ಸಿಯಾಟಲ್ ನಾಗೆ ಅಡ್ಡಾಡಿ ಬರೋಣು ;ಹಾ, ’ಸ್ಪೇಸ್ ನೀಡಲ್’, ನೋಡೀರೇನು ? ನೀವ್ ಬಿಟ್ರೂ, ಅದ್ ಬಿಡಂಗಿಲ್ರಿ ; ಎಲ್ಲೆಲ್ಲೂ ಕಾಣ್ಸತದ !

ಸಿಯಾಟಲ್ ನಾಗೆ ಅಡ್ಡಾಡಿ ಬರೋಣು ;ಹಾ, ’ಸ್ಪೇಸ್ ನೀಡಲ್’, ನೋಡೀರೇನು ? ನೀವ್ ಬಿಟ್ರೂ, ಅದ್ ಬಿಡಂಗಿಲ್ರಿ ; ಎಲ್ಲೆಲ್ಲೂ ಕಾಣ್ಸತದ !

ಬರಹ

ಈ ನಗರದಾಗೆ ಅಡ್ಡಾಡ್-ಬರ್ಲಿಕ್ಕೆ ಭಾಳ ಜಾಗಗಳವ ; ಪರಿಸರಗಳೂ ಅವ. ನೀರ್ನುದ್ದಕ್ಕೂ ಹೋಗಿನೋಡುದ್ ಒಂದು ಆದ್ರ, ವಾಹನ್ದಾಗ್ ಸೈರ್ ಮಾಡೂದ್ ಇನ್ನೊಂದ್ರಿ. ಅಕ್ವೇರಿಯಮ್ ಭೇಟಿ ಮಾಡ್ರಿ; ಮಕ್ಕಳ್ನ ಕರಕೊಂಡ್ ಹೋಗ್ಬನ್ರಿ. ಪಿಯರ್ ೫೨ ಪವರ್ ಹಡಗು ನಿಮಗೆದೊರೆಯುವ ಒಂದು ಸವಲತ್ತು. ಎಲಿಯಟ್ ಬೇ, ದಾಟಿ, ಬೇನ್ ಬ್ರಿಡ್ಜ್ (ವಾಶ್ ಆಂಡ್ ಐಲೆಂಡ್) ನಾಗ್ ನುಗ್ರಿ. ಫೆರ್ರಿ ಪ್ರಯಾಣ್ ದಾಗೆ ನಿಮ್ಗ ಒಲಿಂಪಿಕ್ ಪರ್ವತಗಳ ಶಿಖರ ಕೈಬೀಸಿ ಕರಿತಾವ. ಮುಂದ್ ಪೂರ್ವ ದಿಕ್ಕ್ ನಾಗ ಹಂಗೇ ಬೆಟ್ಟದ ಬದಿಗೆ ಹೋಗ್ರಿ. ’ಪೈಕ್ ಪ್ಲೇಸ್ ಮಾರ್ಕೆಟ್’ ನೋಡ್ತೀರಿ. ಇದು ಅಮೆರಿಕದ ಅತ್ಯ್ಂತ ಹಳೆಯ ಕೃಷಿಕರ ಮಾರುಕಟ್ಟೆ, ಹಾಗೂ ’ಸಿಯಾಟಲ್’ ನ ಒಂದು ಕುರ್ಹಾಗ್ ಈಗ್ಲೂ ಇಟ್ಟಾರ್ರಿ. ! ಇಲ್ಲಿ ಅಗದಿ ತಾಜ ಕಾಯಿ-ಪಲ್ಯಗಳು ಸಿಗ್ತಾವ. ಕಡಲ-ಆಹಾರವಸ್ತುಗಳು, ಉತ್ತರ-ಪಶ್ಚಿಮದ, ಕೈಕೆಲಸದ ಸಾಮಾನುಗಳು. ಸಾಧ್ಯವಾದ್ರೆ, ಹಾರುವ ಸಾಲೊಮನ್ ನ ಹಿಡೀರಿ ಬ್ಯಾಕಾದ್ರ !

ಇದೇ ಊರ್ನಾಗೇ ’ಸ್ಟಾರ್ ಬಕ್ಸ್’ ಅನ್ನೊ ಕಾಫಿ ಸ್ಟೋರ್ಸ್ ಇರೋದು. ವಿಶ್ವದಾಗೇ ಮೊದ್ಲು ಸುರುಮಾಡಿದ್ ಕಾಫೀ ಅಂಗ್ಡಿ ಅಂತೆ. ನೋಡ್ರಿ ನೀವೆ. ಬಗಲ್ನಾಗೆ ಸೆಂಟ್ರಲ್ ಲೈಬ್ರರಿ ಐತ್ರಿ. ಇದನ್ ಕಟ್ದೋನು ಡಚ್ ಇಂಜಿನಿಯರ್ ನಂತ್ರಿ. ಅಬ್ಬಬ, ಅದೇನ್ ಕಟ್ಯಾನ್ರಿ, ಸೂ....ಗ ! ಸ್ಟೀಲ್, ಗ್ಲಾಸ್ ನಾಗ ಪೂರ್ತಿ ಮನಿ ಕಟ್ಯಾನಂತ್ರಿ. ವೆಸ್ಟ್ ಲೇಕ್ ಸೆಂಟರ್ ಕಡಿ ಉತ್ತರಕ್ ಮಾರಿಮಾಡ್ರಿ ಮತ್ತ ; ಮಾನೋರೈಲ್ನಾಗೆ ಕುಂತ್ ಸಿಯಾಟಲ್ ಸೆಂಟರ್ ಕಡೆ ಹೋಗ್ರಿ.

ಸ್ಪೇಸ್ ನೀಡಲ್ ಹೆಸ್ರ್ನ ಕೇಳೀರೋ ಇಲ್ಲೋ ? ಇಲ್ಲೇ ಬಗಲ್ನಾಗ್ ಐತ್ ನೋಡ್ರಿ. ಪೆಸಿಫಿಕ್ ಸೈನ್ಸ್ ಸೆಂಟರ್ ಮತ್ತ ಬೋಯಿಂಗ್ ಅಂಡ್ ಯೀಮ್ಸ್ ಐಮ್ಯಾಕ್ಸ್ ಥಿಯೇಟರ್ ಇಲ್ಲೇ ಹತ್ರನ ಅವೆ. ಮಕ್ಳುಗೋಸ್ಕರ ಮ್ಯೂಸಿಯಮ್ ಐತ್ರಿ. ಇಲ್ ’ಮ್ಯೂಸಿಕ್ ಪ್ರಾಜಕ್ಟ್’,(ಇ.ಎಮ್.ಪಿ) ’ದ ಸೈನ್ಸ್ ಫಿಕ್ಷನ್ ಮ್ಯೂಸಿಯಮ್,’ ಮತ್ತ, ’ಹಾಲ್ ಆಫ್ ಫೇಮ್’, ನೋಡೋದ್ ಮರ್ತ್ ಗಿರ್ತೀರ. ಸ್ಪೇಸ್ ನೀಡಲ್ ಲಿಫ್ಟ್ ನಾಗೆ ಕುಂತು ಮೇಲ್ನವರ್ಗೂ ನಿಮ್ಜೋಡಿ ಮಕ್ಳ್ನ ಕರ್ಕೊಂಡ್ ಹೋಗ್ಬನ್ರಿ. ಸ್ಪೇಸ್ ನೀಡಲ್ ನಿಮ್ಗೆ ಎಲ್ಲ್ಹೋದ್ರು ಕಾಣ್ಸ್ತದೆ. ನೀವ್ ಬಿಟ್ರೂ ಅದ್ ನಿಮ್ಮನ್ ಬಿಡಂಗಿಲ್ರಿಯಪ್ಪ. ಸ್ಕೈ ಸಿಟಿ ರೆಸ್ಟೊರಂಟ್ ನಾಗೆ ತಿಂಡಿತಿನ್ರಿ. ೫೦೦ ಅಡಿ ಎತ್ರದಾಗೆ ಕಟ್ಟಿರೊ ಹೋಟೆಲ್ ನಾಗೆ ಸುತ್ಲೂ ೩೬೦ ಡಿಗ್ರಿ ಊರಿನ್ ದೃಷ್ಯ ಕಣ್ಣಿಗ್ ಕಾಣ್ಸ್ಲಿಕ್ಕೆ ಹತ್ತ್ತದ್ರಿ.

ಪುಜೆಟ್ ಸೌಂಡ್, ಒಲಿಂಪಿಕ್ ಮೌಂಟೆನ್ ಕ್ಯಾಸ್ಕೇಡ್ ಮೌಂಟೆನ್ಸ್, ಮೌಂಟ್ ರೇನಿಯರ್ ಸಹಿತ. ಏಡವ್ ಬಿದ್ರೆ, ಸೀಟಲ್ ಆರ್ಟ್ಸ್ ಮ್ಯೂಸಿಯೆಮ್ ಕಾಣ್ಸ್ತದ. ಹೊಸ್ದಾಗ್ ಕಟ್ತಿರೊ ಒಲಿಂಪಿಕ್ ಸ್ಕಲ್ಪಚರ್ ಪಾರ್ಕ್, ಇಲ್ಲೇ ಹಳೆ ನೈಬರ್ ಹುಡ್ ಕಾಣ್ಸ್ತದ. ಜೂನ್ ೬ ನೆ ತಾರೀಕ್ ೧೮೮೯ ನಾಗ ಸೀಟಲ್ ನ ಡೌನ್ ಟೌನ್ ನಾಗೆ ಬೆಂಕಿ ಹತ್ಕೊಂಡು ಅನಾಹುತ ಆಗಿತ್ತಂತ್ರಿ. ಅಲ್ಲಿನ್ ಹಿರಿಜನ್ರೆಲ್ರು ಮಾತಾಡ್ಕೊಂಡು, ಅಂಡರ್ ಗ್ರೌಂಡ್ ನಾಗೆ ಬಿದ್ಮನೆಗಳ್ ಜಾಗ್ದಾಗೆ, ಮನಿಕಟ್ಟೊ ಏರ್ಪಾಡ್ ಮಾಡಿದಾರ್ರಿ.

ರಸ್ತೆ ಲೆವೆಲ್ ಕೆಳ್ಗೆ ಕಟ್ಟಿರೋ ಜಾಗ್ದಾಗೆ ಒಂದ್ ದೊಡ್ ಶಹರ್ನೇ ತಯಾರ್ ಮಾಡಿದಾರ್ರಿ. -ನಾನೇ ಕಂಡಿದ್ದು ಕೇಳಿದ್ದು.