ಓಪನ್ ಡೆಕ್ ಡಬಲ್ ಡೆಕ್ಕರ್ ಬಸ್ ನಲ್ಲೇ, ನಾವು ಸ್ಯಾನ್ ಫ್ರಾನ್ಸಿಸ್ಕೋ ನಗರದ, ಸುಮಾರುಭಾಗಗಳನ್ನು ನೋಡಿಆನಂದಿಸಬಹುದು !

ಓಪನ್ ಡೆಕ್ ಡಬಲ್ ಡೆಕ್ಕರ್ ಬಸ್ ನಲ್ಲೇ, ನಾವು ಸ್ಯಾನ್ ಫ್ರಾನ್ಸಿಸ್ಕೋ ನಗರದ, ಸುಮಾರುಭಾಗಗಳನ್ನು ನೋಡಿಆನಂದಿಸಬಹುದು !

ಬರಹ

ಪ್ರತಿದಿನ ನಗರ ಪರ್ಯಟನೆಗೆ, ಸಕಲವಿಧವಾದ ಸೌಕರ್ಯಗಳು ಇವೆ. ಟ್ರಾಮ್ ಗಳು, ಟಾಂಗಾಗಾಡಿಗಳು, ಎಲೆಕ್ಟ್ರಿಕ್ ಬಸ್ ಗಳು, ಖಾಸಗೀವಾಹನಗಳು, ಸೈಕಲ್ ಗಳು, ಎಲ್ಲವೂ ಲಭ್ಯ. ನಡೆದೋ ಸ್ಕೇಟ್ ಮಾಡುತ್ತಲೋ ಸಾಗುವ ಎಳೆಯರ ಸಂಖ್ಯೆಗೇನೂ ಕಡಿಮೆಯಿಲ್ಲ.

’ಫಿಶರ್ಮ್ಯಾನ್ಸ್ ವಾರ್ಫ್,’ ನಿಂದ ಆರಂಭವಾಗಿ ಸಾಗುವ ಪುಟ್ಟನಗರದ ವಾಹನಗಳು, ಚೈನಟೌನ್, ಕಾಯಿಟ್ ಟವರ್, ಎಲ್ಲಾ ಸುತ್ತಿಕೊಂಡು ಬರುತ್ತವೆ. ಎಲ್ಲವರ್ಗದ ಜನರಿಗೂ ಅನುಕೂಲವಾಗುವಂತೆ ಏರ್ಪಾಡುಮಾಡಲಾಗಿದೆ. ಆನ್ ಲೈನ್ ಬುಕಿಂಗ್ ಮಾಡಿದರೆ, ವಾಹನಗಳ ಕ್ರಯಗಳುಸೋವಿ. ೩ ತಿಂಗಳು ಮೊದಲೇ ಬುಕ್ ಮಾಡುವ ವ್ಯವಸ್ಥೆಯಿದೆ.

ಇಲ್ಲಿನ ಕಾರ್ ಪಾರ್ಕಿಂಗ್ ನಿಂದಲೇ ಮಿಲಿಯಗಟ್ಟಲೆ ಹಣಬರುವುದಂತೆ. ಊರಿನ ಮುಖ್ಯ ಉದ್ಯೋಗ ಟೂರಿಸಂ ! ಲೆವಿಸ್ಟ್ರಾಸ್ ಅಂಗಡಿ, ಮೇಣದಮ್ಯೂಸಿಯಂ, ಮುಂತಾದಪ್ರದೇಶಗಳನ್ನೆಲ್ಲ ಸುತ್ತಿ, ಕೊನೆಗೆ ಫೆರ್ರಿಯಲ್ಲಿ ಒಂದುಮುಕ್ಕಾಲು ಗಂಟೆ ಸಮುದ್ರದ ನೀರಿನಲ್ಲಿ ಪ್ರಯಾಣಿಸಿ, ಆಲ್ಕಟ್ರಾಸ್ ಕೈದಿಗಳ-ಸೆರೆಮನೆಯನ್ನೊಳಗೊಂಡ ದ್ವೀಪ, ಏಂಜೆಲ್ ಐಲೆಂಡ್, ಹಾಗೂ ಗೋಲ್ಡನ್ ಬ್ರಿಡ್ಜ್ ಕೆಳಗೆ, ಮಾಡುವ ಯಾನ ಅವಿಸ್ಮರಣೀಯ !

ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ಅಡ್ಡವಿದೆ. ಬೇಸಿಗೆಯಲ್ಲಿ ಪರ್ಯಟಕರ ಸಂಖ್ಯೆ ಅಪಾರ. ಸ್ಯಾನ್ ಹೊಸೆ ವಿಮಾನನಿಲ್ದಾಣ, ಇಲ್ಲಿಗೆ ಸುಮಾರು ಒಂದುಗಂಟೆಯ ಕಾರ್ ಡ್ರೈವ್ ನಷ್ಟು ದೂರ. ಸ್ಯಾನ್ ಹೋಸೆಯಿಂದ ವಿಮಾನದಲ್ಲಿ ಸುಮಾರು ಒಂದುಗಂಟೆ ಪ್ರಯಾಣಮಾಡಿ, ಆರೇಂಜ್ ಕೌಂಟಿಯಲ್ಲಿದ್ದ ನಮ್ಮ ಮನೆಯನ್ನು ನಾವು ಸುಮಾರು ರಾತ್ರಿ ೧೦ ಗಂಟೆಗೆ, ತಲುಪಿದೆವು.

ಸಾನ್ ಫ್ರಾನ್ಸಿಸ್ಕೋ ನಗರದಲ್ಲಿ ಮಾಡಿದ ಶಾಪಿಂಗ್, ಹಯೆಟ್ ಹೋಟೆಲಿನಲ್ಲಿನ ಆತಿಥ್ಯ , ಹಾಗೂ, ಕೆಲವು ಭಾರತೀಯ ಮಿತ್ರರ ಮಿಲನಗಳಿಂದ ನಮಗೆ ಒಂದು ಹೊಸ ಅನುಭವ ದೊರಕಿತ್ತು .