೇಳುತ್ತಾರೆ.

ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶ್ಯ ವಿದೆಯೇ, ಸಾವು ಬದುಕಿನ ಕೊನೆಯೇ ? ಮರಣಾ ನಂತರ ವ್ಯಕ್ತಿತ್ವ ಉಳಿಯಬಲ್ಲುದೇ ? ಎನ್ನುವ ತತ್ವ ಶಾಸ್ತ್ರದ ಸಮಸ್ಯೆಗಳು ಕೇವಲ ನನ್ನ ಇಳಿಗಾಲದ ಯೋಚನೆಗಳಲ್ಲ.
"ನಾನು ನಾಸ್ತಿಕನಾದರೂ ಅಂಧ ಮೂರ್ತಿಬಂಜಕನಲ್ಲ. ಮಾನವ ಕೆಂದ್ರಿತ ಧರ್ಮಗಳಲ್ಲಿ ನನಗೆ ನಂಬಿಕೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು-ಅಮಾನವೀಯ , ಅಪ್ರಮಾಣಿಕ ಆತ್ಮ ಕೆಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಿಗಿಂತ ಉತ್ತಮನೆಂದು ಪರಿಗಣಿಸುತ್ತೇನೆ. ವಿಜ್ಞಾನದಲ್ಲಿ ನನಗೆ ಸಧೃಢವಾದ ನಂಬಿಕೆಯಿದೆ.
ಏಕಕೋಷಜೀವ ಅಮೀಬದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಜ್ಞ್ಮೂಢ ಗೊಳಿಸುವಂತಹದ್ದು. ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆ ಗೊಳಿಸುತ್ತಾದರೂ ಈ ಎಲ್ಲಾ ವಿವಾದಗಳ, ನಿಗೂಢಗಳ, ಒಗಟುಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಶ್ಟಿ ಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆ ಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದೇ ಕಾಲಾನು ಕಾಲದಿಂದ ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಕೆಡಕುಗಳಿಗೆ ಪರಿಹಾರ ಎಂಬುವುದು ನನ್ನ ಬಲವಾದ ಅಭಿಪ್ರಾಯ."
ಡಾ. ಎಚ್. ನರಸಿಂಹಯ್ಯನವರು ನಮಗೆಲ್ಲಾ 'ಎಚ್.ಎನ್' ಎಂದೇ ಚಿರಪರಿಚಿತರು ! ಅವರ ಬದುಕೇ ಒಂದು ಪವಾಡ ! ಪ್ರತಿಭೆ, ಪರಿಶ್ರಮ, ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ ಶಿಲ್ಪ ! ಈಗ ಒಂದು ವರ್ಷದ ಹಿಂದೆ ಅವರು ನಮ್ಮನ್ನು ಅಗಲಿದರು !
ನುಡಿದಂತೆ ನಡೆದ ಅನೇಕ ಶ್ರೇಶ್ಟ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ನಿಸ್ವಾರ್ಥ ದುಡಿಮೆಯಿಂದ ನಾಡಿಗೇ ಮಾದರಿಯಾಗಿರುವ ಶಿಕ್ಶಣ ಸಂಸ್ಥೆಗಳನ್ನು ಕಟ್ಟಿ ಬೆಳಸಿದ್ದಾರೆ. ಅಂತಹ ಪುರುಷೋತ್ತಮರಿಗೇ ನಮ್ಮ ನಮನಗಳು !