ಮರುಪೂರಣ - ಹೀಗೊಂದು Case Study

ಮರುಪೂರಣ - ಹೀಗೊಂದು Case Study

ಬರಹ

ಮರುಪೂರಣದಿಂದ ಹತ್ತಡಿ ಏರಿದ ನೀರು (ಚಿತ್ರ: ನಾ. ಕಾರಂತ ಪೆರಾಜೆ)

ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ತಿಳಿದಷ್ಟು ನೀರಿನ ಬೆಲೆ ಬಹುಶಃ ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ. ಮಳೆಯಾಗಿ ಬಿದ್ದ ನೀರನ್ನು ಹರೆದು ಪೋಲಾಗಲು ಬಿಡದೆ ಅದನ್ನು ಬಳಸಿಕೊಂಡು ನೀರಿನ ಸದುಪಯೋಗಪಡೆಯುವುದು ಕಜೆಯವರು ನೆನಪಿಸುವಂತೆ "ನೀರ ನಿಶ್ಚಿಂತೆ". ಅಡಿಕೆ ಪತ್ರಿಕೆಯಲ್ಲಿ ಸಹಾಯ ಸಂಪಾದಕರಾಗಿ ಕೆಲಸ ಮಾಡುತ್ತಿರುವ ನಾ. ಕಾರಂತರು ಪುತ್ತೂರಿನ ಬಳಿ ಬಾವಿಗೆ ಮರುಪೂರಣ ಮಾಡಿದ್ದರ ದೃಷ್ಟಾಂತವೊಂದನ್ನು ನಮ್ಮೊಂದಿಗೆ ವಾಟರ್ ಪೋರ್ಟಲ್ಲಿನಲ್ಲಿ ಹಂಚಿಕೊಂಡಿದ್ದಾರೆ. ಓದಿ:

ಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.

೨೦೦೦ ಸುಮಾರಿಗೆ ಮೇ-ಜೂನ್‌ನಲ್ಲಿ ಬಾವಿ ಪೂರ್ತಿ ಬತ್ತಿತ್ತು. ಕುಡಿನೀರಿಗೂ ತತ್ವಾರ. ನೀರಿನಾಪತ್ತಿನಲ್ಲಿ ನೀರೊದಗಿಸುತ್ತಿದ್ದ ವೆಲಾರಿಯನ್ ಡಿಸೋಜ ಅವರ ಬಾವಿಯಲ್ಲೂ ನೀರು ತಳಕಾಣುತ್ತಿತ್ತು. ಆಗ ನೆರವಿಗೆ ಬಂದವರು ಆದರ್ಶ ಆಸ್ಪತ್ರೆಯ ಡಾ.ಪ್ರಸಾದ ಭಂಡಾರಿ. ತಮ್ಮ ಆಸ್ಪತ್ರೆಯ ಕೊಳವೆ ಬಾವಿಯಿಂದ ನೀರು ಬಳಸಲು ಅವಕಾಶ. ಆಸ್ಪತ್ರೆಗೂ ಮನೆಗೂ ಸುಮಾರು ಒಂದು ಫಲಾಂಗ್ ದೂರ. ಇಷ್ಟು ದೂರ ಪೈಪ್ ತರುವುದೆಂದರೆ ದುಬಾರಿ. ಸುಮಾರು ಅರ್ಧ ದೂರದ ತನಕ ಪೈಪಲ್ಲಿ ನೀರು ತಂದು, ಅಲ್ಲಿಂದ ಮನೆಮಂದಿ ಎಲ್ಲರಿಂದಲೂ ಕರಸೇವೆ! ಪಾತ್ರೆಪಗಡಿಗಳಲ್ಲಿ ಸಂಗ್ರಹ.

ಲೇಖನದ ಉಳಿದ ಭಾಗ »

.
("ಕನ್ನಡದಲ್ಲಿ ವಾಟರ್ ಪೋರ್ಟಲ್" ಯೋಜನೆ ಸಂಪದ ಫೌಂಡೇಶನ್ನಿನ ಸಹಯೋಗದಿಂದ ಮೂಡಿ ಬರುತ್ತಿದೆ.)