ಬೂಟಾಟಿಕೆ

Submitted by tvsrinivas41 on Wed, 08/17/2005 - 05:47
ಬರಹ
ಸಮಾಜದಿ ಇನ್ನೊಂದು ಪಿಡುಗಿನ ಬಗ್ಗೆ ನನ್ನ ಚಿಂತನೆ. ಇದರಿಂದ ಯಾರದೂ ಮನ ನೋಯುವುದಿಲ್ಲ ಎಂದು ನನ್ನ ಅನಿಸಿಕೆ. ಮನನೋಯುವಂತಿದ್ದರೆ ದಯವಿಟ್ಟು ತಿಳಿಸಿ - ಇದನ್ನು ತೆಗೆದಿಬಿಡುವೆ. ಜನಸಾಗರದಿ ಹಾದಿ ತೋರುವ ಅಧಿಪತಿ ದೇವರ ಅಪರಾವತಾರವೆನ್ನುವ ಮಠಾಧಿಪತಿ ದಿನಂಪ್ರತಿ ಜನಸಾಮಾನ್ಯರಿಗೆ ದಿವ್ಯದರ್ಶನ ಮ್ಯಾನೇಜರರು ಇವರಿಗೆ ತೋರಿಸುವರು ಲೋಕದರ್ಶನ ಜರಿಶಾಲು ಪಾದುಕೆಗಳ ತೊಟ್ಟವರ ದರ್ಬಾರು ಧರ್ಮದರ್ಶಿಗಳದೇ ಇಲ್ಲೆಲ್ಲಾ ಕಾರುಬಾರು ಎಲ್ಲರ ಮತಿಗಳಿಗೆ ಅಧ್ಯಾತ್ಮದ ಪ್ರವಚನ ಬಡವ ಬಲ್ಲಿದರಿಗೆ ತಕ್ಕಂಥ ಫಲದಾನ ಇಂದ್ರಜಾಲ ಮಾಯಾಜಾಲ ಇವರಿಗೆ ಲೀಲಾಜಾಲ ಸುಖದ ಸುಪ್ಪತ್ತಿಗೆ ತೋರಿಸುತಿಹುದು ತನ್ನ ಲೀಲ ಲೌಕಿಕ ಎಲ್ಲ ಬಿಟ್ಟ ನಿರಾಭರಣ ದೇವ ಧರ್ಮದರ್ಶಿಗಳ ಎದುರಿಸೆ, ಸೇರುವರು ದೈವ ದರ್ಶಿಗಳು ಹೇಳಿದಂತೆ ಕೇಳದಿರಲು ಇಳಿಯಬೇಕಾದೀತು ಬೃಂದಾವನದೊಳು ಜೀವನದಿ ಏಕೀ ಆಷಾಢಭೂತಿಯ ನಾಟಕ ಇವರಿಗೇ ಪ್ರತ್ಯೇಕವಾಗಿಹುದೇ ನಾಕ ನರಕ ಎಲ್ಲರಂತೆ ಇವರಲೂ ಇಹುದಲ್ಲವೇ ಆತ್ಮ ಇವರಿಗೆ ಮಾತ್ರ ಬೇರೆ ಪಂಕ್ತಿ ಇಟ್ಟಿಹನೇ ಪರಮಾತ್ಮ ಸಮಾಜದಿ ನಿಮ್ಮೊಳು ಕಾಣಿಹಿರೇ ನೀವು ಇಂಥವರನು ಇವರನು ನಾವೇನಂಥ ಹೆಸರಿಸಬಹುದು ಹೇಳಿ